For Quick Alerts
  ALLOW NOTIFICATIONS  
  For Daily Alerts

  ಮೈಸೂರಲ್ಲ..ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ- ಅಶ್ವತ್ಥ್ ನಾರಾಯಣ್

  |
  ಮೈಸೂರಲ್ಲ ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ನಿರ್ಮಾಣ- ಅಶ್ವತ್ಥ್ ನಾರಾಯಣ್ | Filmibeat Kannada

  ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎನ್ನುವುದು ಎಷ್ಟೋ ವರ್ಷದ ಕನಸು. ಕಳೆದ ಬಾರಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ಬಾಬು ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡುವ ಪ್ಲಾನ್ ಇದೆ ಎಂದಿದ್ದರು. ಆದರೆ, ಅದು ಈಗ ಬೆಂಗಳೂರಿಗೆ ಶಿಫ್ಟ್ ಆಗಿದೆ.

  ಮೈಸೂರಿನಲ್ಲಿ ಅಲ್ಲ.. ಬೆಂಗಳೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆಯಂತೆ. ಈ ವಿಷಯವನ್ನು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ನಿನ್ನೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಡಾ.ವಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಫಿಲ್ಮ್ ಸಿಟಿ ವಿಷಯ ಹಂಚಿಕೊಂಡಿದ್ದಾರೆ.

  ಬಿಜಿಪಿ ಸರ್ಕಾರ ರಾಜ್ಯದಲ್ಲಿ ಬಂದ ದಿನವೇ ಮುಖ್ಯಮಂತ್ರಿ ಯಡಿಯೂರಪ್ಪ ಫಿಲ್ಮ್ ಸಿಟಿ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿದ್ದು, ಈ ಜವಾಬ್ದಾರಿಯನ್ನು ಅಶ್ವತ್ಥ್ ನಾರಾಯಣ್ ರಿಗೆ ನೀಡಿದ್ದಾರಂತೆ. ಹೀಗಾಗಿ, ತಮ್ಮ ಸರ್ಕಾರದಿಂದ ಫಿಲ್ಮ್ ಸಿಟಿ ನಿರ್ಮಾಣ ಆಗುವುದು ಖಚಿತ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

  ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದ್ಯಾ ಫಿಲಂಸಿಟಿ ಕನಸು?ದ್ವೇಷ ರಾಜಕಾರಣಕ್ಕೆ ಬಲಿಯಾಗುತ್ತಿದ್ಯಾ ಫಿಲಂಸಿಟಿ ಕನಸು?

  ಫಿಲ್ಮ್ ಸಿಟಿಗಾಗಿ ಬೆಂಗಳೂರಿನಲ್ಲಿ ಈಗಾಗಲೇ ಒಂದು ಜಾಗ ನೋಡಲಾಗಿತಂತೆ. ಆದರೆ, ಕಾರಣಾಂತರಗಳಿಂದ ಆ ಜಾಗದಲ್ಲಿ ನಿರ್ಮಾಣ ಕಾರ್ಯ ಮಾಡಲು ಆಗುತ್ತಿಲ್ಲ. ಹೀಗಾಗಿ ಇನ್ನೊಂದು ಜಾಗವನ್ನು ಗುರುತಿಸಬೇಕಿದೆಯಂತೆ. ಆದಷ್ಟು ಬೇಗ ಈ ಕೆಲಸಗಳು ನಡೆಯಲಿದ್ದು, ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ಸಂಸ್ಥೆಗಳು ನಿರ್ಮಾಣ ಕಾರ್ಯದಲ್ಲಿ ಜೊತೆಯಾಗಲಿವೆಯಂತೆ.

  ನಮ್ಮ ಸರ್ಕಾರ ಚಿತ್ರರಂಗದ ಅಭಿವೃದ್ದಿಗೆ ಪೂರ್ಣ ಸಹಕಾರ ನೀಡುತ್ತಿದ್ದು, ಆದಷ್ಟು ಬೇಗ ಫಿಲ್ಮ್ ಸಿಟಿ ನಿರ್ಮಾಣ ಆಗುತ್ತದೆ ಎಂದು ಅಶ್ವತ್ಥ್ ನಾರಾಯಣ್ ಭರವಸೆ ನೀಡಿದ್ದಾರೆ.

  English summary
  Not mysore film city shifted to bengaluru says deputy chief minister of karnataka Ashwath Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X