For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆಗೆ ಚಂದನ್ ಶೆಟ್ಟಿ, ನಿವೇದಿತಾ ಗೌಡ: ಭೇಟಿ ಹಿಂದಿನ ರಹಸ್ಯ ಏನು.?

  |
  ಡಿ ಬಾಸ್ ಬಗ್ಗೆ ಬಂದನ್ ಶೆಟ್ಟಿ ನಿವೇದಿತಾ ಹೇಳಿದ್ದೇನು ನೋಡಿ | Darshan | Chandan Shetty | Nivedita Gowda

  ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನ ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿ ಮಾಡಿದ್ದಾರೆ. ಡಿ-ಬಾಸ್ ದರ್ಶನ್ ರನ್ನ ಮೀಟ್ ಮಾಡಿದಾಗ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ''ನೀವೊಂದು (ದರ್ಶನ್) ಅಮೂಲ್ಯವಾದ ರತ್ನ'' ಎಂದು ದರ್ಶನ್ ಜೊತೆಗಿನ ಫೋಟೋದೊಂದಿಗೆ ನಿವೇದಿತಾ ಗೌಡ ಬರೆದುಕೊಂಡಿದ್ದರೆ, ''ಡಿ-ಬಾಸ್ ... ಒಬ್ಬ ಅದ್ಭುತ ವ್ಯಕ್ತಿ ಮತ್ತು ವ್ಯಕ್ತಿತ್ವ'' ಎಂದು ಚಂದನ್ ಶೆಟ್ಟಿ ಕ್ಯಾಪ್ಷನ್ ಕೊಟ್ಟಿದ್ದಾರೆ.

  ಅಸಲಿಗೆ, ದಿಢೀರ್ ಅಂತ 'ದಾಸ' ದರ್ಶನ್ ರನ್ನ ಇವರಿಬ್ಬರು ಭೇಟಿ ಮಾಡಿದ್ದು ಯಾಕೆ.? ಇದರ ಹಿಂದಿನ ರಹಸ್ಯ ಏನು.?

  ಮದುವೆಗೆ ಆಹ್ವಾನ ನೀಡಲು ಹೋಗಿದ್ರಾ ಚಂದನ್ ಶೆಟ್ಟಿ-ನಿವೇದಿತಾ.?

  ಮದುವೆಗೆ ಆಹ್ವಾನ ನೀಡಲು ಹೋಗಿದ್ರಾ ಚಂದನ್ ಶೆಟ್ಟಿ-ನಿವೇದಿತಾ.?

  ಇದೇ ತಿಂಗಳು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ನಡೆಯಲಿದೆ. ಹೀಗಾಗಿ, ಮದುವೆಗೆ ಆಹ್ವಾನ ನೀಡಲು ದರ್ಶನ್ ಮನೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿ ಕೊಟ್ಟಿದ್ರಾ.? ಎಂಬ ಡೌಟ್ ಅಭಿಮಾನಿಗಳನ್ನು ಕಾಡುತ್ತಿದೆ.

  ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?ಚಂದನ್ ಶೆಟ್ಟಿ-ನಿವೇದಿತಾ ಗೌಡ ಮದುವೆ ದಿನಾಂಕ ನಿಗದಿ: ಎಲ್ಲಿ, ಯಾವಾಗ.?

  ಮದುವೆ ಯಾವಾಗ.?

  ಮದುವೆ ಯಾವಾಗ.?

  'ಬಿಗ್ ಬಾಸ್' ಮನೆಯಲ್ಲಿ ಪರಿಚಯವಾಗಿ, ಹೊರಗೆ ಬಂದ ಮೇಲೆ ಪ್ರೇಮಿಗಳಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮದುವೆ ದಿನಾಂಕ ಫಿಕ್ಸ್ ಆಗಿದೆ. ಇದೇ ತಿಂಗಳು (ಫೆಬ್ರವರಿ) 25 ಮತ್ತು 26 ರಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಜರುಗಲಿದೆ.

  ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ 'ಗೊಂಬೆ' ನಿವೇದಿತಾ.!ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಕೆಲಸಕ್ಕೆ ಸೇರಿದ 'ಗೊಂಬೆ' ನಿವೇದಿತಾ.!

  ಮದುವೆ ಎಲ್ಲಿ.?

  ಮದುವೆ ಎಲ್ಲಿ.?

  ನಿವೇದಿತಾ ಗೌಡ ಮೂಲತಃ ಮೈಸೂರಿನವರು. ಹೀಗಾಗಿ, ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯಲಿದೆ.

  10 ವರ್ಷ ಅಂತರ.!

  10 ವರ್ಷ ಅಂತರ.!

  ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವೆ 10 ವರ್ಷಗಳ ವಯಸ್ಸಿನ ಅಂತರ ಇದೆ. ಕನ್ನಡ ರಾಪರ್ ಚಂದನ್ ಶೆಟ್ಟಿಗೆ 30 ವರ್ಷ. ಆದ್ರೆ, ನಿವೇದಿತಾ ಗೌಡಗೆ ಇನ್ನೂ 20 ರ ಹರೆಯ. ವಯಸ್ಸಿನ ಅಂತರ ಏನೇ ಇದ್ದರೂ, ಪ್ರೀತಿಯಲ್ಲಿ ಮುಳುಗಿರುವ ಈ ಜೋಡಿ ಅತಿ ಶೀಘ್ರದಲ್ಲಿ ದಾಂಪತ್ಯ ಬದುಕಿಗೆ ಕಾಲಿಡಲಿದ್ದಾರೆ.

  English summary
  Niveditha Gowda and Chandan Shetty meets Challenging Star Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X