Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್‌ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಅವ್ರಿವ್ರು ಸಹಾಯ ಮಾಡಿದ್ರು ಅನ್ನೋದೆಲ್ಲಾ ಸುಳ್ಳು.. ಆ ಪರಿಸ್ಥಿತಿ ನನಗಿನ್ನೂ ಬಂದಿಲ್ಲ"-ರವಿಚಂದ್ರನ್!
ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು ಏನೇ ಇದ್ದರೂ ನೇರ ನುಡಿ. ಎದುರಿಗೆ ಅದೆಷ್ಟೇ ದೊಡ್ಡ ಮಂದಿ ಇದ್ದರೂ, ಕ್ರೇಜಿ ಸ್ಟಾರ್ ಯಾರಿಗೂ ಕ್ಯಾರೇ ಅನ್ನೋದಿಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಹಾಗೇ ಹೇಳಿ ಬಿಡುತ್ತಾರೆ. ಇದು ಇತ್ತೀಚೆಗಷ್ಟೇ ಬಂದಿಲ್ಲ. ಮೊದಲಿನಿಂದಲೂ ಕ್ರೇಜಿಸ್ಟಾರ್ ಇದ್ದಿದ್ದೇ ಹೀಗೆ.
ಸ್ಯಾಂಡಲ್‌ವುಡ್‌ನಲ್ಲಿ ಇದ್ದಿದ್ದು ಇದ್ದಂಗೆ ಮಾತಾಡೋ ಕೆಲವೇ ಕೆಲವು ನಟರಲ್ಲಿ ರವಿಚಂದ್ರನ್ ಕೂಡ ಒಬ್ಬರು. ಇತ್ತೀಚೆಗೆ ಕ್ರೇಜಿಸ್ಟಾರ್ ತಿಲಲಕ್ಷದೀಪೋತ್ಸವ ಅನ್ನೋ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ರವಿಚಂದ್ರನ್ ತನಗೆ ಯಾರೂ ಸಹಾಯ ಮಾಡಿಲ್ಲ ಅಂತ ಹೇಳಿದ್ದಾರೆ. ಕ್ರೇಜಿಸ್ಟಾರ್ ಮಾತಿನ ಹೈಲೈಟ್ಸ್ ಇಲ್ಲಿದೆ.
ಡಿಕೆ
ಶಿವಕುಮಾರ್-ರವಿಚಂದ್ರನ್
ಓದಿದ
ಸ್ಕೂಲ್
ಒಂದೇ:
3
ಬಾರಿ
'ಪ್ರೇಮಲೋಕ'
ವೀಕ್ಷಿಸಿದ್ದ
ಡಿಕೆಶಿ!

ನನಗೆ ಆ ಪರಿಸ್ಥಿತಿ ಇನ್ನೂ ಬಂದಿಲ್ಲ
ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತನಗೆ ಯಾರ ಸಹಾಯವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಟಿವಿಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಎಲ್ಲರೂ ಸಹಾಯ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. "ಎಲ್ಲರೂ ಟಿವಿಗಳಲ್ಲಿ ಹೇಳ್ಕೊಂಡು ಓಡಾಡುತ್ತಿದ್ದಾರೆ. ಅವರು ಬಂದು ಸಹಾಯ ಮಾಡಿದ್ರು. ಇವರು ಬಂದು ಸಹಾಯ ಮಾಡಿದ್ರು. ಎಲ್ಲಾ ಬರೀ ಸುಳ್ಳುರೀ. ಆ ಪರಿಸ್ಥಿತಿ ಇನ್ನೂ ನನಗೆ ಬಂದೂ ಇಲ್ಲ. ಬೇಕಾಗೂ ಇಲ್ಲ. ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ" ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.

'ಹಣಕ್ಕಿಂತ ಜನ ಸಂಪಾದನೆ ಮಾಡಿದ್ದೇನೆ'
"ಸ್ನೇಹಿತರು ತುಂಬಾನೇ ಇದ್ದಾರೆ. ಇಲ್ಲೇ ದಿಲ್ ಸೇ ದಿಲೀಪ್ ಅಂತ ಕೂತಿದ್ದಾರೆ ನೋಡಿ, ಅವನು ನನ್ನ ಜೊತೆನೇ ಎರಡು ವರ್ಷ ಇದ್ದ. ಅವನೇ ಬಂದು ನನಗೆ ಒಂದು ದಿನ ದುಡ್ಡು ಕೊಡುತ್ತಾನೆ. ಇಟ್ಕೊಳ್ಳಿ ಸರ್ ಸುಮ್ಮನೆ ಮನೆಯಲ್ಲಿ ಬಿದ್ದಿದೆ. ನಿಮಗೆ ಏನು ಬೇಕಾದರೂ ಬಳಸಿಕೊಳ್ಳಿ ಎಂದಿದ್ದ. ಅದೇ ತರ ಇನ್ನೊಂದಿಷ್ಟು ಅಭಿಮಾನಿಗಳು ಕೂಡ ಇದ್ದಾರೆ. ಈ ಕೊಟ್ರೇಶಿ ಬರುತ್ತಾ ದಾರಿಯಲ್ಲಿ ಹೇಳುತ್ತಾನೆ. ಅಣ್ಣ ನಾನು ಮುಂದಿನ ವರ್ಷ ಒಂದಿಷ್ಟು ಹಣ ಸಂಪಾದನೆ ಮಾಡುತ್ತೇನೆ. ಅಷ್ಟೂ ತಂದು ನಿಮ್ಮ ಬಳಿನೇ ಕೊಡುತ್ತೇನೆ. ಸಿನಿಮಾ ಮಾಡಿಕೊಡಿ ನನಗೆ ಅಂತಾನೆ. ಇಷ್ಟು ಸಂಪಾದನೆ ಮಾಡಿದ್ದೇನಲ್ಲ ಇನ್ನೇನು ಬೇಕು." ಎಂದು ರವಿಚಂದ್ರನ್ ಹೇಳಿದ್ದಾರೆ.

'ಸಂಬಂಧಿಕರೇ ಈ ಮಾತು ಹೇಳಿಲ್ಲ'
ಕ್ರೇಜಿಸ್ಟಾರ್ ರವಿಚಂದ್ರನ್ ಇಷ್ಟ ಪಡುವ ಅದೆಷ್ಟೋ ಮಂದಿ ಇದ್ದಾರೆ. ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳಿದ್ದಾರೆ. ಅದರಲ್ಲೂ ಕ್ರೇಜಿಸ್ಟಾರ್ ಸಂಕಷ್ಟದಲ್ಲಿ ಇದ್ದಾಗ, ಅದೆಷ್ಟೋ ಮಂದಿಗೆ ನೆರವಿಗೆ ಬಂದಿದ್ದಾರೆ. ಜೊತೆಗೆ ನಿಲ್ಲುವ ಭರವಸೆ ಕೊಟ್ಟಿದ್ದಾರೆ. ಈ ಮಾತನ್ನು ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ವೇಳೆ ರವಿಚಂದ್ರನ್ ಅವರೇ ಹೇಳಿಕೊಂಡಿದ್ದಾರೆ. "ಜೊತೆಯಲ್ಲಿರೋ ಸಂಬಂಧಿಕರೇ ಈ ಮಾತನ್ನು ಹೇಳಿಲ್ಲ. ಸ್ನೇಹಿತರು ಇದ್ದಾರೆ. ಸ್ನೇಹಿತರು ನನಗೆ ತುಂಬಾ ಜನ ಸಹಾಯ ಮಾಡಿದ್ದಾರೆ. ನನಗೆ ದುಡ್ಡು ಕೊಟ್ಟಿರೋದು ಇವತ್ತಿನವರೆಗೂ ದುಡ್ಡು ಕೊಡು ಅಂತ ಕೇಳಿರೋರು ಇಲ್ಲ." ಎಂದು ರವಿಚಂದ್ರನ್ ಹೇಳಿದ್ದಾರೆ.

'ದುಡ್ಡು ಬದುಕಿಗೆ ಬೇಕಷ್ಟೇ'
ಕ್ರೇಜಿಸ್ಟಾರ್ ರವಿಚಂದ್ರನ್ ದುಡ್ಡಿನ ಹಿಂದೆ ಹೋದವರಲ್ಲ. ಅದು ಕನ್ನಡ ಚಿತ್ರರಂಗಕ್ಕೆ ಚೆನ್ನಾಗಿ ಗೊತ್ತಿದೆ. ಸಿನಿಮಾಗಳಿಂದ ದುಡಿದ ಹಣವನ್ನೆಲ್ಲಾ ರವಿಚಂದ್ರನ್ ಸಿನಿಮಾಗಾಗಿಯೇ ಸುರಿದಿದ್ದಾರೆ. ಸಿನಿಮಾದಿಂದ ಸಂಪಾದನೆ ಮಾಡಿದ್ದಾರೆ. ಸಿನಿಮಾದಲ್ಲೇ ಹಣವನ್ನು ಕಳೆದುಕೊಂಡಿದ್ದಾರೆ. ಇದೇ ಮಾತನ್ನು ಕಾರ್ಯಕ್ರಮದ ವೇಳೆ ಪುನರುಚ್ಚರಿಸಿದ್ದಾರೆ. "ಏನು ಸಂಪಾದನೆ ಮಾಡಿದ್ದೀನಿ ಅಂದರೆ, ಆ ನಂಬಿಕೆಯನ್ನು ಸಂಪಾದನೆ ಮಾಡಿದ್ದೇನೆ. ನಿಮ್ಮ ಪ್ರೀತಿಯನ್ನು ಸಂಪಾದನೆ ಮಾಡಿದ್ದೀನಿ ಸಾಕು. ಇದು ಕೊಡುವ ತೃಪ್ತಿ ಖಂಡಿತಾ ನನಗೆ ಹಣ ಕೊಡುವುದಿಲ್ಲ. ದುಡ್ಡು ಬದುಕಿಗೆ ಬೇಕಷ್ಟೇ. ಒಂದು ಫೋನ್ ಸಾಕಾಗಲ್ಲ. ಎರಡು ಬೇಕು ಅನ್ನೋದೇ ಎಕ್ಸ್‌ಟ್ರಾ ಖರ್ಚು ಅಷ್ಟೇ." ಎಂದಿದ್ದಾರೆ ಕ್ರೇಜಿಸ್ಟಾರ್.