»   » ಮಂಡ್ಯದ ಗಂಡು ಅಂಬಿಗೆ ಭಾರಿ ಮುಖಭಂಗ

ಮಂಡ್ಯದ ಗಂಡು ಅಂಬಿಗೆ ಭಾರಿ ಮುಖಭಂಗ

Posted By:
Subscribe to Filmibeat Kannada

ರೆಬೆಲ್ ಸ್ಟಾರ್ ಅಂಬರೀಶ್ ಒಮ್ಮೆ 'ರೆಬೆಲ್' ಆಗಿ ಗುಟುರು ಹಾಕಿದರೆ ಸಾಕು, ಕ್ಯಾತೆ ತೆಗೆದವರು ಯಾರೇ ಆಗಲಿ, ಸೈಲೆಂಟ್ ಆಗಿ ಸೈಡಿಗೆ ಹೋಗ್ಬೇಕಿತ್ತು.

ಸ್ಯಾಂಡಲ್ ವುಡ್ ನಲ್ಲಿನ ಎಲ್ಲಾ ವಿವಾದಗಳನ್ನ ನೀರು ಕುಡಿದಷ್ಟೇ ಸಲೀಸಾಗಿ ಪರಿಹಾರ ಮಾಡ್ತಿದ್ದ ಮಂಡ್ಯದ ಗಂಡು, ಈ ಬಾರಿ ಎಡವಿದ್ದಾರೆ. ನಿರ್ಮಾಪಕರು ಮತ್ತು ಕಲಾವಿದರ ನಡುವಿನ ಬಿಕ್ಕಟ್ಟನ್ನ ಶಮನ ಮಾಡಲು ವಿಫಲರಾಗಿದ್ದಾರೆ.

ಅಂಬರೀಶ್ ದನಿಗೆ ಕಲಾವಿದರು ಒಟ್ಟುಗೂಡಲಿಲ್ಲ. ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇತ್ಯರ್ಥವಾಗಬೇಕಿದ್ದ ಸಮಸ್ಯೆ, ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಿರುವ ಕಾರಣ ತಣ್ಣಗಾಗಿದೆ.

ಅಂದ್ಮೇಲೆ, ಕನ್ನಡ ಚಿತ್ರರಂಗದ ಸಾರಥ್ಯ ವಹಿಸಿರುವ ಅಂಬರೀಶ್ ಅವರಿಗೆ ಭಾರಿ ಹಿನ್ನಡೆಯಾಗಿದೆ ಅಂತರ್ಥ ಅಲ್ವಾ. ನಿರ್ಮಾಪಕರ ವಲಯದಿಂದ ಅಂಬಿಗೆ ಮುಖಭಂಗವಾಗಿದೆ.! ಮುಂದೆ ಓದಿ.....

ಕನ್ನಡ ಚಿತ್ರರಂಗದ ಅಘೋಷಿತ ನಾಯಕ ಅಂಬರೀಶ್..!

ಡಾ.ರಾಜ್ ಕುಮಾರ್ ನಂತ್ರ ಇಡೀ ಕನ್ನಡ ಚಿತ್ರರಂಗಕ್ಕೆ 'ನಾಯಕ'ನಾಗಿ ಕಂಡಿದ್ದು ರೆಬೆಲ್ ಸ್ಟಾರ್ ಅಂಬರೀಶ್. ಯಾವುದೇ ಸಮಸ್ಯೆ ಬಂದರೂ, ಎಲ್ಲವೂ ಅಂಬಿ ಮನೆಯಂಗಳದಲ್ಲೇ ಇತ್ಯರ್ಥವಾಗುತ್ತಿತ್ತು. ಅಘೋಷಿತ ನಾಯಕನಾಗಿ ಅನೇಕರ ಪಾಲಿನ ಕಣ್ಮಣಿ ಆಗಿದ್ದ ಅಂಬರೀಶ್ ಗೆ ಇಂದು ಇದೇ ನೆಲದಲ್ಲಿ ಮುಖಭಂಗವಾಗಿದೆ. [ನೊಂದ ನಿರ್ಮಾಪಕರಿಂದ ಅಂಬರೀಶ್ ಗೆ ಮಹಾ ಮಂಗಳಾರತಿ]

ನಿರ್ಮಾಪಕರ ಸಮಸ್ಯೆಗೆ ಅಂಬಿ ಸ್ಪಂದಿಸಲಿಲ್ವಾ?

ಈ ಪ್ರಶ್ನೆಗೆ 'ಖಂಡಿತ ಇಲ್ಲ' ಅಂತ ಹೇಳುವವರು ಯಾರೂ ಇಲ್ಲ. ರಾಜಕೀಯ ಒತ್ತಡದ ನಡುವೆಯೂ ಅಂಬಿ ಬಿಡುವು ಮಾಡಿಕೊಂಡು, ನಿರ್ಮಾಪಕರ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ನಿರ್ಧರಿಸಿದರು. ಮೊದಲು ನಟ ಜಗ್ಗೇಶ್, ನಟಿ ತಾರಾ, ಜಯಮಾಲಾ, ನಿರ್ಮಾಪಕ ಉಮೇಶ್ ಬಣಕರ್, ಬಾಮಾ ಹರೀಶ್ ಜೊತೆಗೆ ಚರ್ಚೆ ನಡೆಸಿದ ಅಂಬಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದರ ಸಂಘದ ಸಭೆ ಕರೆದರು. [ಫಿಲ್ಮ್ ಚೇಂಬರ್ ನಲ್ಲಿ ಕೂಗಾಟ-ಕಿತ್ತಾಟ-ರಂಪಾಟ]

ಕಲಾವಿದರೇ ಬೆಲೆ ಕೊಡಲಿಲ್ಲ..!

ಅಂಬಿ ಕೊಟ್ಟ ಕರೆಗೆ ಎಲ್ಲಾ ಕಲಾವಿದರೂ ಓಗೊಟ್ಟು ಬರಬೇಕಿತ್ತು. ಆದ್ರೆ, ಶಿವರಾಜ್ ಕುಮಾರ್ ಒಬ್ಬರನ್ನ ಬಿಟ್ಟರೆ ಮುಂಚೂಣಿಯಲ್ಲಿರುವ ಯಾವ ನಟರೂ ಸಭೆಗೆ ಬರಲೇ ಇಲ್ಲ. ಬೆರಳೆಣಿಕೆಯಷ್ಟು ಹಿರಿಯ ನಟರು ಮಾತ್ರ ಬಂದಿದ್ದರು. ಇದು ಅಂಬರೀಷ್ ಮಾತಿಗೆ ಕಲಾವಿದರು ಕೊಟ್ಟ ಬೆಲೆ.! [ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ]

ಅಂಬರೀಶ್ ಗೆ ಧಿಕ್ಕಾರ..!

ಅಂಬರೀಶ್ ಬಂದ್ರೆ ಎಲ್ಲರೂ ಎದ್ದು ನಿಲ್ಲುತ್ತಿದ್ದ ಕಾಲವೊಂದಿತ್ತು. ಆದ್ರೆ, ಅದೇ ಅಂಬರೀಶ್ ನಿರ್ಮಾಪಕರಿಂದ ಧಿಕ್ಕಾರ ಕೂಗಿಸಿಕೊಂಡರು. ಅಂಬಿ ಮಾತನ್ನ ಕೇಳುವುದಕ್ಕೆ ನಿರ್ಮಾಪಕರು ಸುತಾರಾಂ ತಯಾರಿರಲಿಲ್ಲ. ಮಾತನಾಡುವುದಕ್ಕೆ ಬಿಡದೆ ಇದ್ದ ಕಾರಣಕ್ಕೆ ಅಂಬಿ ಸಭೆಯಿಂದ ನಿರ್ಗಮಿಸಿದರು. ಅಲ್ಲಿಗೆ, ಕಲಾವಿದರು ಮಾತ್ರ ಅಲ್ಲ, ಅಂಬಿಗೆ ನಿರ್ಮಾಪಕರೂ ಬೆಲೆ ಕೊಡದ ಹಾಗೆ ಆಯ್ತು. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

ನಿರ್ಮಾಪಕರಿಗೆ ಅಂಬರೀಶ್ ಕ್ಷಮೆ ಕೋರಬೇಕು

''ನಾನು ಬಂದಾಗ ನನಗೆ ಬೆಲೆ ಕೊಡಲಿಲ್ಲ. ಅವರಿಗೆ ಸಮಸ್ಯೆ ಇದ್ದರೆ ನನ್ನ ಬಳಿ ಬಂದು ಚರ್ಚಿಸಲಿ. ನಾನಂತೂ ಹೋಗಲ್ಲ. Beggars have no choice'' ಅಂತ ಅಂಬರೀಶ್ ನೀಡಿರುವ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಂಬಿ ವಿರುದ್ಧ ನಿರ್ಮಾಪಕರು ಸಿಡಿದೆದ್ದಿದ್ದಾರೆ. ಅಂಬರೀಶ್ ಕ್ಷಮೆ ಕೋರಬೇಕು ಅಂತ ನಿರ್ಮಾಪಕರು ಪಟ್ಟು ಹಿಡಿದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಂಬಿ ಇಂತಹ ಮಾತನ್ನಾಡಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದ್ಹಂಗೆ ಆಗಿದೆ. [''ನಿರ್ಮಾಪಕರು ಭಿಕ್ಷುಕರು'' - ಮಂಡ್ಯದ ಗಂಡು ಅಂಬರೀಶ್]

ಸರ್ಕಾರ ಮಧ್ಯಪ್ರವೇಶ..!

ಕಳೆದ 17 ದಿನಗಳಿಂದ ಅಂಬರೀಶ್ ಕೈಯಲ್ಲಿ ಆಗದಿದ್ದನ್ನ ಒಂದೇ ದಿನದಲ್ಲಿ ಕರ್ನಾಟಕ ಸರ್ಕಾರ ಮಾಡಿದೆ. ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇತ್ಯರ್ಥವಾಗಬೇಕಿದ್ದ ನಿರ್ಮಾಪಕರ ಬಿಕ್ಕಟ್ಟು ಈಗ ಸಿ.ಎಂ ಅಂಗಳಕ್ಕೆ ಬಿದ್ದಿದೆ. ಮಾನ್ಯ ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ಮಾಪಕರು ಮತ್ತು ಕಲಾವಿದರ ಸಂಘದ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ವಾರ್ತಾ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ಸರ್ಕಾರದ ಭರವಸೆಗೆ ಮಣಿದು, ನಿರ್ಮಾಪಕರು ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವನ್ನ ಕೈಬಿಟ್ಟಿದ್ದಾರೆ. [ಬ್ರೇಕಿಂಗ್ ; ನಿರ್ಮಾಪಕರ ಧರಣಿಗೆ ಕದನ ವಿರಾಮ]

ಅಂಬಿ ಮಾತಲ್ಲಿ ನಂಬಿಕೆ ಇಲ್ಲ..!

ಸರ್ಕಾರ ಕೊಟ್ಟ ಭರವಸೆಯನ್ನೇ ಅಂಬಿ ಕೊಟ್ಟಾಗ ಅವರ ಮಾತಲ್ಲಿ ಯಾರೂ ನಂಬಿಕೆ ಇಡದೆ, ನಿರ್ಮಾಪಕರು ಪ್ರತಿಭಟನೆ ಮುಂದುವರಿಸಿದರು. ಈಗ ಸರ್ಕಾರದ ಬಗ್ಗೆ ನಿರ್ಮಾಪಕರು ವಿಶ್ವಾಸ ಇಟ್ಟಿದ್ದಾರೆ. ಅಂಬಿ ಮೇಲಲ್ಲ..!

ಇದು 'ನಾಯಕ'ನಿಗಾದ ಮುಖಭಂಗ ಅಲ್ಲವೇ?

ಅಂಬಿ ಮಾತಿಗೆ ತಲೆ ಬಾಗುತ್ತಿದ್ದವರು ಈಗ ಅಂಬಿ ಬಿಟ್ಟು, ಸರ್ಕಾರದ ಮೊರೆ ಹೋಗಿದ್ದಾರೆ ಅಂದ್ರೆ, ಕನ್ನಡ ಚಿತ್ರರಂಗದ 'ಅಘೋಷಿತ ನಾಯಕ' ಅಂಬರೀಶ್ ಗಾದ ಮುಖಭಂಗ ಅಲ್ಲವೇ? ನೀವೇ ಹೇಳಿ...

English summary
Kannada Actor Ambareesh was Undisputed Leader of Sandalwood. But the situation now has turned down. None of the Film Producers and Artists are obeying to Ambareesh's words.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada