twitter
    For Quick Alerts
    ALLOW NOTIFICATIONS  
    For Daily Alerts

    ಸೂಪರ್ ಸ್ಟಾರ್ ಗಳ ಕಥೆನೇ ಹಿಂಗಾದ್ರೆ ಕೇಳೋರ್ಯಾರು?

    By ಜೀವನರಸಿಕ
    |

    ಥಿಯೇಟರ್ ನಲ್ಲಿ ಚಾವಣಿ ಕಿತ್ತು ಹೋಗೋ ಹಾಗೆ ಶಿಳ್ಳೆ ಹಾಕಿ ಕುಣಿದಾಡೋ ಅಭಿಮಾನಿಗಳನ್ನ ನೋಡೋ ಸ್ಟಾರ್ ಗಳು ತಮ್ಮ ಅಭಿಮಾನಿ ಬಳಗ ದೊಡ್ಡದಿದೆ ಅಂತ ಒಳಗೊಳಗೇ ಖುಷಿಪಟ್ಟುಕೊಳ್ತಾರೆ. ಆದ್ರೆ ಅದ್ರ ರಿಯಾಲಿಟಿ ಗೊತ್ತಾಗೋದು ಸಿನಿಮಾ ಜನರ ಮುಂದೆ ಬಂದಾಗ.

    ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾ ತರೋಕೂ ಮೊದಲು ನಿರ್ಮಾಪಕ ಸ್ಯಾಟಲೈಟ್ ರೈಟ್ಸ್ ಸಿಗುತ್ತಾ ಅಂತ ಯೋಚಿಸಿಯೇ ಯೋಚಿಸಿರ್ತಾನೆ. ಅಂತಹಾ ಯೋಚನೆ ಬಂದಾಗ ಬಿಗ್ ಸ್ಕ್ರೀನ್ ನಲ್ಲಿ ಸೂಪರ್ ಸ್ಟಾರ್ ಗಳಾದ್ರೂ ಕೂಡ ಕಿರುತೆರೆಯಲ್ಲಿ ಡಲ್ ಹೊಡೀತಾರೆ.

    ಹಾಗಾದ್ರೆ ನಿಮ್ಮ ನೆಚ್ಚಿನ ಸ್ಟಾರ್ ಗಳು ಕಿರುತೆರೆಯ ಮೇಲೆ ಯಾಕೆ ಮಿಂಚೋದಿಲ್ಲ ಅನ್ನೋದಕ್ಕೆ ನೀವೂ ಅರ್ಥ ಮಾಡಿಕೊಳ್ಳದ ಒಂದಷ್ಟು ಅಚ್ಚರಿಯ ಅಂಶಗಳು ಇಲ್ಲಿವೆ. ಸ್ಲೈಡ್ ಸರಿಸಿ ನೋಡಿ.

    ಉಪ್ಪಿಗೆ ಲೇಡಿ ಫ್ಯಾನ್ಸ್ ಕಡಿಮೆ

    ಉಪ್ಪಿಗೆ ಲೇಡಿ ಫ್ಯಾನ್ಸ್ ಕಡಿಮೆ

    ರಿಯಲ್ ಸ್ಟಾರ್ ಸಿನಿಮಾಗಳು ರಿಯಲಿಸ್ಟಿಕ್ ಸಿನಿಮಾಗಳು. ಇಲ್ಲಿ ಎಲ್ಲವೂ ರಿಯಲಿಸ್ಟಿಕ್, ಯಾವ ಮೇಕಪ್ಪು ಲಿಪ್ ಸ್ಟಿಕ್ಕು ಇಲ್ಲದೆ ಸಮಾಜವನ್ನ ಬೆತ್ತಲಾಗಿಸೋ ಉಪ್ಪಿ ಸಿನಿಮಾಗಳು ಭಾವ-ಬಂಧ-ಸಂಬಂಧಗಳ ಜೂಜಾಟ ಜಂಜಾಟವನ್ನ ಬಯಸೋ ಮಹಿಳೆಯರಿಗೆ ಇಷ್ಟವಾಗೋದಿಲ್ಲ.

    ಕುಟುಂಬ,ಗೋಕರ್ಣ ಓಕೆ

    ಕುಟುಂಬ,ಗೋಕರ್ಣ ಓಕೆ

    ಕುಟುಂಬ ಗೋಕರ್ಣದಂತಹಾ ಉಪ್ಪಿ ಸಿನಿಮಾಗಳು ಓಕೆ ಆದ್ರೆ ಸಿನಿಮಾಗಳಲ್ಲಿ ಉಪೇಂದ್ರ ಭಾವನೆಗಿಂತ ಹೆಚ್ಚಾಗಿ ವಾಸ್ತವ ಮತ್ತು ಸಮಾಜದ ಸಮಸ್ಯೆಗಳ ತೀವ್ರತೆಯನ್ನ ಹೇಳೋದನ್ನ ಕಣ್ಣೀರಿನ ಪ್ರೇಮಕಥೆ ನೋಡೋಕೆ ಇಷ್ಟಪಡೋ ಕಿರುತೆರೆ ಪ್ರೇಮಿಗಳು ಇಷ್ಟಪಡ್ತಿಲ್ಲ.

    ದುನಿಯಾ ವಿಜಿ ಅಷ್ಟಕ್ಕಷ್ಟೆ

    ದುನಿಯಾ ವಿಜಿ ಅಷ್ಟಕ್ಕಷ್ಟೆ

    ಹೊಡೆದಾಟದ ಸಿನಿಮಾಗಳಿಗೆ ಹೇಳಿ ಮಾಡಿಸಿದ ನಟ ದುನಿಯಾ ವಿಜಯ್. ಆದ್ರೆ ವಿಜಯ್ ಸಿನಿಮಾ ಮನೆಯಲ್ಲಿ ಕುಳಿತು ಸಿನಿಮಾ ನೋಡೋ ವರ್ಗವಾದ ಹೆಂಗಸರು ಮತ್ತು ಮಕ್ಕಳಿಗೆ ಇಷ್ಟವಾಗ್ತಿಲ್ಲ ಹಾಗಾಗಿ ಮನರಂಜನಾ ವಾಹಿನಿಗಳಲ್ಲಿ ವಿಜಿ ಸಿನಿಮಾಗಳಿಗೂ ಬೇಡಿಕೆ ಕಡಿಮೆ ಅನ್ನೋ ಮಾಹಿತಿ ಇದೆ.

    ಜಗ್ಗೇಶ್ ಲಕಡಿ ಪಕಡಿ ಜುಮ್ಮ

    ಜಗ್ಗೇಶ್ ಲಕಡಿ ಪಕಡಿ ಜುಮ್ಮ

    ನವರಸನಾಯಕ ಜಗ್ಗೇಶ್ 90ರ ದಶಕದ ಸಿನಿಮಾಗಳು ತೆರೆಗೆ ಬಂದ್ರೆ ಈಗಲೂ ಪ್ರೇಕ್ಷಕರು ಕಣ್ಣು ಮಿಟುಕಿಸದೆ ನೋಡ್ತಾರೆ. ಆದ್ರೆ ಅಂತಹಾ ಸಿನಿಮಾಗಳು ಬರ್ತಿಲ್ಲ ಅನ್ನೋದೇ ಚಿತ್ರಪ್ರೇಮಿಗಳ ಬೇಸರ.

    ದೂದ್ ಪೇಡ ಸಿಹಿ ಕಡಿಮೆಯಾಗಿದೆ

    ದೂದ್ ಪೇಡ ಸಿಹಿ ಕಡಿಮೆಯಾಗಿದೆ

    ದಿಗಂತ್ ಒಂದೊಂದೇ ಸಿನಿಮಾಗಳ ಮೂಲಕ ಕನ್ನಡಿಗರ ಮನಸ್ಸಲ್ಲಿ ತಳವೂರೋಕೆ ಶುರುಮಾಡಿದ್ದ ನಟ. ಆದ್ರೆ ದಿಗಂತ್ ಸಿನಿಮಾಗಳಲ್ಲಿರೋ ಕಚಗುಳಿ ಇಡೋ ತಮಾಷೆ ಕಿರುತೆರೆ ಪ್ರೇಕ್ಷಕ ವರ್ಗಕ್ಕಲ್ಲ ಅನ್ನೋದು ಸ್ಯಾಟಲೈಟ್ ಪಂಡಿತರ ಲೆಕ್ಕಾಚಾರ.

     ಅಜೇಯ್ ರಾವ್, ಪ್ರೇಮ್ ಪ್ರೇಮಿಗಳಿಗೆ

    ಅಜೇಯ್ ರಾವ್, ಪ್ರೇಮ್ ಪ್ರೇಮಿಗಳಿಗೆ

    ಸ್ಯಾಂಡಲ್ ವುಡ್ ನ ಹ್ಯಾಂಡಸಮ್ ಹೀರೋಗಳಾದ ಅಜೇಯ್ ರಾವ್ ಮತ್ತು ಪ್ರೇಮ್ ಪ್ರೇಮಿಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಕಾಲೇಜ್ ಹುಡ್ಗ ಹುಡ್ಗಿಯರ ಫೇವರೀಟ್ ಆಗಿರೋ ಈ ಸ್ಟಾರ್ ಗಳು ಕಿರುತೆರೆಯಲ್ಲಿ ಕಿಕ್ ಕೊಡ್ತಿಲ್ಲ.

    English summary
    Sandalwood film industry are so dependent on satellite rights. With almost the entire budget of the film being offered as satellite rights. But now a days nobody cares about Satellite rights even Super Stars.
    Friday, May 15, 2015, 11:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X