»   » ಮಲ್ಟಿಪ್ಲೆಕ್ಸ್ ಗೆ ತಟ್ಟಿತು GST ಬಿಸಿ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶವಿಲ್ಲ

ಮಲ್ಟಿಪ್ಲೆಕ್ಸ್ ಗೆ ತಟ್ಟಿತು GST ಬಿಸಿ: ಆನ್ ಲೈನ್ ಬುಕ್ಕಿಂಗ್ ಗೆ ಅವಕಾಶವಿಲ್ಲ

Posted By:
Subscribe to Filmibeat Kannada

ಇಡೀ ದೇಶದಲ್ಲಿ ಚರ್ಚೆ ಆಗುತ್ತಿರುವ ಒಂದೇ ಒಂದು ವಿಷ್ಯ ಅಂದ್ರೆ GST (ಸರಕು ಮತ್ತು ಸೇವಾ ತೆರಿಗೆ). ಜುಲೈ 1 ರಿಂದ GST ಜಾರಿಯಾಗಲಿದ್ದು, ಇದರಿಂದ ಗೊಂದಲಗಳೇ ಹೆಚ್ಚಾಗಿದೆ. ಅದರ ಬಿಸಿ ಈಗ ಮಲ್ಟಿಪ್ಲೆಕ್ಸ್ ಗೆ ತಟ್ಟಿದೆ.

ಹೌದು, GST ಸಂಬಂಧಪಟ್ಟಂತೆ ಗೊಂದಲಕ್ಕೀಡಾಗಿರುವ ಮಲ್ಟಿಪ್ಲೆಕ್ಸ್ ಗಳು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ನಿಲ್ಲಿಸಿದೆ. ಶುಕ್ರವಾರದವರೆಗೂ ಬುಕ್ಕಿಂಗ್ ಮಾಡಲು ಅವಕಾಶ ಕೊಟ್ಟಿರುವ ಮಲ್ಟಿಪ್ಲೆಕ್ಸ್ ಗಳು ಶನಿವಾರದ ನಂತರ ಬುಕ್ಕಿಂಗ್ ಅವಕಾಶ ಕೊಟ್ಟಿಲ್ಲ. ಯಾಕಂದ್ರೆ, ಟಿಕೆಟ್ ದರ ಎಷ್ಟು ನಿಗದಿ ಮಾಡಬೇಕು ಎಂಬ ಗೊಂದಲಕ್ಕೆ ಮಲ್ಟಿಪ್ಲೆಕ್ಸ್ ಗಳು ಸಿಲುಕಿದೆ.

'GST' ಬಳಿಕ ಕನ್ನಡ ಚಿತ್ರರಂಗದ ಲಾಭ ನಷ್ಟದ ಲೆಕ್ಕಾಚಾರ

No Online Ticket Booking In Multiflex Becuse of GST Effect

'GST' ನಿಯಮದ ಪ್ರಕಾರ ಎಂಟರ್​ಟೈನ್​ಮೆಂಟ್ ಟ್ಯಾಕ್ಸ್ (ಮನರಂಜನಾ ತೆರಿಗೆ), ಟಿಕೆಟ್ ದರ 100 ರೂಪಾಯಿಗಿಂತ ಕಡಿಮೆ ಇರುವ ಚಿತ್ರಮಂದಿರಗಳಲ್ಲಿ 18% ತೆರಿಗೆ ಮತ್ತು 100 ರೂಪಾಯಿಗಿಂತ ಹೆಚ್ಚು ಟಿಕೆಟ್ ದರ ಇರುವ ಚಿತ್ರಮಂದಿರಗಳಲ್ಲಿ 28% ತೆರಿಗೆಯನ್ನು ವಿಧಿಸಲಾಗುವುದು. ಆದ್ರೆ, ಕನ್ನಡ ಚಿತ್ರಗಳಿಗೆ ಹಿಂದಿನಂತೆ ರಾಜ್ಯ ಸರ್ಕಾರದ ವಿನಾಯಿತಿ ಮುಂದುವರೆಯುತ್ತಾ..? ಮುಂದುವರೆಯುವುದೇ ಆದರೆ, ಪ್ರಮಾಣ ಎಷ್ಟು..? ಹಾಗಾದರೆ, ಟಿಕೆಟ್​ ಬೆಲೆ ಎಷ್ಟಿರಬೇಕು..? ಎಂಬ ಹಲವು ಗೊಂದಲಗಳು ಉಂಟಾಗಿದೆ. ಹೀಗಾಗಿ, ಮಲ್ಟಿಪ್ಲೆಕ್ಸ್ ಗಳು ಸದ್ಯಕ್ಕೆ ಆನ್ ಲೈನ್ ಬುಕ್ಕಿಂಗ್ ತಡೆ ಹಿಡಿದಿದೆ.

ಈ ಸಂಬಂಧ ಮಲ್ಟಿಪ್ಲೆಕ್ಸ್ ಸಿಬ್ಬಂದಿ ಹೇಳುವುದೇನಂದರೇ ''ಸರ್ಕಾರದಿಂದ ಯಾವುದೇ ರೀತಿಯ ಸ್ಪಷ್ಟ ಆದೇಶ ಬಂದಿಲ್ಲ. ಹೀಗಾಗಿ, ನಮಗೂ ಗೊಂದಲವಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ'' ಎನ್ನುತ್ತಾರೆ.

ಈ ವಾರ ಕನ್ನಡದ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ಕಳೆದ ಬಾರಿ ನೋಟ್ ಬ್ಯಾನ್ ಸಮಸ್ಯೆಯಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಮಟ್ಟದ ನಷ್ಟವಾಗಿತ್ತು. ಈಗ ರಿಲೀಸ್ ಆಗುತ್ತಿರುವ ಚಿತ್ರಗಳಿಗೆ ಜಿಎಸ್ ಟಿ ಸಮಸ್ಯೆಯಾಗಿ ಪರಿಣಮಿಸುವ ಆತಂಕ ಕಾಡುತ್ತಿದೆ.

ಭಟ್ಟರು ಬರೆದ GST ಹಾಡು ನೋಡಿ: ವಿಜಿ-ಗಣೇಶ್ ಸಿಂಗಿಂಗ್

English summary
No Online Ticket Booking In Multiplexes Because of GST Effect

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada