For Quick Alerts
  ALLOW NOTIFICATIONS  
  For Daily Alerts

  ಡಿಂಪಲ್ ಕ್ವೀನ್ ಮನೆಯಲ್ಲಿ 'ಗಟ್ಟಿಮೇಳ': ನಿತ್ಯ ರಾಮ್ ಗೆ ಕೂಡಿ ಬಂತು ಕಂಕಣ ಬಲ

  |

  ಸ್ಯಾಂಡಲ್ ವುಡ್ ನಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಇತ್ತೀಚೆಗಷ್ಟೇ ಕನ್ನಡ ರಾಪರ್ ಚಂದನ್ ಶೆಟ್ಟಿ-ನಿವೇದಿತಾ ಗೌಡ ನಿಶ್ಚಿತಾರ್ಥ ನಡೆಯಿತು. ನಟ ಕಮ್ ರಾಪರ್ ಅಲೋಕ್ ಬಾಬು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ನಟ ರಿಷಿ ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟರು.

  ಇನ್ನೂ ಕಿರುತೆರೆ ಲೋಕದಲ್ಲಿ 'ಕುಲವಧು' ಧಾರಾವಾಹಿ ಖ್ಯಾತಿಯ ದೀಪಿಕಾ ಮತ್ತು 'ಅಗ್ನಿಸಾಕ್ಷಿ' ಧಾರಾವಾಹಿ ಖ್ಯಾತಿಯ ಇಶಿತಾವರ್ಷ ಮೊನ್ನೆಮೊನ್ನೆಯಷ್ಟೇ ಹೊಸ ಜೀವನ ಆರಂಭಿಸಿದ್ದಾರೆ. ಇದೀಗ ಇದೇ ಲಿಸ್ಟ್ ಗೆ ಸೇರಲು ಕಿರುತೆರೆ ನಟಿ ನಿತ್ಯ ರಾಮ್ ಸಜ್ಜಾಗಿದ್ದಾರೆ.

  ಹೌದು, ಮುಂದಿನ ತಿಂಗಳು ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಯಲ್ಲಿ ಗಟ್ಟಿಮೇಳ ಸದ್ದು ಕೇಳಿಬರಲಿದೆ. ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ವಿವಾಹ ಮಹೋತ್ಸವ ಡಿಸೆಂಬರ್ ನಲ್ಲಿ ನಡೆಯಲಿದೆ. ಮುಂದೆ ಓದಿರಿ..

  ನಿತ್ಯ ರಾಮ್ ಗೆ ಕಂಕಣ ಬಲ ಕೂಡಿ ಬಂದಿದೆ

  ನಿತ್ಯ ರಾಮ್ ಗೆ ಕಂಕಣ ಬಲ ಕೂಡಿ ಬಂದಿದೆ

  ಡಿಂಪಲ್ ಕ್ವೀನ್ ರಚಿತಾ ರಾಮ್ ಮದುವೆ ಆಗ್ತಾರಂತೆ ಎಂಬ ಅಂತೆ-ಕಂತೆ ಸುದ್ದಿ ಇಲ್ಲಿಯವರೆಗೂ ರೆಕ್ಕೆ-ಪುಕ್ಕ ಕಟ್ಟಿಕೊಂಡು ಗಾಂಧಿನಗರದ ತುಂಬೆಲ್ಲಾ ಹಾರಾಡಿತ್ತು. ಆದ್ರೀಗ, ರಚಿತಾ ರಾಮ್ ಬದಲು ಸಹೋದರಿ ನಿತ್ಯ ರಾಮ್ ಮದುವೆ ವಿಚಾರ ಸದ್ದು ಮಾಡುತ್ತಿದೆ. ಮುಂದಿನ ತಿಂಗಳು... ಅಂದ್ರೆ ಡಿಸೆಂಬರ್ 5-6 ರಂದು ನಿತ್ಯ ರಾಮ್ ಮದುವೆ ವಿಜೃಂಭಣೆಯಿಂದ ನಡೆಯಲಿದೆ.

  ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.?ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.?

  ಹುಡುಗ ಯಾರು.?

  ಹುಡುಗ ಯಾರು.?

  ಸದ್ಯಕ್ಕೆ ನಿತ್ಯ ರಾಮ್ ಮದುವೆ ದಿನಾಂಕ ಮಾತ್ರ ಬಹಿರಂಗವಾಗಿದೆ. ನಿತ್ಯ ರಾಮ್ ಕೈಹಿಡಿಯುತ್ತಿರುವ ಹುಡುಗ ಯಾರು ಎಂಬುದು ತಿಳಿದುಬಂದಿಲ್ಲ. ಮೂಲಗಳ ಪ್ರಕಾರ, ನಿತ್ಯ ರಾಮ್ ಮದುವೆ ಆಗುತ್ತಿರುವ ಹುಡುಗ ಉದ್ಯಮಿ. ಆಸ್ಟ್ರೇಲಿಯಾದಲ್ಲಿ ಆತ ಸೆಟೆಲ್ ಆಗಿದ್ದಾರೆ ಎಂಬ ಮಾಹಿತಿಯಷ್ಟೇ ಲಭ್ಯವಾಗಿದೆ.

  ''ಗೌಡರ ಹುಡುಗನನ್ನೇ ಮದುವೆ ಆಗುವೆ'' ಎಂದು ನಸುನಕ್ಕ ರಚಿತಾ ರಾಮ್.!''ಗೌಡರ ಹುಡುಗನನ್ನೇ ಮದುವೆ ಆಗುವೆ'' ಎಂದು ನಸುನಕ್ಕ ರಚಿತಾ ರಾಮ್.!

  ರಚಿತಾಗೆ ಖುಷಿಯೋ ಖುಷಿ

  ರಚಿತಾಗೆ ಖುಷಿಯೋ ಖುಷಿ

  ಸಹೋದರಿ ನಿತ್ಯ ರಾಮ್ ಮದುವೆ ನಡೆಯುತ್ತಿರುವುದಕ್ಕೆ ನಟಿ ರಚಿತಾ ರಾಮ್ ಅಂತೂ ಸಖತ್ ಖುಷಿಯಾಗಿದ್ದಾರೆ. ಮದುವೆ ತಯಾರಿಯಲ್ಲಿ ಈಗಾಗಲೇ ರಚಿತಾ ರಾಮ್ ತೊಡಗಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಮತ್ತು ಕಿರುತೆರೆ ಲೋಕದ ಗಣ್ಯರನ್ನ ಮದುವೆಗೆ ಆಹ್ವಾನಿಸಲು ರಚಿತಾ ರಾಮ್ ಓಡಾಡುತ್ತಿದ್ದಾರೆ.

  ನಿತ್ಯ ರಾಮ್ ಕುರಿತು...

  ನಿತ್ಯ ರಾಮ್ ಕುರಿತು...

  ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಟಿ ನಿತ್ಯ ರಾಮ್. 'ಬೆಂಕಿಯಲ್ಲಿ ಅರಳಿದ ಹೂವು', 'ಕರ್ಪೂರದ ಗೊಂಬೆ', 'ರಾಜಕುಮಾರಿ', 'ಎರಡು ಕನಸು', ನಂದಿನಿ' ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಬರೀ ಕನ್ನಡ ಮಾತ್ರ ಅಲ್ಲ.. ತೆಲುಗಿನ 'ಮುದ್ದು ಬಿಡ್ಡ', ತಮಿಳಿನ 'ಅವಳ್' ಧಾರಾವಾಹಿಗಳಲ್ಲೂ ನಿತ್ಯ ಮಿಂಚಿದ್ದಾರೆ. ಕನ್ನಡದ 'ಮುದ್ದು ಮನಸು' ಸಿನಿಮಾದಲ್ಲೂ ನಿತ್ಯ ರಾಮ್ ಅಭಿನಯಿಸಿದ್ದಾರೆ.

  English summary
  Kannada Actress Rachita Ram sister, TV Actress NIthya Ram is getting married on December 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X