For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಜೊತೆ ರಾಜಿ ಆದರೆ ಕಾನೂನು ಹೋರಾಟ ನಿಲ್ಲಲ್ಲ: ಉಮಾಪತಿ

  |

  ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನಿಸಿದ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ ನಂತರ ನಡೆದ ಬೆಳವಣಿಗೆಗಳಲ್ಲಿ ಉಮಾಪತಿ ಅವರದ್ದು ತಪ್ಪಿಲ್ಲ ಎಂಬುದು ಬಹುಮಟ್ಟಿಗೆ ಮನವರಿಕೆ ಆಗಿದ್ದು, ನಟ ದರ್ಶನ್ ಸಹ ಉಮಾಪತಿ ಅವರನ್ನು ಆಲಿಂಗಿಸಿಕೊಂಡು ಪ್ರಕರಣಕ್ಕೆ ಅಂತ್ಯ ಹಾಡುವ ಸೂಚನೆ ನೀಡಿದ್ದರು.

  ನಿನ್ನೆ ಸಂಜೆ ದರ್ಶನ್ ಅವರನ್ನು ಭೇಟಿ ಮಾಡಿದ ನಂತರ ಇಂದು ಬೆಳಿಗ್ಗೆ ಬನಶಂಕರಿ ದೇವಾಲಯಕ್ಕೆ ಭೇಟಿ ನೀಡಿದ ನಿರ್ಮಾಪಕ ಉಮಾಪತಿ, ಮಾಧ್ಯಮದವರೊಟ್ಟಿಗೆ ಮಾತನಾಡಿ, ''ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ . ದರ್ಶನ್ ಸರ್ ಹೇಳಿದ್ದಾರೆ ನಮ್ಮ ನಿರ್ಮಾಪಕರನ್ನು ಬಿಟ್ಟುಕೊಂಡಲ್ಲ ಅಂತ. ಕಾನೂನು ಮೂಲಕ ಹೋರಾಟ ಮುಂದುವರೆಸುತ್ತೀನಿ. ಬನಶಂಕರಿ ಅಮ್ಮ ನ ನಂಬಿ ಬಂದಿದ್ದೀನಿ. ಎಲ್ಲ ವಿಷಯಗಳೂ ಕಾನೂನು ಚೌಕಟ್ಟಿನಲ್ಲಿಯೇ ಪೂರ್ಣವಾಗಲಿ'' ಎಂದಿದ್ದಾರೆ ಉಮಾಪತಿ.

  ದರ್ಶನ್-ಉಮಾಪತಿ ಪ್ರಕರಣದ 'ಲೇಡಿ'ಯ ಮತ್ತೊಂದು 'ದೋಖಾ' ಬಯಲುದರ್ಶನ್-ಉಮಾಪತಿ ಪ್ರಕರಣದ 'ಲೇಡಿ'ಯ ಮತ್ತೊಂದು 'ದೋಖಾ' ಬಯಲು

  ''ಅರುಣಾಕುಮಾರಿ ಪ್ರೇಸ್ ಮಿಟ್ ಮಾಡಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಕಂಪ್ಲೇಟ್ ಕೊಟ್ಟಿರೋದು ಕಾನೂನು ವ್ಯವಸ್ಥೆಯಲ್ಲಿ, ನಾನು ಏನೇ ಆರೋಪ ಮಾಡಿದರೂ ದಾಖಲೆ ಕೇಳಿತ್ತೀರಾ, ಅವರ ಹತ್ತರ ಯಾಕೆ ದಾಖಲೆ ಕೇಳ್ತಿಲ್ಲ. ನಾನು ನೇರವಾಗಿರೋ ವ್ಯಕ್ತಿ, ನಾನು ಕಳ್ಳ ಅಲ್ಲ ನೇರವಾಗಿ ಮಾತನಾಡುತ್ತೇನೆ, ನಿಜ ಹೇಳಬೇಕೆಂದರೆ ಆಕೆ ನನಗೆ ಲೆಕ್ಕಕಿಲ್ಲ ಅವರ ಹತ್ತರ ಏನೇ ದಾಖಲೆ ಇದ್ರು ತೆಗೆದುಕೊಳ್ಳಿ ನೀವೇ ಪರಾಮರ್ಶೆ ಮಾಡಿ'' ಎಂದಿದ್ದಾರೆ ಉಮಾಪತಿ.

  ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ: ಉಮಾಪತಿ

  ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ: ಉಮಾಪತಿ

  ''ನಾನು ತಪ್ಪು ಮಾಡಿದ್ದರೆ ಮೈಸೂರು ಸಿಸಿಬಿ ಕಚೇರಿಗೆ ಹೋಗುತ್ತಿರಲಿಲ್ಲ. ಪ್ರೇಸ್ ಮಿಟ್ ಮಾಡುತ್ತಿರಲಿಲ್ಲ, ಈಗ ಏನೇ ಮಾಡಿದರು ಕಾನೂನು ಮೂಲಕನೇ ಮಾಡ್ತಿನಿ. ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಈ ಪ್ರಕರಣ ಇತ್ಯರ್ಥವಾಗಲಿ. ಬೆಂಗಳೂರು ಹಾಗೂ‌ ಮೈಸೂರು ಎರಡರಲ್ಲಿ ಯಾವುದಾದರೂ ಸರಿ. ಯಾರಾದರೂ ವಿಚಾರಣೆ ನಡೆಸಲಿ, ಕಾನೂನು ಚೌಕಟ್ಟಲ್ಲಿ ನಾನು ಮುಂದುವರಿತ್ತಿನಿ ಎಲ್ಲವನ್ನೂ ನಾನು ದೈರ್ಯಾವಾಗಿ ಫೇಸ್ ಮಾಡ್ತೀನಿ'' ಎಂದಿದ್ದಾರೆ ಉಮಾಪತಿ.

  ನಾನು ದರ್ಶನ್‌ ಮೇಲೆ ಆರೋಪ ಮಾಡಿಲ್ಲ: ಉಮಾಪತಿ

  ನಾನು ದರ್ಶನ್‌ ಮೇಲೆ ಆರೋಪ ಮಾಡಿಲ್ಲ: ಉಮಾಪತಿ

  ''ನಾನು ದರ್ಶನ್ ಅವರ ಮೇಲೆ ಆರೋಪ ಮಾಡಿಲ್ಲ. ಅವರು‌ ನನ್ನ ಮೇಲೆ ಆರೋಪ ಮಾಡಿಲ್ಲ. ಇದು ದೊಡ್ಡ ವಿಷಯ ಅಲ್ಲ. ದರ್ಶನ್ ಹೆಸರು ಬಂದಿರೋದಕ್ಕೆ ದೊಡ್ಡ ವಿಷಯ ಆಯ್ತು. ದರ್ಶನ್ ಸರ್ ಗೆ ನನ್ನಗೆ ಏನೂ ಸಮಸ್ಯೆ ಇಲ್ಲ. ನಿನ್ನೆ ದರ್ಶನ್ ಸರ್ ಮನೆಗೆ ಕರೆಸಿಕೊಂಡು ಮಾತನಾಡಿದರು ಎಲ್ಲ ಬಗೆಹರಿಸಿಕೊಂಡಿದ್ದೀವಿ'' ಎಂದಿದ್ದಾರೆ ಉಮಾಪತಿ.

  ಯಾರಿದು ದರ್ಶನ್ ಗೆಳೆಯ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂತಾ?ಯಾರಿದು ದರ್ಶನ್ ಗೆಳೆಯ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂತಾ?

  ನಾವು ಮಾಡಿರುವುದು ಸಿನಿಮಾ, ರಿಯಲ್ ಎಸ್ಟೇಟ್ ಅಲ್ಲ: ಉಮಾಪತಿ

  ನಾವು ಮಾಡಿರುವುದು ಸಿನಿಮಾ, ರಿಯಲ್ ಎಸ್ಟೇಟ್ ಅಲ್ಲ: ಉಮಾಪತಿ

  ''ದರ್ಶನ್ ಸರ್ ಹಾಗೂ ನಾನು‌ ಸಿನಿಮಾ ಮಾಡಿದ್ದೀವಿ, ಈ ವಿಚಾರವಾಗಿ‌ ನಾವಿಬ್ಬರು ಮಾತನಾಡಲ್ಲ, ದರ್ಶನ್ ಸರ್ ಸಹ ನಿನ್ನೆ ಹೇಳಿಕೆ‌ ಕೊಟ್ಟಿದ್ದಾರೆ. ಅದಿನ್ನು ಮುಗಿದ ಕತೆ, ಆದರೆ ಕಾನೂನು ಹೋರಾಟ ನಡೆಯುತ್ತಿರುತ್ತದೆ. ದರ್ಶನ್ ಸರ್ ಜೊತೆ ಇನ್ನೂ ಎರಡು‌ ಸಿನಿಮಾ ಮಾಡ್ತೀನಿ, ದರ್ಶನ್ ಸರ್‌ಗೆ ನನ್ನ ಜೊತೆ ಯಾವುದೇ ವೈಮನಸ್ಸಿಲ್ಲ ನಾವಿಬ್ಬರೂ ಮಾಡಿರುವುದು ಸಿನಿಮಾ, ರಿಯಲ್ ಎಸ್ಟೇಟ್ ಅಲ್ಲ'' ಎಂದಿದ್ದಾರೆ ಉಮಾಪತಿ.

  Sandesh Prince ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Filmibeat Kannada
  ಉಮಾಪತಿ ಮೇಲೆ ಗೂಬೆ ಕೂರಿಸಲಾಗಿತ್ತು!

  ಉಮಾಪತಿ ಮೇಲೆ ಗೂಬೆ ಕೂರಿಸಲಾಗಿತ್ತು!

  ದರ್ಶನ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ಸಾಲ ಪಡೆಯಲು ಯತ್ನಿಸಿದ ಪ್ರಕರಣ ಹಲವು ತಿರುವುಗಳನ್ನು ತೆಗೆದುಕೊಂಡು ದರ್ಶನ್ ಗೆಳೆಯರೇ ಏನೋ ಗೋಲ್-ಮಾಲ್ ಮಾಡಿದ್ದಾರೆ ಎಂಬಲ್ಲಿಗೆ ಬಂದು ನಿಂತಿತ್ತು. ಪ್ರಕರಣ ಪ್ರಾರಂಭವಾದಾಗ ಉಮಾಪತಿ ಅವರು ಆರೋಪಿ ಎಂಬುವಂತೆ ಚಿತ್ರಿಸಲಾಗಿತ್ತು. ನಂತರ ಉಮಾಪತಿ ಅವರು ಸುದ್ದಿಗೋಷ್ಠಿಗಳನ್ನು ನಡೆಸಿ ತಾವು ತಪ್ಪಿತಸ್ಥರಲ್ಲ ಎಂಬುದನ್ನು ಮನಗಾಣಿಸಿದರು. ನಂತರ ನಿನ್ನೆ ಸಂಜೆ ನಟ ದರ್ಶನ್ ಅವರು ಉಮಾಪತಿ ಅವರನ್ನು ಕರೆಸಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ. ಆದರೆ ಉಮಾಪತಿ ಅವರು ದರ್ಶನ್ ಗೆಳೆಯರಾದ ರಾಕೇಶ್ ಪಾಪಣ್ಣ ಹಾಗೂ ಹರ್ಷಾ ವಿರುದ್ಧ ಕಾನೂನು ಸಮರ ಮುಂದುವರೆಸಿದ್ದಾರೆ.

  'ಒಂದಾಗಿದ್ವಿ, ಒಂದಾಗಿರೋಣ': ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ'ಒಂದಾಗಿದ್ವಿ, ಒಂದಾಗಿರೋಣ': ಒಟ್ಟಿಗೆ ಕಾಣಿಸಿಕೊಂಡ ದರ್ಶನ್-ಉಮಾಪತಿ

  English summary
  Producer Umapathy Srinivasa Gowda said has no issue with Darshan. We talked and settled our differences. but my judicial fight will go on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X