»   » ಇನ್ಮ್ಯಾಕೆ ಮಾಲಾಶ್ರೀ ಬಗ್ಗೆ ಯಾವನಾದ್ರೂ ಕೆಮ್ಮಿದ್ರೆ, ಅವನ ಕತೆ ಪಿನಿಸ್.!!

ಇನ್ಮ್ಯಾಕೆ ಮಾಲಾಶ್ರೀ ಬಗ್ಗೆ ಯಾವನಾದ್ರೂ ಕೆಮ್ಮಿದ್ರೆ, ಅವನ ಕತೆ ಪಿನಿಸ್.!!

Posted By:
Subscribe to Filmibeat Kannada

ಮಾಲಾಶ್ರೀಗೆ ಆಕ್ಟಿಂಗ್ ಬರಲ್ವಾ? ಯಾರ್ರಿ ಹೇಳಿದ್ದು, ಈಗ ನಮ್ಮ ರಾಜ್ಯ ಸರ್ಕಾರವೇ ಸರ್ಟಿಫಿಕೇಟ್ ಕೊಟೈತಿ ಬಿಡ್ರಲಾ...!

ಮೊನ್ನೆ ಮೊನ್ನೆ ತಾನೆ ಆ ಡ್ಯಾನ್ಸ್ ಮಾಸ್ಟರ್ರು ಇಮ್ರಾನ್ ಸರ್ದಾರಿಯಾ ಒಂದೇ ಒಂದ್ ಮೆಸೇಜ್ ಹಾಕಿದ್ದಕ್ಕೆ ಎರ್ಡೆರ್ಡು ಪ್ರೆಸ್ ಮೀಟ್ ಮಾಡಿ ಮಾಲಾಶ್ರೀ ಮೇಡಮ್ಮು ಗೊಳ್ಳೋ ಅಂದ್ಬುಟ್ರು. [2015 ರಾಜ್ಯ ಪ್ರಶಸ್ತಿ; ವಿಜಯ್ ರಾಘವೇಂದ್ರ ಮತ್ತು ಮಾಲಾಶ್ರೀ 'ಬೆಸ್ಟ್'.!]

No one can dare to point finger at Malashri, The Best Actress

''25 ವರ್ಷ ನಾನು ಆಕ್ಟಿಂಗ್ ಮಾಡಿವ್ನಿ. ಎಲ್ಲರೂ ಭೇಷ್ ಅಂದವ್ರೆ. ಆದ್ರೆ, ನಿನ್ನೆ ಮೊನ್ನೆ ಬಂದ ಆ ಇಮ್ರಾನ್ 'ನನಗೆ ಆಕ್ಟಿಂಗ್ ಬರಕ್ಕಿಲ್ಲ' ಅಂತಾರೆ. ನನಗೆ ಅವಮಾನ ಆಗದೆ'' ಅಂತ ಮಾಲಾಶ್ರೀ ಅತ್ತಿದ್ದೇ ಅತ್ತಿದ್ದು. ಅದನ್ನು ಕಂಡು ನಮ್ ಹೆಣ್ಮಕ್ಳು ಕಣ್ಣಲ್ಲಿ ನೀರ್ ಹಾಕ್ಬುಟ್ರು.

ಈಗ ಎಂಗಾತು..? ನಮ್ಮ ಕೊಬ್ರಿ ಮಂಜಣ್ಣ, ಡ್ಯಾನ್ಸ್ ಮಾಸ್ಟರ್ ಗೆ ಸರ್ಕಾರವೇ 'ತಗಳ್ರಪ್ಪಾ ಹಿಂಗೈತಿ ನಮ್ಮ ಮೇಡಮ್ ಅಭಿನಯ' ಅಂದೌರೆ. ಅದೇನೋಪ್ಪಾ, ಮಾಲಾಶ್ರೀಯವ್ವ ಪ್ಯಾಂಟ್ ಬಿಟ್ಟು ಸೀರೆ ಉಟ್ಕಂಡಿದ್ದಕ್ಕೆ ಪ್ರಶಸ್ತಿ ಬಂತು ಅಂತ ಯಾರೋ ಹೇಳಿದ್ದು ಹಿಂಗೆ ಗೊತ್ತಾತು. [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

ಪ್ರಶಸ್ತಿ ಆಯ್ಕೆ ಸಮಿತಿ ನಾಗಣ್ಣೋರಿಗೆ ಅದೇನು ಅನಿಸ್ತೋ...'ಗಂಗಾ' ಸಿನಿಮಾ ನೋಡಿ ಎರಡು ಕಣ್ಣಲ್ಲೂ ಗಂಗಾ ನದಿ ಹರಿಸಿ, ಮಾಲಾಶ್ರೀಗೆ 'ತಗಳವ್ವಾ' ಅಂಥ ಪ್ರಶಸ್ತಿ ಕೊಟ್ಟು ಬಿಟ್ಟಾರ. [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

ಇನ್ನೇನು ಮಾಡಲಿಕ್ಕಾಗುತ್ತೆ, ಸರ್ಕಾರವೇ ಸರಿಯಾಗಿ 'ಉಪ್ಪು, ಹುಳಿ, ಖಾರ' ಹಾಕಿದೆ. ಯಾರಿಗೆ ಯಾವುದು ಬೇಕು ಅದನ್ನೇ ತಗತಾರೆ ಬುಡಿ. ಇನ್ನು ಮ್ಯಾಲೆ ಮಂಜಣ್ಣ ಮತ್ತೆ ಇಮ್ರಾನು 'ಆಕ್ಟಿಂಗ್ ಬರಕ್ಕಿಲ್ಲ' ಅಂಥ ಉಸಾಬರಿ ಮಾತಾಡಾಕೇ ಹೋಗಲ್ಲ. ರಾಜ್ಯ ಪ್ರಶಸ್ತಿ ಸಿಕ್ಕ 'ಅತ್ಯುತ್ತಮ ನಟಿ' ಹಾಕ್ಕಂಡು ಸಿನಿಮಾ ಮಾಡ್ತಿದ್ದೀವಿ ಅಂತ ಪಬ್ಲಿಸಿಟಿ ಮಾಡ್ಕಂತಾರೆ. [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

'ಮಾಲಾಶ್ರೀಯವ್ವಾ ಕಂಗ್ರಾಜುಲೇಶನ್, ನಿಮ್ಗೆ ಪ್ರಶಸ್ತಿ ಬಂದಿದ್ದು ನಮಗೆ ಬಂದಷ್ಟೇ ಕುಸಿಯಾಗತವ್ವಾ' ಎಂದು ಇಮ್ರಾನ್ ಮೆಸೇಜ್ ಕಳಿಸ್ಬೇಕು ಅಂತ ಟೈಪ್ ಮಾಡಿ ಇಟ್ಟಾಗಲೇ ಅತ್ಲಾಗ್ಲಿಂದ ಕೊಬ್ರಿ ಮಂಜಣ್ಣ ಮತ್ತೆ ಪೋನ್ ಮಾಡಿರ್ಬೇಕು.!

English summary
Now, no one can dare to point finger at Malashri, The Best Kannada Actress. Malashri, has recieved State Film Award for her best performance in Kannada Movie 'Ganga'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada