»   » ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!

ಪುರಿ ಜಗನ್ನಾಥ್ ಅಲ್ಲ..! ನಿಖಿಲ್ ಚಿತ್ರಕ್ಕೆ ಹೊಸಬರು ಬಂದ್ರಲ್ಲ!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಬಣ್ಣದ ಬದುಕಿಗೆ ಕಾಲಿಡುತ್ತಿದ್ದಾರೆ. ಸ್ಯಾಂಡಲ್ ವುಡ್ ಗೆ ನಿಖಿಲ್ ಗೌಡ ಗ್ರ್ಯಾಂಡ್ ಎಂಟ್ರಿ ನೀಡಲಿರುವ ಚಿತ್ರಕ್ಕೆ ಟಾಲಿವುಡ್ ನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳ್ತಾರೆ ಅಂತ ಹೇಳಲಾಗಿತ್ತು.

ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಗೌಡ, ನಿರ್ದೇಶಕ ಪುರಿ ಜಗನ್ನಾಥ್ ಜೊತೆ ಮಾತುಕತೆ ಕೂಡ ನಡೆಸಿದ್ದರು. ಎಲ್ಲವೂ ಫೈನಲ್ ಆಗುವ ಹೊತ್ತಿಗೆ ಪ್ರಾಜೆಕ್ಟ್ ನಿಂದ ಪುರಿ ಜಗನ್ನಾಥ್ ಹಿಂದೆ ಸರಿದಿದ್ದಾರೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

Not Puri Jagannath, Rajamouli associate Mahadev to direct Nikhil Gowda's debut movie

'ಜ್ಯೋತಿ ಲಕ್ಷ್ಮಿ' ಚಿತ್ರದ ಶೂಟಿಂಗ್ ನಲ್ಲಿ ಪುರಿ ಜಗನ್ನಾಥ್ ಬಿಜಿಯಾಗಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಲಿರುವ 150ನೇ ಚಿತ್ರ 'ಆಟೋ ಜಾನಿ' ನಿರ್ದೇಶನದ ಹೊಣೆ ಕೂಡ ಪುರಿ ಜಗನ್ನಾಥ್ ಮೇಲಿದೆ. ಡೇಟ್ಸ್ ಸಮಸ್ಯೆ ಆಗಿರುವ ಕಾರಣ ನಿಖಿಲ್ ಗೌಡ ನಟಿಸಲಿರುವ ಚಿತ್ರವನ್ನ ಪುರಿ ಜಗನ್ನಾಥ್ ಕೈಬಿಟ್ಟಿದ್ದಾರೆ.

ಇದೇ ಜಾಗಕ್ಕೆ ಎಚ್.ಡಿ.ಕುಮಾರಸ್ವಾಮಿ ಹೊಸಬರನ್ನ ಆಯ್ಕೆ ಮಾಡಿದ್ದಾರೆ. ಆ ನವ ಪ್ರತಿಭೆ ಹೆಸರು ಮಹದೇವ್. ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಶಿಷ್ಯ. ವರ್ಷಗಳಿಂದ ರಾಜಮೌಳಿ ಜೊತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಮಹದೇವ್ ಗೆ ಈಗ ನಿಖಿಲ್ ಗೌಡ ಬಣ್ಣ ಹಚ್ಚುವ ಮೊದಲ ಚಿತ್ರಕ್ಕೆ ಸ್ವತಂತ್ರ ನಿರ್ದೇಶಕನಾಗುವ ಚಾನ್ಸ್ ಸಿಕ್ಕಿದೆ. [ಕೆಸಿಎನ್ ಮೋಹನ್ ಮಗಳಿಗೂ, ಎಚ್ಡಿಕೆ ಮಗನಿಗೂ ಡುಂಡುಂಡುಂ]

nikhil gowda

ಮಹದೇವ್ ಅವರಲ್ಲಿರುವ ಹುಮ್ಮಸ್ಸು ಮತ್ತು ಪ್ರತಿಭೆ ನೋಡಿ ಎಚ್.ಡಿ.ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರಂತೆ. ವಿಶೇಷ ಅಂದ್ರೆ, ಇಡೀ ಭಾರತದಾದ್ಯಂತ ಸೆನ್ಸೇಷನ್ ಹುಟ್ಟುಹಾಕಿರುವ 'ಬಾಹುಬಲಿ' ಚಿತ್ರಕ್ಕೆ ಕಥೆ ಬರೆದಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್, ನಿಖಿಲ್ ಗೌಡ ಪ್ರಥಮ ಚಿತ್ರಕ್ಕೂ ಕಥೆ ರಚಿಸಿದ್ದಾರೆ. [ತ್ರಿಭಾಷಾ ಚಿತ್ರ 'ಜಾಗ್ವಾರ್'ನಲ್ಲಿ ಎಚ್ಡಿಕೆ ಪುತ್ರ ನಿಖಿಲ್!]

ಅಂದ್ಹಾಗೆ, ಚಿತ್ರಕ್ಕೆ 'ಜಾಗ್ವಾರ್' ಅಂತ ಟೈಟಲ್ ಫಿಕ್ಸ್ ಆಗಿದೆ ಅನ್ನುವ ಸುದ್ದಿ ಕೂಡ ಇದೆ. ಚೆನ್ನಾಂಬಿಕ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 6ನೇ ಚಿತ್ರ ಇದಾಗಿದ್ದು, ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಕ್ಕೆ ನಾಳೆ (ಜೂನ್ 10) ಎಚ್.ಡಿ.ಕುಮಾರಸ್ವಾಮಿ ಪತ್ರಿಕಾಗೋಷ್ಠಿಯನ್ನ ಕರೆದಿದ್ದಾರೆ.

English summary
H.D.Kumaraswamy's son Nikhil Gowda is all set to enter Sandalwood. According to the latest buzz, Its Mahadev, Associate to Tollywood Director Rajamouli who will direct Nikhil Gowda's debut movie 'Jaguar' and not Puri Jagannath.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X