For Quick Alerts
  ALLOW NOTIFICATIONS  
  For Daily Alerts

  ಚಂದನ್ ಶೆಟ್ಟಿ ದುಡ್ಡಲ್ಲಿ ಮಜಾ ಮಾಡ್ತಿದ್ದೀಯಾ ಅಂದವ್ರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ!

  By ಫಿಲ್ಮಿಬೀಟ್ ಡೆಸ್ಕ್
  |

  ನಿವೇದಿತಾ ಗೌಡ ಬಿಗ್ ಬಾಸ್ ಮನೆಗೆ ಹೋಗಿ ಬರುತ್ತಿದ್ದಂತೆ ಪುಲ್ ಫೇಮಸ್ ಆಗಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಸದಾ ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್ ಆಗಿರುತ್ತಾರೆ. ಏನಾದರೂ ಒಂದು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

  ಬಿಗ್ ಬಾಸ್ ಮನೆಯಿಂದಲೇ ಪ್ರಣಯ ಪಕ್ಷಿಗಳಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಿರೀಕ್ಷೆಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಲ್ಲಿಂದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷ ಆಗುತಲೇ ಇರುತ್ತಾರೆ.

  ಎಲ್ಲರೂ ಪ್ರಗ್ನೆಂಟಾ ಅಂತ ಕೇಳ್ತಾರೆ, ನಾನು ಹೊಟ್ಟೆ ಮುಟ್ಟಿ ನೋಡಿಕೊಳ್ಳುತ್ತೀನಿ: ನಿವೇದಿತಾ ಗೌಡಎಲ್ಲರೂ ಪ್ರಗ್ನೆಂಟಾ ಅಂತ ಕೇಳ್ತಾರೆ, ನಾನು ಹೊಟ್ಟೆ ಮುಟ್ಟಿ ನೋಡಿಕೊಳ್ಳುತ್ತೀನಿ: ನಿವೇದಿತಾ ಗೌಡ

  ಸದ್ಯ ನಿವೇದಿತಾ ಗೌಡ ವಿದೇಶ ಪ್ರವಾಸದಲ್ಲಿದ್ದಾರೆ. ಒಂಟಿಯಾಗಿ 'ಬಾಲಿ'ಗೆ ಹೋಗಿರೋ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾಗಳಲ್ಲಿ ಅಲ್ಲಿನ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಫೋಟೊಗಳಿಗೆ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಿವೇದಿತಾ ಫುಲ್ ಗರಂ ಆಗಿದ್ದಾರೆ.

  'ನಿವೇದಿತಾ ಗೌಡ ಸೋಲೊ ಟ್ರಿಪ್'

  'ನಿವೇದಿತಾ ಗೌಡ ಸೋಲೊ ಟ್ರಿಪ್'

  ಈಗಂತೂ ಮಹಿಳೆಯರು ಒಬ್ಬೊಬ್ಬರೇ ದೇಶ-ವಿದೇಶ ಸುತ್ತುತ್ತಾರೆ. ತಾವೇ ದುಡಿದ ಹಣದಲ್ಲಿ ದೇಶಗಳನ್ನು ಸುತ್ತಿಬರೋದು ಲೆಟೆಸ್ಟ್ ಟ್ರೆಂಡ್ ಆಗಿಬಿಟ್ಟಿದೆ. ಹೀಗೆ ನಿವೇದಿತಾ ಕೂಡ ಬಾಲಿ ಪ್ರವಾಸ ಮಾಡಲು ಮುಂದಾಗಿದ್ದರು. ವಿವಾಹದ ಬಳಿಕ ನಿವೇದಿತಾ ಇದೇ ಮೊದಲ ಬಾರಿಗೆ ಚಂದನ್ ಬಿಟ್ಟು ಒಂಟಿಯಾಗಿ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿನ ಫೇಮಸ್ ಸ್ಥಳಗಳಲ್ಲಿ ನಿವೇದಿತಾ ಗೌಡ ಪೋಸ್ ನೀಡುತ್ತಿದ್ದಾರೆ. ಈ ಫೋಟೊಗಳನ್ನು ಎಂದಿನಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದಕ್ಕೆ ಕೆಲವರು ಚಂದನ್ ಶೆಟ್ಟಿ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಅನ್ನೋ ಅರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಈ ಕಾರಣಕ್ಕೆ ನಿವೇದಿತಾ ಫುಲ್ ಗರಂ ಆಗಿದ್ದಾರೆ.

  ಸಿಟ್ಟಿಗೆದ್ದ ನಿವೇದಿತಾ ಗೌಡ!

  ಸಿಟ್ಟಿಗೆದ್ದ ನಿವೇದಿತಾ ಗೌಡ!

  ರಿಯಾಲಿಟಿ ಶೋ ಮುಗಿಸಿ ನಿವೇದಿತಾ ಗೌಡ ತಮ್ಮ ಲೈಫ್‌ನ ಸೋಲೊ ಟ್ರಿಪ್ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿನ ಸುಂದರ ಪ್ರದೇಶಗಳಲ್ಲಿ ರಾಣಿಯಂತೆ ಸೋಲೊ ಗೆಟಪ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಈ ಫೋಟೊಗಳಲ್ಲಿ ಒಂಟಿಯಾಗಿ ಕಂಡಿದ್ದ ನಿವೇದಿತಾಗೆ ಕಿಡಿಗೇಡಿಗಳು ಕಮೆಂಟ್ ಮಾಡಿದ್ದಾರೆ. ಫೋಟೊ ತೆಗೆಯುತ್ತಿರೋರು ಯಾರು? ಚಂದನ್ ಶೆಟ್ಟಿ ದುಡ್ಡಲ್ಲಿ ಮಜಾ ಮಾಡುತ್ತಿದ್ದೀರಾ? ಅಂತೆಲ್ಲಾ ಕಮೆಂಟ್ ಮಾಡಿದ್ದರು. ಇದು ನಿವೇದಿತಾ ಗೌಡ ಸಿಟ್ಟಿಗೇಳುವಂತೆ ಮಾಡಿದೆ. ಅದಕ್ಕೆ ಇನ್‌ಸ್ಟಾಗ್ರಾಂನಲ್ಲಿ ಮಾರುದ್ದ ಮೆಸೇಜ್ ಮಾಡಿದ್ದಾರೆ.

  ನಿವೇದಿತಾ ಪೋಸ್ಟ್‌ನಲ್ಲಿ ಹೇಳಿದ್ದೇನು?

  ನಿವೇದಿತಾ ಪೋಸ್ಟ್‌ನಲ್ಲಿ ಹೇಳಿದ್ದೇನು?

  " ಎಲ್ಲಾ ಕಮೆಂಟ್‌ಗಳಿಗೆ ಉತ್ತರ ನೀಡಬೇಕು ಅಂದೇನೂ ಇಲ್ಲ. ಆದರೆ, ಕೆಲವರಿಗೆ ಸಾಮಾನ್ಯ ಜ್ಞಾನ ಕೂಡ ಇಲ್ಲ. ಫೋಟೊಗಳನ್ನು ಕ್ಲಿಕ್ಕಿಸಲು ಸೈಟ್‌ನಲ್ಲಿ ಪಾವತಿಸುವ ಫೋಟೊಗ್ರಾಫರ್‌ಗಳು ಇರುತ್ತಾರೆ. ದಯವಿಟ್ಟು ಪ್ರಯಾಣ ಮಾಡಿ, ದೇಶವನ್ನು ಸುತ್ತಿ. ನೀವು ಮಲಗುವ ಕೋಣಿಯೊಳಗೆ ಸಿಕ್ಕಿಕೊಂಡು ಚೀಪ್ ಕಮೆಂಟ್‌ಗಳನ್ನು ಮಾಡುವುದನ್ನು ಬಿಟ್ಟು ರಿಯಾಲಿಟಿ ತಿಳಿಯಿರಿ. ಹಲವು ಸಂದರ್ಭಗಳಲ್ಲಿ ಹುಡುಗರು ಸೋಲೊ ಟ್ರಿಪ್ ಮಾಡುವಾಗ ಆಗ ಸಮಸ್ಯೆ ಹುಡುಗಿ ಮಾಡುವಾಗ ಯಾಕೆ ಆಗುತ್ತೆ ಅನ್ನೋದು ತಿಳಿಯುತ್ತಿಲ್ಲ. ನಾನೊಬ್ಬ ಸ್ವತಂತ್ರ ಮಹಿಳೆ. ನಾನೂ ಕೆಲಸ ಮಾಡುತ್ತೇನೆ. ನಾನೂ ದುಡಿಯುತ್ತೇನೆ. ಎಲ್ಲೂ ನನ್ನ ಗಂಡನ ಹಣವನ್ನು ನಾನು ವ್ಯರ್ಥ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಮಹಿಳೆಗೆ ತನ್ನ ಅಗತ್ಯಗಳನ್ನು ನೋಡಿಕೊಳ್ಳುವ ಸಾಮರ್ಥ್ಯವಿದೆ. ಒಂದು ವೇಳೆ ಅವರೇ ಹಣ ಖರ್ಚು ಮಾಡಿದ್ದರೂ, ಅದು ನಿಮಗೆ ಬೇಡದೇ ಇರೋ ವಿಷಯ." ಎಂದು ಕಮೆಂಟ್ ಮಾಡಿದ್ದಾರೆ.

  ನಿವೇದಿತಾ ರಿಯಾಲಿಟಿ ಶೋ

  ನಿವೇದಿತಾ ರಿಯಾಲಿಟಿ ಶೋ

  ನಿವೇದಿತಾ ಗೌಡ ವಿವಾಹದ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ಗಿಚ್ಚಿ ಗಿಲಿ ಗಿಲಿ' ಅನ್ನೋ ರಿಯಾಲಿಟಿ ಶೋಗಳನ್ನು ಮುಗಿಸಿ ನಿವೇದಿತಾ ಎಂಜಾಯ್ ಮಾಡುವುದಕ್ಕೆ ವಿದೇಶಕ್ಕೆ ಹಾರಿದ್ದಾರೆ.

  English summary
  Niveditha Gowda Angry On Bad Comments For Her Solo Trip To Bali, Know More.
  Friday, November 25, 2022, 19:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X