For Quick Alerts
  ALLOW NOTIFICATIONS  
  For Daily Alerts

  ಬದಲಾಯಿತು ಗಾಂಧಿನಗರದಲ್ಲಿ 'ಟಗರು' ಚಿತ್ರಮಂದಿರ

  By Naveen
  |

  ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನಿಮಾ 100 ದಿನಗಳನ್ನು ಪೂರೈಸಿ 150 ದಿನದತ್ತ ಮುನ್ನುಗುತ್ತಿದೆ. ಈ ವರ್ಷದ ದೊಡ್ಡ ಹಿಟ್ ಸಿನಿಮಾ ಎಂದು 'ಟಗರು' ಕರೆಸಿಕೊಂಡಿದೆ. ಇದರ ಜೊತೆಗೆ ಈಗ 'ಗಾಂಧಿನಗರದಲ್ಲಿ ಈಗ 'ಟಗರು' ಚಿತ್ರದ ಚಿತ್ರಮಂದಿರ ಬದಲಾಗಿದೆ.

  ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ 'ಟಗರು' ಚಿತ್ರ ನೂರು ದಿನ ಓಡಿದೆ. ಮತ್ತೆ ಶಿವಣ್ಣನಿಗೆ ಈ ಚಿತ್ರಮಂದಿರ ಫೇವರೇಟ್ ಆಗಿದೆ. ಜೊತೆಗೆ ನೂರು ದಿನದ ಸಂಭ್ರಮವನ್ನು ಸಹ ಚಿತ್ರತಂಡ ಅಲ್ಲಿಯೇ ಆಚರಿಸಿದ್ದು, ಶಿವಣ್ಣ ಸಂತೋಷ್ ಚಿತ್ರಮಂದಿರದ ಮುಂದೆ ಡ್ಯಾನ್ಸ್ ಮಾಡಿದ್ದರು.

  ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು ವಿಮರ್ಶೆ: ಟಗರು ಖದರು, ಡಾಲಿ ಪೊಗರು, ಸ್ಕ್ರೀನ್ ಪ್ಲೇ ಸೂಪರ್ರು

  ಈಗ 'ಟಗರು' ಸಿನಿಮಾ ಗಾಂಧಿನಗರದ ಸಂತೋಷ್ ಚಿತ್ರಮಂದಿರದಿಂದ ಅನುಪಮ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ. ನೂರು ದಿನಗಳ ನಂತರ ಚಿತ್ರಮಂದಿರ ಬದಲಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ಇಂದು ಚಿರಂಜೀವಿ ಸರ್ಜಾ ನಟನೆಯ 'ಅಮ್ಮ ಐ ಲವ್ ಯೂ' ಸಿನಿಮಾ ಬಿಡುಗಡೆಯಾಗಿದೆ.

  ಅಂದಹಾಗೆ, 'ಟಗರು' ಸಿನಿಮಾದ ನಂತರ 'ಟಗರು 2' ಸಿನಿಮಾ ಮಾಡಲು ನಿರ್ದೇಶಕ ಸೂರಿ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಒಟ್ಟಿಗೆ ನಟಿಸಲಿದ್ದಾರೆ.

  English summary
  Kannada Actor Shiva Rajkumar's 'Tagaru' kannada movie shows in anupama theatre. The movie is completed 125 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X