»   » 'ನೋಟ್ ಬ್ಯಾನ್', 'ಜಿ.ಎಸ್.ಟಿ'ಯಿಂದಾಗಿ ನೆಲ ಕಚ್ಚಿದ ಕನ್ನಡ ಚಿತ್ರರಂಗ.!

'ನೋಟ್ ಬ್ಯಾನ್', 'ಜಿ.ಎಸ್.ಟಿ'ಯಿಂದಾಗಿ ನೆಲ ಕಚ್ಚಿದ ಕನ್ನಡ ಚಿತ್ರರಂಗ.!

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗ ಈಗ ಬೆಳೆಯುತ್ತಿದೆ. ವಿಭಿನ್ನ ಸಿನಿಮಾಗಳು ಹಾಗೂ ಹೊಸ ಹೊಸ ಪ್ರಯೋಗಗಳನ್ನ ಪ್ರಾರಂಭ ಮಾಡುತ್ತಿದೆ. ಸಾಕಷ್ಟು ವರ್ಷಗಳಿಂದ 'ಟ್ಯಾಕ್ಸ್ ಫ್ರೀ'ಯಲ್ಲಿ ನಡೆದುಕೊಂಡು ಬರುತ್ತಿದ್ದ ಸ್ಯಾಂಡಲ್ ವುಡ್ ಈಗ 'ನೋಟ್ ಬ್ಯಾನ್' ಹಾಗೂ 'ಜಿ.ಎಸ್.ಟಿ' ಹೊರೆಯಿಂದಾಗಿ ತತ್ತರಿಸಿ ಹೋಗಿದೆ.

'ನೋಟ್ ಬ್ಯಾನ್' ಆಗಿ ಜಿ.ಎಸ್.ಟಿ ಭಾರವನ್ನು ಹೊರಲಾರದೆ ಕನ್ನಡ ಸಿನಿಮಾರಂಗ ಸಾಕಾಗಿ ಹೋಗಿದೆ. ಸಿನಿಮಾ ಮಂದಿರಗಳಿಗೆ ಜನರನ್ನ ಕರೆ ತರೋದೇ ದೊಡ್ಡ ವಿಚಾರ ಅಂತಿದ್ದಾರೆ ಚಿತ್ರರಂಗದವರು. ಹಾಗಾದ್ರೆ ನೋಟ್ ಬ್ಯಾನ್ ಮತ್ತು ಜಿ.ಎಸ್.ಟಿ ಬಗ್ಗೆ ಏನ್ ಅಂತಾರೆ ಸ್ಟಾರ್ಸ್ ಮತ್ತು ಟೆಕ್ನೀಷಿಯನ್ಸ್ ಎಂಬುದನ್ನ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಪಾರದರ್ಶಕತೆಗೆ ಸ್ವಾಗತ, ಆದ್ರೆ ಈ ಹೊರೆ ಯಾಕೆ?

''ನೋಟ್ ಬ್ಯಾನ್, ಜಿ.ಎಸ್.ಟಿ ಪ್ಲಾನ್ ಓಕೆ. ಆದ್ರೆ, ಅದರ ಹೊರ ಮಾತ್ರ ತುಂಬಾ ದೊಡ್ಡದಾಗಿದೆ. ನಿರ್ಮಾಪಕಿಯಾಗಿ ಚಿತ್ರದಿಂದ ಬಂದ ಎಲ್ಲಾ ಹಣ ಟ್ಯಾಕ್ಸ್ ಗೆ ತುಂಬೋದೇ ಆಯ್ತು. ನಾವೆಲ್ಲಾ ಹೇಗೋ ಸುಧಾರಿಸಿಕೊಳ್ತೀವಿ. ಆದ್ರೆ ಬಡವರಿಗೆ ಮಾತ್ರ ತುಂಬಾ ಕಷ್ಟ ಆಗ್ತಿದೆ. ಇದರ ಬಗ್ಗೆ ಸರ್ಕಾರ ಗಮನ ಕೊಡಬೇಕು'' ಅಂತಾರೆ ನಟಿ ರಚಿತಾ ರಾಮ್.

ಬಡವರ ಮೇಲೆ ಯಾಕೆ ಬರೆ ಹಾಕ್ತೀರಾ?

''ಬಡವರ ಮೇಲೆ ಪರಿಣಾಮ ಆಗಿರೋದು ನೋವಿನ ವಿಚಾರ, ರೈತರಿಗೆ ಇದರಿಂದ ಕಷ್ಟ ಆಗ್ತಿದೆ. ಇನ್ನು ಸಿನಿಮಾಗಾಗಿ ಎಲ್ಲಿಂದಲೋ ತರುವ ಹಣಕ್ಕೂ ಟ್ಯಾಕ್ಸ್, ಅದನ್ನ ಖರ್ಚು ಮಾಡೋದಕ್ಕೂ ಟ್ಯಾಕ್ಸ್. ಜೀರೋ ಪರ್ಸೆಂಟ್ ಇದ್ದ ಟ್ಯಾಕ್ಸ್ ಈಗ 18% ಗೆ ಬಂದು ನಿಂತಿದೆ. ಸಿನಿಮಾರಂಗಕ್ಕೂ ಕಷ್ಟ ಆಗುತ್ತೆ'' ಎನ್ನುತ್ತಾರೆ ನಟ ದುನಿಯಾ ವಿಜಯ್.

ಇದು ಕನ್ನಡ ಸಿನಿಮಾರಂಗಕ್ಕೆ ಆದ ಮೋಸ

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ.ರಾ.ಗೋವಿಂದು ಜಿ.ಎಸ್.ಟಿ ಮತ್ತು ನೋಟ್ ಬ್ಯಾನ್ ಅನ್ನ ವಿರೋಧ ಮಾಡ್ತಾರೆ. ''ವರ್ಷಗಳು ಕಳೆದರೂ ಕೂಡ ಇನ್ನೂ ಜಿ.ಎಸ್.ಟಿ ಅರ್ಥ ಆಗಿಲ್ಲ. ವರ್ಷಾನುವರ್ಷದಿಂದ ಜೀರೋ ಟ್ಯಾಕ್ಸ್ ನಲ್ಲಿದ್ದ ಚಿತ್ರರಂಗಕ್ಕೆ 18% ಟ್ಯಾಕ್ಸ್ ಏರಿಕೆಯಾಗಿದೆ. ಪರಭಾಷೆಗಳಿಗೆ 36% ಇದ್ದ ಟ್ಯಾಕ್ಸ್ 18% ಆಗಿದೆ ಇದು ಚಿತ್ರರಂಗಕ್ಕೆ ಆದ ಅನ್ಯಾಯ'' ಅಂತ ಬೇಸರ ವ್ಯಕ್ತಪಡಿಸುತ್ತಾರೆ ಸಾ.ರಾ.ಗೋವಿಂದು

ಥಿಯೇಟರ್ ಕಡೆ ಮುಖ ಮಾಡದ ಜನರು

ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಥಿಯೇಟರ್ ಮಾಲೀಕರು ಆಗಿರುವ ಥಾಮಸ್ ಅವರ ಪ್ರಕಾರ ನೋಟ್ ಬ್ಯಾನ್ ತಪ್ಪಲ್ಲ, ಆದ್ರೆ ಜಿ.ಎಸ್.ಟಿ ಹೊರೆ ನಮಗೆ ಬೇಕಿಲ್ಲ. ಜಿ.ಎಸ್.ಟಿ ಜಾರಿ ಆದಾಗಿನಿಂದ ಥಿಯೇಟರ್ ಗೆ ಬರುವ ಸಿನಿಮಾ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಅಂತಾರೆ.

ಅಕೌಂಟ್ ಗೆ ಬಂದು ಬೀಳುತ್ತೆ ಹಣ

ಚಿತ್ರರಂಗದ ಕಾರ್ಮಿಕ ಒಕ್ಕೂಟಕ್ಕೆ ಯಾವುದೇ ರೀತಿ ತೊಂದರೆಗಳಾಗಿಲ್ಲ. ಮೊದಲು ಕೈಗೆ ಬರ್ತಿದ್ದ ಹಣ ಈಗ ನೇರವಾಗಿ ಅಕೌಂಟ್ ಗೆ ಬಂದು ಬೀಳ್ತಿದೆ ಅಂತಾರೆ ಒಕ್ಕೂಟದ ಅಧ್ಯಕ್ಷ ಅಶೋಕ್. ಮೂರು ಸಾವಿರ ಕಾರ್ಮಿಕರಿಗೆ ಅಕೌಂಟ್ ಮಾಡಿಸಿದ್ದು, ಕಾರ್ಮಿಕರ ಆದಾಯ 20 ಲಕ್ಷ ಇಲ್ಲದ ಕಾರಣ ಜಿ.ಎಸ್.ಟಿ ಅಂತೂ ಹೊರೆಯಾಗಿಲ್ಲ .

ಕನ್ನಡ ಸಿನಿಮಾಗಳಿಗೆ ಅನ್ಯಾಯ

ಜಿ.ಎಸ್.ಟಿ ಹೊರೆಯ ಬಗ್ಗೆ ಮಾತನಾಡಿದ ಸಾ.ರಾ.ಗೋವಿಂದು ಪ್ರಧಾನಮಂತ್ರಿಗಳಿಗೆ ಹಿಂದಿ ಮೇಲಿನ ವ್ಯಾಮೋಹ ಅದೇ ಕಾರಣದಿಂದ ಅನ್ಯಭಾಷಾ ಚಿತ್ರಗಳಿಗೆ ಕರ್ನಾಟಕದಲ್ಲಿ ಟ್ಯಾಕ್ಸ್ ಕಡಿಮೆ ಮಾಡಿದ್ದಾರೆ. ಕನ್ನಡಿಗರನ್ನ ಹಿಂದಿಯತ್ತ ಸೆಳೆಯುವ ಪ್ಲಾನ್ ಮಾಡಿದ್ದಾರೆ ಅಂತಾರೆ.

English summary
Note Ban and GST Impact on Kannada Film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X