For Quick Alerts
  ALLOW NOTIFICATIONS  
  For Daily Alerts

  ಚೆನ್ನೈನಲ್ಲಿ ಕೇಳೋರೇ ಇಲ್ಲ.. ಬೆಂಗಳೂರಲ್ಲಿ 'ಬಾಹುಬಲಿ'ಯೇ ಎಲ್ಲಾ.!

  By Harshitha
  |

  ತೆಲುಗಿನ ಬಹುನಿರೀಕ್ಷಿತ 'ಬಾಹುಬಲಿ-2' ಚಿತ್ರಕ್ಕೆ ಅದೆಷ್ಟು ಕ್ರೇಜ್ ಇದ್ಯೋ, ಇಲ್ವೋ.. ಆ ಕ್ರೇಜ್ ನೆಪದಲ್ಲಿಯೇ ಕರ್ನಾಟಕದಲ್ಲಿ 'ಬಾಹುಬಲಿ'ಯಿಂದಾಗಿ ಕನ್ನಡ ಚಿತ್ರಗಳು ಬಲಿಯಾಗುತ್ತಿವೆ.

  'ಬಾಹುಬಲಿ-2' ಅಬ್ಬರದಿಂದಾಗಿ, ಕನ್ನಡದ ಚಿತ್ರಗಳು ಎತ್ತಂಗಡಿ ಆಗುತ್ತಿವೆ. ಚೆನ್ನಾಗಿ ಕಲೆಕ್ಷನ್ ಮಾಡುತ್ತಿದ್ದ ಕನ್ನಡ ಸಿನಿಮಾಗಳನ್ನ ಸೈಡಿಗೆ ತಳ್ಳಿ 'ಬಾಹುಬಲಿ' ಬರುವಿಕೆಗಾಗಿ ಅವಕಾಶ ಮಾಡಿಕೊಳ್ಳಲಾಗಿದೆ.[ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!]

  ಆದ್ರೆ, ಈ ಪರಿಸ್ಥಿತಿ ತಮಿಳುನಾಡಿನಲ್ಲಿ ಇಲ್ಲ. ಏನೇ ಆದರೂ, ಚೆನ್ನೈ ಮಹಾನಗರದಲ್ಲಿ 'ಬಾಹುಬಲಿ-2' ಬಿಡುಗಡೆ ಆಗುವುದು ನಾಳೆ ಮುಂಜಾನೆಯೇ.! ಮುಂದೆ ಓದಿ...

  ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಪ್ರದರ್ಶನ

  ಬೆಂಗಳೂರಿನಲ್ಲಿ ಇಂದು ರಾತ್ರಿಯಿಂದಲೇ ಪ್ರದರ್ಶನ

  ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಇಂದು ರಾತ್ರಿಯೇ 'ಬಾಹುಬಲಿ-2' ಪ್ರದರ್ಶನ ಆರಂಭವಾಗಲಿದೆ. ಟಿಕೆಟ್ ಬೆಲೆಯಂತೂ ಗಗನಕ್ಕೆ ಏರಿದೆ. ಇಂತಹ ಪರಿಸ್ಥಿತಿ ಚೆನ್ನೈನಲ್ಲಿ ಇಲ್ಲ ಅಂದ್ರೆ ನೀವು ನಂಬಲೇಬೇಕು.['ಬಾಹುಬಲಿ-2' ಮೊಟ್ಟ ಮೊದಲ ವಿಮರ್ಶೆ: ಭಾರತಕ್ಕಿಳಿದ ಹಾಲಿವುಡ್.!]

  ಚೆನ್ನೈನಲ್ಲಿ ನಾಳೆ ಬಿಡುಗಡೆ

  ಚೆನ್ನೈನಲ್ಲಿ ನಾಳೆ ಬಿಡುಗಡೆ

  ಚೆನ್ನೈನಲ್ಲಿ 'ಬಾಹುಬಲಿ-2' ಬಿಡುಗಡೆ ನಾಳೆ ಆಗಲಿದೆ. ಇಂದು ರಾತ್ರಿ ಯಾವುದೇ ಪ್ರದರ್ಶನ ಏರ್ಪಡಿಸಿಲ್ಲ.[ಏಪ್ರಿಲ್ 28ರಿಂದ ಆಂಧ್ರ, ತೆಲಂಗಾಣ ಆಗಿ ಬದಲಾಗಲಿದೆ ಕನ್ನಡದ ಗಾಂಧಿನಗರ.!]

  ಚೆನ್ನೈನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ.?

  ಚೆನ್ನೈನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ.?

  ಚೆನ್ನೈನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಮಾರಾಟವಾಗುತ್ತಿರುವ ಟಿಕೆಟ್ ಬೆಲೆ 220, 120, 100 ಹಾಗೂ 10 ರೂಪಾಯಿ. ನಿಮಗೆ ಆಶ್ಚರ್ಯ ಎನಿಸಿದ್ರೂ, ಇದೇ ಸತ್ಯ.[ಬೆಂಗಳೂರಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಡಿಮ್ಯಾಂಡ್ ಎಷ್ಟಿದೆ ಗೊತ್ತಾ..?]

  ಎಲ್ಲಿಂದ ಎಲ್ಲಿವರೆಗೆ ಹೋದರೂ ಒಂದೇ ಬೆಲೆ.!

  ಎಲ್ಲಿಂದ ಎಲ್ಲಿವರೆಗೆ ಹೋದರೂ ಒಂದೇ ಬೆಲೆ.!

  ಚೆನ್ನೈನಲ್ಲಿ ನೀವು ಎಲ್ಲಿಂದ ಎಲ್ಲಿವರೆಗೆ ಹೋದರೂ, ಟಿಕೆಟ್ ಬೆಲೆ ಒಂದೇ. ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರವೇಶ ದರ ಕೇವಲ 120 ಹಾಗೂ 100 ರೂಪಾಯಿ.!

  ಬೆಂಗಳೂರಿನಲ್ಲಿ ಹಾಗಿಲ್ಲ.!

  ಬೆಂಗಳೂರಿನಲ್ಲಿ ಹಾಗಿಲ್ಲ.!

  ಬೆಂಗಳೂರಿನಲ್ಲಿ ಇಂದು ಮಲ್ಟಿಪ್ಲೆಕ್ಸ್ ಗಳು ಆಡಿದ್ದೇ ಆಟ. 1400 ರೂಪಾಯಿ ವರೆಗೆ ಒಂದು 'ಬಾಹುಬಲಿ-2' ಟಿಕೆಟ್ ಸೇಲ್ ಆಗುತ್ತಿದೆ.

  ಹೈದರಾಬಾದ್ ನಲ್ಲಿ ಇಂದೇ ಪ್ರದರ್ಶನ

  ಹೈದರಾಬಾದ್ ನಲ್ಲಿ ಇಂದೇ ಪ್ರದರ್ಶನ

  ಹೈದರಾಬಾದ್ ನಲ್ಲಿ ಇಂದು ರಾತ್ರಿ 'ಬಾಹುಬಲಿ-2' ಪ್ರದರ್ಶನವಾಗಲಿದೆ.

  ಹೈದರಾಬಾದ್ ನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ.?

  ಹೈದರಾಬಾದ್ ನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ.?

  'ಬಾಹುಬಲಿ-2' ಚಿತ್ರಕ್ಕಾಗಿ ಹೈದರಾಬಾದ್ ನಲ್ಲಿ ಮಾರಾಟವಾಗುತ್ತಿರುವ ಟಿಕೆಟ್ ಬೆಲೆ ಎಷ್ಟು ಗೊತ್ತಾ.? ಕೇವಲ 30, 60, 80 ರೂಪಾಯಿ.!

  ಹೆಚ್ಚು ಅಂದ್ರೆ 100 ರೂಪಾಯಿ.!

  ಹೆಚ್ಚು ಅಂದ್ರೆ 100 ರೂಪಾಯಿ.!

  ಹೈದರಾಬಾದ್ ನ ಬಹುತೇಕ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಮಾರಾಟವಾಗುತ್ತಿರುವ 'ಬಾಹುಬಲಿ-2' ಚಿತ್ರದ ಗರಿಷ್ಠ ಟಿಕೆಟ್ ಬೆಲೆ 100 ರೂಪಾಯಿ.

  ಎಲ್ಲವೂ ಬೆಂಗಳೂರಿನಲ್ಲಿ ಉಲ್ಟಾ.!

  ಎಲ್ಲವೂ ಬೆಂಗಳೂರಿನಲ್ಲಿ ಉಲ್ಟಾ.!

  'ಬಾಹುಬಲಿ-2' ಮೂಲ ತೆಲುಗು ಚಿತ್ರವಾದರೂ, ಆಂಧ್ರ ಹಾಗೂ ತೆಲಂಗಾಣದಲ್ಲಿ ದುಬಾರಿ ಟಿಕೆಟ್ ಬೆಲೆ ಇಲ್ಲ. 'ಬಾಹುಬಲಿ-2' ತಮಿಳಿಗೆ ಡಬ್ ಆಗಿದ್ದರೂ, ಅಲ್ಲೂ ಟಿಕೆಟ್ ಬೆಲೆ ಕಮ್ಮಿ. ಆದ್ರೆ, ಈ ಪರಿಸ್ಥಿತಿ ಬೆಂಗಳೂರಿನಲ್ಲಿ ಇನ್ನೂ ಬಂದಿಲ್ಲ.! ಯಾವಾಗ ಬರುತ್ತೋ.?! ಬೆಂಗಳೂರಿಗರಿಗೆ ಹೊರೆ ಯಾವಾಗ ಕಮ್ಮಿ ಆಗುತ್ತೋ.?!

  English summary
  Most Expected Movie 'Baahubali-2' will start screening in Bengaluru and Hyderabad from tonight 9.45 PM. But not in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X