»   » ಎಲ್ಲಿಂದಲೋ ಬಂದವರು ಈಗ ಕನ್ನಡ ಬಾಂಧವರು

ಎಲ್ಲಿಂದಲೋ ಬಂದವರು ಈಗ ಕನ್ನಡ ಬಾಂಧವರು

By: ಜೀವನರಸಿಕ
Subscribe to Filmibeat Kannada

ಮೊನ್ನೆ ಮೊನ್ನೆ ನಡೆದ ಕನ್ನಡ ಸಿನಿಮಾವೊಂದರ ಮುಹೂರ್ತದಲ್ಲಿ ಹೊಸ ಹೀರೋಯಿನ್ ಒಬ್ಬರನ್ನ ಮಾತಾಡಿಸೋಕೆ ಹೋದೆ ಹಾಯ್ ಮೊದಲನೆ ಸಿನಿಮಾನಾ ಅಂದ್ರೆ, "ಯಾ ಯು ನೋ ದಿಸ್ ಈಸ್ ಮೈ ಫಸ್ಟ್ ಮೂವಿ ಬಿಫೋರ್ ದಿಸ್..." ಹಾಗೆ ಹೀಗೆ ಅಂತ ಮಾತಾಡಿದ್ದು ನೋಡಿ ಓಹ್ ಇದ್ಯಾವುದೋ ತಮಿಳು, ತೆಲುಗು ಇರಬೇಕು ಅಂದ್ಕೊಂಡು ಸುಮ್ಮನಾದೆ.

ಆದರೆ ಮುಹೂರ್ತ ಮುಗಿಯೋದ್ರೊಳಗೆ ಗೊತ್ತಾಯ್ತು. ಆ ನವನಟಿ ನಮ್ಮ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಅಂತ. ಕನ್ನಡಾನೇ ಬರಲ್ವೇನೋ ಅನ್ನೋ ತರಹ ಇಂಗ್ಲೀಷ್ ಮಾತನಾಡೋ ಕನ್ನಡದ ಹುಡುಗೀರು, ಪಾಪ ತಮಿಳು-ತೆಲುಗು-ಹಿಂದಿಯಿಂದ ಬಂದು ಕನ್ನಡ ಕಲಿತೇ ತೀರ್ತೀನಿ ಅಂತ ಒಂದೆರೆಡು ವರ್ಷದಲ್ಲಿ ಕನ್ನಡ ಕಲಿಯೋ ಪರಭಾಷಾ ನಟಿಯರು. ಹೇಗಿದೆ ಅಲ್ವಾ ಭಾಷಾ ಪ್ರೇಮ.

ಅದರಲ್ಲೂ ಕನ್ನಡದವರ ಕಥೇನೇ ಹಂಗೆ, ಮನೆಗೆ ಮಾರಿ ಪರರಿಗೆ ಉಪಕಾರಿ ಅನ್ನೋ ಹಂಗೆ. ಈ ನಟಿಯರು ತಮಿಳು, ತೆಲುಗು ಇಂಡಸ್ಟ್ರಿಗೆ ಹೋದರೆ ಅಲ್ಲಿ ತಡಬಡಾಯಿಸ್ಕೊಂಡು ತೆಲುಗು, ತಮಿಳು ಕಲಿಯೋಕೆ ಪ್ರಯತ್ನ ಮಾಡೋದು ನೋಡಿದ್ರೆ ಛೀ ನಾಚಿಕೆಗೇಡು ಅನ್ನಿಸುತ್ತೆ. ಈ ತರಹದ ನಟಿಯರ ನಡುವೆ ಎಲ್ಲಿಂದಲೋ ಬಂದು ಪ್ರೀತಿಯಿಂದ ಕನ್ನಡ ಕಲಿತಿರೋ ನಟಿಮಣಿಯರ ಲಿಸ್ಟ್ ಇಲ್ಲಿದೆ ನೋಡಿ.

ಕನ್ನಡ ಕಲಿತಿದ್ದಾರೆ ರಾಗಿಣಿ

ರಾಗಿಣಿ ಬಾಂಬೆಯಿಂದ ಬೆಂಗಳೂರಿಗೆ ಹಾರಿಬಂದು ವೀರಮದಕರಿಯಲ್ಲಿ ಮಿಂಚೋ ಜೊತೆಗೆ ಕನ್ನಡ ಮಾತಾಡೋದನ್ನ ಕಲಿಯೋ ಪ್ರಯತ್ನ ಮಾಡಿದ್ರು. ಈಗ ಗ್ಲಾಮರ್ ಡಾಲ್ ಕನ್ನಡವನ್ನ ಅರಳು ಹುರಿದಂತೆ ಮಾತನಾಡುತ್ತಾರೆ. ಸೂಪರ್ ಅಲ್ವಾ ಹಾಗೆ ನೋಡಿದ್ರೆ ಕನ್ನಡ ಕಲೀದೇನೂ ಅವರು ಇರಬಹುದಾಗಿತ್ತು.

ಮಳೆ ಹುಡುಗಿ ಮಾತಲ್ಲಿ ಕನ್ನಡ

ಸಕಲೇಶಪುರದಲ್ಲಿ ಮುಂಗಾರುಮಳೆ ಶೂಟಿಂಗ್ ನಡೀತಿದ್ದ ಸಂದರ್ಭದಲ್ಲಿ ಯೋಗರಾಜ ಭಟ್ ಹಾಗೂ ಗಣೇಶ್ ಪತ್ರಕರ್ತರ ಜೊತೆ ಮಾತ್ನಾಡೋದನ್ನ ನೋಡಿ ಬೆಪ್ಪಾಗಿ ಕುಳಿತಿದ್ರು ಪೂಜಾಗಾಂಧಿ. ಈಗ ಕನ್ನಡದಲ್ಲಿ ಹಾಡು ಹಾಡೋ ಮಟ್ಟಕ್ಕೆ ಕಲಿತಿದ್ದಾರೆ. ಅಭಿನೇತ್ರಿ ಸಿನಿಮಾಗೆ ಡಬ್ಬಿಂಗ್ ಕೂಡ ಮಾಡಿದ್ದಾರೆ. ಶಹಬ್ಬಾಸ್ ಪೂಜಾ.

ಕೃತಿ ಕರಬಂಧ ಕನ್ನಡದ ಪ್ರೀತಿ

ಕನ್ನಡ ಚಿತ್ರರಂಗಕ್ಕೆ ಚಿರು ಮೂಲಕ ಕೃತಿ ಕರಬಂಧ ಎಂಟ್ರಿಕೊಟ್ಟು ಐದಾರು ವರ್ಷ ಕಳೆದಿದೆ ಅಷ್ಟೇ. ಆದರೆ ಪರ್ತಕರ್ತರ ಜೊತೆ ನಟ ನಟಿಯರ ಜೊತೆ ಕನ್ನಡದಲ್ಲೇ ಮಾತನಾಡೋ ಕೃತಿ ಅವರ ಕನ್ನಡದ ಬಂಧ ನಿಜಕ್ಕೂ ಲವ್ಲಿ.

ಕನ್ನಡದ ಮೇಲೆ ಪ್ಯಾರ್ ಗೆ ಆಗ್ಬಿಟ್ಟೈತೆ

ಕನ್ನಡ ಅವಕಾಶ ಕೊಟ್ಟಿದೆ. ಕನ್ನಡದಲ್ಲೇ ಇರ್ತೀನಿ ಕನ್ನಡ ಸಿನಿಮಾವನ್ನೇ ಮಾಡ್ತೀನಿ. ಬಾಂಬೆಗೆ ಹೋಗಲ್ಲ ಅಂದ ನಟಿ ಪರೂಲ್ ಯಾದವ್ ಗೆ ಕನ್ನಡದ ಮೇಲೆ ಪ್ಯಾರ್ ಗೆ ಆಗ್ಬಿಟ್ಟೈತೆ. ಪರೂಲ್ ರಿಗೆ ಕನ್ನಡ ಮಾತಾಡೋದೂ ಅಂದ್ರೆ ಇಷ್ಟ. ಕಷ್ಟಪಟ್ಟಾದ್ರೂ ಕನ್ನಡ ಮಾತ್ನಾಡೋ ಪ್ರಯತ್ನ ಮಾಡ್ತಾರೆ.

ಕನ್ನಡತಿಯಾಗಿದ್ದಾರೆ ಐಂದ್ರಿತಾ

ಈ ಬೆಡಗಿ ಬೆಂಗಾಲಿ ಅಂತ ಯಾರಿಗೂ ಅನ್ನಿಸೋದಿಲ್ಲ. ಕನ್ನಡದ ನಟಿಯರಿಗಿಂತ ಸುಂದರವಾಗಿ ಕನ್ನಡ ಮಾತ್ನಾಡೋ ಐಂದ್ರಿತಾ ರೇ 'ಮನಸಾರೆ' ಇಷ್ಟಪಟ್ಟು ಕನ್ನಡ ಕಲಿತಿದ್ದಾರೆ. ಆದರೆ ಕನ್ನಡದ ನಟಿಯರಿಗೆ ಯಾವಾಗ ಕನ್ನಡ ಪ್ರೀತಿ ಬರುತ್ತೋ ಗೊತ್ತಿಲ್ಲ.

English summary
Here is the list of Non-Kannada actresses of Sandalwood who speaks fluent Kannada. Actors like Ragini Dwivedi, Pooja Gandhi, Parul Yadav, Kriti Kharbanda, Aindrtita Ray all are not belonging to Karnataka. But these actors are familiar with Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada