»   » ಸುದೀಪ್ ಅಲ್ಲ! ಮುತ್ತಪ್ಪ 'ರೈ' ಆಗಿ ವಿವೇಕ್ ಒಬೆರಾಯ್.!

ಸುದೀಪ್ ಅಲ್ಲ! ಮುತ್ತಪ್ಪ 'ರೈ' ಆಗಿ ವಿವೇಕ್ ಒಬೆರಾಯ್.!

Posted By:
Subscribe to Filmibeat Kannada

ಮಾಜಿ ಭೂಗತ ಲೋಕದ ದೊರೆ ಮುತ್ತಪ್ಪ ರೈ ಜೀವನ ಚರಿತ್ರೆ ಆಧರಿಸಿರುವ 'ಅಪ್ಪ' ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಸೆನ್ಸೇಷನಲ್ ಕಮ್ ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುವ ಸುದ್ದಿಯನ್ನ ನೀವು ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. [ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]

ಹಾಗೇ, ಕಿಚ್ಚ ಸುದೀಪ್ ರವರ ಹುಟ್ಟುಹಬ್ಬದಂದು ಈ ಚಿತ್ರಕ್ಕೆ 'ಅಪ್ಪ' ಬದಲು 'ರೈ' ಶೀರ್ಷಿಕೆಯನ್ನ ರಾಮ್ ಗೋಪಾಲ್ ವರ್ಮಾ ಅನೌನ್ಸ್ ಮಾಡಿದ ಸುದ್ದಿ ಕೂಡ ನಿಮಗೆ ಗೊತ್ತಿರಬಹುದು. [ವರ್ಮಾ-ಸುದೀಪ್ 'ಅಪ್ಪ' ಚಿತ್ರಕ್ಕೆ ಟೈಟಲ್ ಚೇಂಜ್!]

ಇನ್ನು ಕೆಲವೇ ದಿನಗಳಲ್ಲಿ 'ರೈ' ಸಿನಿಮಾ ಸೆಟ್ಟೇರುತ್ತಿದೆ. ಮುತ್ತಪ್ಪ ರೈ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಬೇಕಿತ್ತು. ಅಂಡರ್ ವರ್ಲ್ಡ್ ಡಾನ್ ಆಗಿ ಸುದೀಪ್ ಮಿಂಚ್ಬೇಕಿತ್ತು. ಆದ್ರೀಗ, ಹಾಗಾಗುತ್ತಿಲ್ಲ. 'ರೈ' ಚಿತ್ರದಲ್ಲಿ ಸುದೀಪ್ ಇಲ್ಲ.! ಮುಂದೆ ಓದಿ....

'ರೈ' ಚಿತ್ರದಲ್ಲಿ ಇರಲ್ಲ ಕಿಚ್ಚ ಸುದೀಪ್!

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಮೂಡಿಸಬಹುದು. ಮುತ್ತಪ್ಪ 'ರೈ' ಆಗಿ ಸುದೀಪ್ ಕಾಣಿಸಿಕೊಳ್ಳುತ್ತಿಲ್ಲ. 'ರೈ' ಚಿತ್ರವನ್ನ ಕಿಚ್ಚ ಸುದೀಪ್ ಕೈಬಿಟ್ಟಿದ್ದಾರೆ. [ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ]

ರಾಮ್ ಗೋಪಾಲ್ ವರ್ಮಾ ಟ್ವೀಟ್

ಮೇ 1 ರಂದು 'ರೈ' ಚಿತ್ರಕ್ಕೆ ಚಾಲನೆ ನೀಡುತ್ತಿರುವ ರಾಮ್ ಗೋಪಾಲ್ ವರ್ಮಾ ಈ ಬಗ್ಗೆ ಖುದ್ದು ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ ಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ಕಿಸಿ....

'ರೈ' ಪಾತ್ರದಲ್ಲಿ ವಿವೇಕ್ ಒಬೆರಾಯ್

ಮುತ್ತಪ್ಪ ರೈ ರವರನ್ನ 'ದಿ ಗ್ರೇಟೆಸ್ಟ್ ಗ್ಯಾಂಗ್ ಸ್ಟರ್ ಎವರ್' ಅಂತ ಕರೆದಿರುವ ರಾಮ್ ಗೋಪಾಲ್ ವರ್ಮಾ, 'ಮೇ 1 ರಂದು 'ರೈ' ಚಿತ್ರಕ್ಕೆ ಚಾಲನೆ ನೀಡುತ್ತೇನೆ' ಅಂತ ಟ್ವೀಟ್ ಮಾಡಿದ್ದಾರೆ. ಜೊತೆಗೆ 'ರೈ' ಪಾತ್ರವನ್ನ ವಿವೇಕ್ ಒಬೆರಾಯ್ ನಿರ್ವಹಿಸುವ ಬಗ್ಗೆ ರಾಮ್ ಗೋಪಾಲ್ ವರ್ಮಾ ಕನ್ಫರ್ಮ್ ಮಾಡಿದ್ದಾರೆ.

ಸುದೀಪ್ ಯಾಕೆ ಅಲ್ಲ!

''ಮೊದಲು ಸುದೀಪ್ ಜೊತೆ 'ರೈ' ಚಿತ್ರವನ್ನ ಪ್ಲಾನ್ ಮಾಡಿದ್ದೆ. ಆದ್ರೀಗ, ಅನೇಕ ಕಾರಣಗಳಿಂದ ಆ ಪಾತ್ರಕ್ಕೆ ವಿವೇಕ್ ಒಬೆರಾಯ್ ಬಣ್ಣ ಹಚ್ಚಲಿದ್ದಾರೆ' ಅಂತ ಟ್ವೀಟ್ ಮಾಡಿದ್ದಾರೆ ರಾಮ್ ಗೋಪಾಲ್ ವರ್ಮಾ.

'ರೈ' ಚಿತ್ರೀಕರಣ ಎಲ್ಲೆಲ್ಲಿ....

ರಾಮ್ ಗೋಪಾಲ್ ವರ್ಮಾ ರವರೇ ಟ್ವೀಟ್ ಮಾಡಿರುವ ಪ್ರಕಾರ, 'ರೈ' ಚಿತ್ರದ ಚಿತ್ರೀಕರಣ ಮಂಗಳೂರು, ಬೆಂಗಳೂರು, ಮುಂಬೈ, ದುಬೈ ಹಾಗೂ ಲಂಡನ್ ನಲ್ಲಿ ನಡೆಯಲಿದೆ.

ಮೇ 1 'ಮುತ್ತಪ್ಪ ರೈ' ಹುಟ್ಟುಹಬ್ಬ!

ಮೇ 1 ರಂದು ಮುತ್ತಪ್ಪ ರೈ ರವರ ಹುಟ್ಟುಹಬ್ಬವಿದ್ದು, ಅಂದೇ 'ರೈ' ಚಿತ್ರದ ಮೊದಲ ಪೋಸ್ಟರ್ ಅನಾವರಣ ಮಾಡುವುದಕ್ಕೆ ಮುತ್ತಪ್ಪ ರೈ ಒಪ್ಪಿಕೊಂಡಿದ್ದಾರಂತೆ. ಹಾಗಂತ ವರ್ಮಾ ಟ್ವೀಟ್ ಮಾಡಿದ್ದಾರೆ.

ನಾಲ್ಕು ಭಾಷೆಗಳಲ್ಲಿ 'ರೈ'

ಸಿ.ಆರ್.ಮನೋಹರ್ 'ರೈ' ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗಲಿದೆ.

ಮುತ್ತಪ್ಪ ರೈ ಮುಂದೆ ಯಾರೂ ಅಲ್ಲ!

'ರೈ' ಮುಂದೆ ಕುಖ್ಯಾತ ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, Pablo Escobar, Al Capone ಕೂಡ ಏನಿಲ್ಲ ಅಂತ ವರ್ಮಾ ಟ್ವೀಟ್ ಮಾಡಿದ್ದಾರೆ.

English summary
Instead of Kiccha Sudeep, Bollywood Actor Vivek Oberoi is roped into play Title role in Ram Gopal Varma's 'Rai'. The movie is based upon the life of former Underworld Don Muthappa Rai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada