For Quick Alerts
  ALLOW NOTIFICATIONS  
  For Daily Alerts

  ಅಪ್ಪು ಸ್ಥಾನವನ್ನು ಯಾರು ತುಂಬ್ತಾರೆ ಎಂಬ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರವಿದು

  |

  ಕನ್ನಡ ಚಿತ್ರರಂಗದ ಮೇರುನಟ ಡಾ ರಾಜ್‌ಕುಮಾರ್ ಅವರ ಕುಟುಂಬ ಈ ಹಿಂದಿನಿಂದಲೂ ಚಿತ್ರರಂಗಕ್ಕೆ ಸಕಲಕಲೆ ಬಲ್ಲಂತಹ ನಟರನ್ನು ನೀಡುತ್ತಾ ಬಂದಿದೆ. ರಾಜ್‌ ಕುಟುಂಬದ ಕುಡಿಗಳು ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ನಿಂದ ಚಿತ್ರರಂಗ ಪ್ರವೇಶಿಸಿದರೂ ಸಹ ತಮ್ಮದೇ ಆದ ಸ್ವಂತ ಕಲೆಯಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತರು ಹಾಗೂ ಸ್ಟಾರ್ ನಟರಾದರು.

  ಇನ್ನು ಶಿವ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಚಿತ್ರರಂಗವನ್ನು ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಆಳಿದ ನಂತರ ಮುಂದೆ ರಾಜ್‌ ಕುಟುಂಬದ ಯಾವ ನಟ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ರಾಜ್ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಪ್ರಶ್ನೆ ಇದೆ ಹಾಗೂ ಈ ಕುರಿತಾಗಿ ಚರ್ಚೆಗಳೂ ಸಹ ನಡೆಯುತ್ತಾ ಇರುತ್ತವೆ.

  ಅದರಲ್ಲೂ ಚಿತ್ರರಂಗದ ಅತಿ ಯಶಸ್ವಿ ನಟ ಪುನೀತ್ ರಾಜ್‌ಕುಮಾರ್ ಅಕಾಲಿಕ ಮರಣದ ನಂತರ ರಾಘವೇಂದ್ರ ರಾಜ್‌ಕುಮಾರ್ ಅಪ್ಪು ಸ್ಥಾನವನ್ನು ತುಂಬಬಲ್ಲ ನಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಪು ರೀತಿಯೇ ಹೆಜ್ಜೆ ಹಾಕುವ, ಸ್ಟಂಟ್ ಮಾಡುವ ಕಲೆಯನ್ನು ಈಗಾಗಲೇ ಕರಗತ ಮಾಡಿಕೊಂಡಿರುವ ಯುವ ರಾಜ್‌ಕುಮಾರ್ ಮೇಲೆ ರಾಜ್‌ವಂಶದ ಅಭಿಮಾನಿಗಳಿಗೆ ಅಪಾರವಾದ ನಂಬಿಕೆ ಇದೆ. ಇನ್ನು ಈ ವಿಚಾರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಮಾತನಾಡಿದ ಶಿವ ರಾಜ್‌ಕುಮಾರ್ ಸಹ ಮನಬಿಚ್ಚಿ ಮಾತನಾಡಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

  ಎಲ್ಲರೂ ನಮ್ಮ ಮಕ್ಕಳೇ

  ಎಲ್ಲರೂ ನಮ್ಮ ಮಕ್ಕಳೇ

  ಯುವ ರಾಜ್‌ಕುಮಾರ್ ಪುನೀತ್ ರಾಜ್‌ಕುಮಾರ್ ಸ್ಥಾನ ತುಂಬಬಲ್ಲರೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವ ರಾಜ್‌ಕುಮಾರ್ "ಯುವ ರಾಜ್‌ಕುಮಾರ್ ಮಾತ್ರ ಅಲ್ಲ, ಅವನ ಅಣ್ಣ ವಿನಯ್ ರಾಜ್‌ಕುಮಾರ್ ಇದಾನೆ, ಪೂರ್ಣಿಮಾ ಮಗ ಧೀರೆನ್ ಇದಾನೆ, ಮಗಳು ಧನ್ಯಾ ಇದಾಳೆ. ಎಲ್ಲರೂ ನಮ್ಮ ಮಕ್ಕಳೇ. ಎಲ್ಲರೂ ರಾಜ್ ಕುಟುಂಬದ ಕುಡಿಗಳೇ. ಯಾರು ಬೆಳೆದರೂ ಖುಷಿನೇ" ಎಂದು ಹೇಳಿಕೆ ನೀಡಿದರು.

  ವಿನಯತೆ ಇದ್ದರೆ ಸಾಕು

  ವಿನಯತೆ ಇದ್ದರೆ ಸಾಕು

  ಇನ್ನೂ ಮುಂದುವರಿದು ಮಾತನಾಡಿದ ಶಿವ ರಾಜ್‌ಕುಮಾರ್ ಯಾರು ಸಹ ಯಾರ ಸ್ಥಾನವನ್ನು ತುಂಬುವ ಅಗತ್ಯವಿಲ್ಲ, ಇವರು ವಿನಯತೆಯಿಂದ ವಿಧೇಯರಾಗಿ ನಡೆದುಕೊಂಡು ಹೋಗಿಬಿಟ್ರೆ ಸಾಕು, ಅಪ್ಪು ಸ್ಥಾನ ಅಪ್ಪುಗೆ, ರಾಜ್‌ಕುಮಾರ್ ಸ್ಥಾನ ರಾಜ್‌ಕುಮಾರ್ ಅವರಿಗೆ ಎಂದರು. ಹಾಗೂ ಇಲ್ಲಿ ಸ್ಥಾನ ತುಂಬಲು ಇದು ಕಿಂಗ್‌ಡಮ್ ಅಲ್ಲ, ಇಡೀ ಚಿತ್ರರಂಗ ಒಂದು ಕುಟುಂಬ ಇಲ್ಲಿ ಯಾರು ಬೇಕಾದ್ರೂ ಸ್ಟಾರ್ ಆಗಬಹುದು ಎಂದು ಸ್ವತಃ ಅಪ್ಪಾಜಿಯೇ ಹೇಳುತ್ತಿದ್ದರು ಎಂದು ಶಿವ ರಾಜ್‌ಕುಮಾರ್ ತಿಳಿಸಿದರು.

  ಸುದೀಪ್ ಇದ್ದಾರೆ, ದರ್ಶನ್ ಇದ್ದಾರೆ

  ಸುದೀಪ್ ಇದ್ದಾರೆ, ದರ್ಶನ್ ಇದ್ದಾರೆ

  ಇನ್ನು ಕನ್ನಡ ಚಿತ್ರರಂಗವೆಂದರೆ ಕೇವಲ ರಾಜ್‌ಕುಮಾರ್ ಕುಟುಂಬದ ನಟರಲ್ಲ ಎಂದ ಶಿವ ರಾಜ್‌ಕುಮಾರ್ "ಇದರಲ್ಲಿ ಸುದೀಪ್ ಇದಾರೆ, ದರ್ಶನ್ ಇದಾರೆ, ಯಶ್ ಇದಾರೆ, ಉಪೇಂದ್ರ ಇದಾರೆ, ರಿಷಬ್ ಶೆಟ್ಟಿ ಇದಾರೆ, ಗಣೇಶ್ ಇದಾರೆ, ಧೃವ ಸರ್ಜಾ ಇದಾರೆ, ನಾವೆಲ್ಲಾ ಒಂದು ಫ್ಯಾಮಿಲಿ. ಇಲ್ಲಿಗೆ ಹೊಸಬರು ಬರ್ತಾರೆ, ಅವರಿಗೆಲ್ಲಾ ನಾನು ಒಳ್ಳೆ ರೀತಿಯಲ್ಲಿ ನಡೆದುಕೊಂಡು ಬೆಳೆಯಿರಿ ಎಂದು ಹೇಳಲು ಇಚ್ಛಿಸುತ್ತೇನೆ" ಎಂದರು.

  English summary
  No one can replace Puneeth Rajkumar in film industry says Shiva Rajkumar
  Wednesday, December 21, 2022, 9:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X