»   » ಸೂರ್ಯ ಉದಯಿಸುವ ನಾಡಲ್ಲಿ ರಂಗಿತರಂಗ ಸಂಚಲನ

ಸೂರ್ಯ ಉದಯಿಸುವ ನಾಡಲ್ಲಿ ರಂಗಿತರಂಗ ಸಂಚಲನ

Posted By: ಗುರುಪ್ರಸಾದ್, ಟೋಕಿಯೋ
Subscribe to Filmibeat Kannada

'ರಂಗಿತರಂಗ' ಚಿತ್ರ ವಿಶ್ವದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡತೊಡಗಿದಂತೆಯೇ ಟೋಕಿಯೋ ಕನ್ನಡಿಗರಲ್ಲೂ ಸಂಚಲನ ಶುರುವಾಯಿತು.

'ರಂಗಿತರಂಗ' ಪ್ರದರ್ಶನ ಯಾವಾಗ? ಎನ್ನುವ ಪ್ರಶ್ನೆ ಎಲ್ಲೆಲ್ಲೂ ಕೇಳತೊಡಗಿತು. ಈ ಹಿಂದೆ ಎರಡು ಬಾರಿ ಕನ್ನಡ ಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದ ಟೋಕಿಯೋ ಕನ್ನಡ ಬಳಗದವರು ಕೈಕಟ್ಟಿ ಕೂರುವಂತಿರಲಿಲ್ಲ. ಹೀಗಾಗಿ ನಮ್ಮ ಪ್ರಯತ್ನ ಶುರುವಾಯಿತು.

NRI Kannadiga Guruprasad experience 'RangiTaranga' in Tokyo(Japan)

ಥಿಯೇಟರ್ ಹುಡುಕುವುದು, ಚಿತ್ರ ತಂಡದವರೊಂದಿಗೆ ಸಂಪರ್ಕ, ಹೀಗೆ ಸುಮಾರು ಕೆಲಸಗಳಿದ್ದವು. ಇಂಗ್ಲಿಷ್ ನುಡಿ ಬರಹ (ಸಬ್ ಟೈಟಲ್ಸ್) ದೊಂದಿಗೆ ಪ್ರದರ್ಶಿಸಿ, ನಮಗೂ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ ಎನ್ನುವುದು ಜಪಾನೀ ಪ್ರೇಕ್ಷಕರ ಬಹು ದಿನಗಳ ಕೋರಿಕೆ. ಹೀಗಾಗಿ ನುಡಿ ಬರಹದ ವ್ಯವಸ್ತೆಯೂ ಆಗಬೇಕಿತ್ತು.

ಹೀಗಾಗಿ ಟೋಕಿಯೋ ಕನ್ನಡ ಬಳಗದ ಉತ್ಸಾಹೀ ಕಾರ್ಯಕರ್ತರು ಯಾವುದಕ್ಕೂ ಹಿಂಜರಿಯೆದೆ ಮುಂದಡಿಯಿಟ್ಟರು.ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಎಲ್ಲಾ ತಯಾರಿಗಳನ್ನೂ ಮುಗಿಸಿ, ಪ್ರಚಾರ ಕಾರ್ಯಗಳನ್ನೂ ಮುಗಿಸಿದೆವು.[ಸಂದರ್ಶನ : ರಂಗಿತರಂಗ ಯಶಸ್ಸಿನ ಅಲೆಯ ನಾವಿಕ ಅನುಪ್]

ಜನರ ಪ್ರತಿಕ್ರಿಯೆ ಮಾತ್ರ ಆಶ್ಚರ್ಯ ಹುಟ್ಟಿಸುವಂತಿತ್ತು. ಸುಮಾರು ನೂರು ಮಂದಿ ಪ್ರೇಕ್ಷಕರು ಬರಬಹುದು ಎನ್ನುವುದು ನಮ್ಮ ಅಂದಾಜಾಗಿತ್ತು. ಆದರೆ ಕೊನೆಗೆ ಟಿಕೆಟ್ ಖರೀದಿ ಮಾಡಿದವರ ಸಂಖ್ಯೆ ಇನ್ನೂರು ಮುಟ್ಟಿತು.

ಸ್ಥಳೀಯ ಜಪಾನೀ ಮಿತ್ರರ ಬೆಂಬಲವೂ ಅದ್ಭುತವಾಗಿತ್ತು. ನಒಕೊ ಅತಕ ಎನ್ನುವ ಜಪಾನಿನ ಮಹಿಳೆ ಜಪಾನೀ ಭಾಷೆಯಲ್ಲಿ ಚಿತ್ರದ ಬಗ್ಗೆ ಬ್ಲಾಗ್ ಬರೆದು ಪ್ರಚಾರ ಮಾಡಿದರು.

ಹೀಗಾಗಿ ಸ್ಥ‍ಳಿಯರೂ ಆಸಕ್ತಿಯಿಂದ ಟಿಕೆಟ್ ಖರೀದಿಸಿದರು. ಚಿತ್ರದ ಬಗ್ಗೆ ಎಲ್ಲೆಡೆ ಒಳ್ಳೆಯ ಪ್ರಶಂಸೆ ಇದ್ದಿದ್ದರಿಂದ ಬಹಳಷ್ಟು ಮಂದಿ ಕನ್ನಡೇತರ ಭಾರತೀಯರೂ ಟಿಕೆಟ್ ಕೊಂಡುಕೊಂಡರು. [ಮಿಸ್ಟರಿ ಇಷ್ಟಪಡುವ ಅನುಪ್ ಚಿತ್ರಕ್ಕೆ ರಕ್ಷಿತ್ ಹೀರೋ?]

ಕೊನೆಗೂ ನಾವೆಲ್ಲರೂ ಕಾತುರದಿಂದ ಕಾಯುತ್ತಿದ್ದ ಆಗಸ್ಟ್ 22 ಶನಿವಾರ ಬಂದೇ ಬಿಟ್ಟಿತು. ನಮಗೆಲ್ಲ ಹಬ್ಬದ ಸಂಭ್ರಮ. ಸಾಯ್‍ತಮ ಪ್ರಾಂತ್ಯದ ಸ್ಕಿಪ್ ಸಿಟಿ ಎಂಬ ಥಿಯೇಟರ್ ನಲ್ಲಿ ಭಂಡಾರಿ ಸಹೋದರರ ನಿರ್ದೇಶನದ 'ರಂಗಿತರಂಗ' ಚಿತ್ರದ ಪ್ರದರ್ಶನ ಏರ್ಪಾಡಾಗಿತ್ತು.

ಚಿತ್ರ ನೋಡುವ ಸಂತಸ ಒಂದೆಡೆಯಾದರೆ, ಕನ್ನಡ ಸ್ನೇಹಿತರೊಂದಿಗೆ ಹರಟೆ ಹೊಡೆಯುವ ಖುಶಿ ಮತ್ತೊಂದೆಡೆ. ಈ ಸಂತೋಷವನ್ನು ಕಳೆದುಕೊಳ್ಳಲು ಬಯಸದ ಮಂದಿ ಟೊಕಿಯೋದಿಂದ 80 ಕಿಲೋಮೀಟರ್ ದೂರದ ಊರುಗಳಿಂದಲೂ ಬಂದಿದ್ದರು.

ಜಪಾನಿನ ಟೋಕಿಯೋದಲ್ಲಿ ಪ್ರೇಕ್ಷಕರ ಕನ್ನಡ ಅಭಿಮಾನ ಹಾಗೂ ತುಂಬಿದ ಚಿತ್ರಮಂದಿರವನ್ನು ನೋಡಲು ಈ ವಿಡಿಯೋ ನೋಡಿ..

NRI Kannadiga Guruprasad experience 'RangiTaranga' in Tokyo(Japan)

ಚಿತ್ರ ಪ್ರಾರಂಭವಾಗುವುದಕ್ಕೂ ಮುಂಚೆ ನಿರ್ದೇಶಕ ಅನೂಪ್ ಭಂಡಾರಿಯವರೊಂದಿಗೆ ದೂರವಾಣಿ ಮೂಲಕ ಸಂಪರ್ಕವಾಯಿತು. ಅಮೆರಿಕ ಪ್ರವಾಸದ ನಡುವೆಯಿದ್ದ ಅವರು, ಚಿತ್ರ ನೋಡಲು ಬಂದವರೆಲ್ಲರಿಗೆ ಧನ್ಯವಾದ ತಿಳಿಸಿದರು. ಪ್ರೇಕ್ಷಕರು ಭಾರೀ ಕರತಾಡನದೊಂದಿಗೆ ಅಭಿನಂದನೆ ವ್ಯಕ್ತಪಡಿಸಿದರು.

ಚಿತ್ರ ಪ್ರಾರಂಭವಾಗಿದ್ದಷ್ಟೇ ಗೊತ್ತು. ರೋಲರ್ ಕೋಸ್ಟರ್ ನಲ್ಲಿ ಕುಳಿತ ಅನುಭವ, ಅತ್ತಿತ್ತ ಗಮನ ಹರಿಸಲಾಗದಷ್ಟು ಕುತೂಹಲ ಭರಿತ ಕಥೆ. ಮತ್ತೇನೋ ಎಂದು ಉಗುರು ಕಚ್ಚುವಷ್ಟರಲ್ಲೆ, ಇಂಟರ್ ವಲ್.[ಅಂಕಲ್ ಸ್ಯಾಮ್ ನೆಲದಲ್ಲಿ ರಂಗಿತರಂಗದ ಮಿಂಚು]

ಚಿತ್ರ ವೀಕ್ಷಿಸಿದ ಜಪಾನೀ ಪ್ರೇಕ್ಷಕರ ಅಭಿಪ್ರಾಯ ತಿಳಿಯಲು ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿ..

NRI Kannadiga Guruprasad experience 'RangiTaranga' in Tokyo(Japan)

ಆ ಸಮಯಕ್ಕೆ ರುಚಿಯಾದ ದಕ್ಷಿಣ ಭಾರತದ ತಿನಿಸುಗಳ ಏರ್ಪಾಡಾಗಿತ್ತು. ಚಿತ್ರದ ಬಗ್ಗೆ ಮಾತನಾಡುತ್ತಲೇ ತಿಂದು ಮುಗಿಸಿ ಮತ್ತೆ ಥಿಯೇಟರ್ ಒಳಗೆ ಓಡಿದೆವು. ಎರಡನೆ ಭಾಗವೂ ಅಷ್ಟೇ ನಿಗೂಢ.[ಭಜರಂಗಿ ಬಾಹುಬಲಿಗೆ ಸೆಡ್ಡು ಹೊಡೆದ ರಂಗಿಯ ರಹಸ್ಯ?]

ಚಿತ್ರ ಮುಗಿದಾಗ ಎಲ್ಲರ ಮುಖದಲ್ಲೂ ಮಂದಹಾಸ. ಒಂದೊಳ್ಳೆಯ ಕನ್ನಡ ಚಿತ್ರವನ್ನು, ಪರಭಾಷಾ ಪ್ರೇಕ್ಷಕರೊಂದಿಗೆ ಒಟ್ಟಿಗೆ ಕುಳಿತು ನೋಡಿದ ಹೆಮ್ಮೆಯ ಅನುಭವ ಮರೆಯಲಾಗದ್ದು.

ಎಲ್ಲರ ಬಾಯಲ್ಲೂ ಚಿತ್ರದ ಗುಣಗಾನ. ಏರ್ಪಾಡು ಮಾಡಿದ್ದ ಕಾರ್ಯಕರ್ತರಿಗೆ ತಮ್ಮ ಶ್ರಮ ಸಾರ್ಥಕವಾದ ಸಂತೃಪ್ತಿ.

ಒಂದೊಳ್ಳೆ ಚಿತ್ರ ನೀಡಿದ ಚಿತ್ರ ತಂಡಕ್ಕೆ ಟೋಕಿಯೋ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳು. ಇಂತಹ ಶ್ರೇಷ್ಟ ಗುಣಮಟ್ಟದ ಕನ್ನಡ ಚಿತ್ರಗಳನ್ನು ನೋಡುವ ಸದವಕಾಶ ಪ್ರಪಂಚದೆಲ್ಲೆಡೆಯಿರುವ ಕನ್ನಡಿಗರಿಗೆ ಮತ್ತೆ ಮತ್ತೆ ದೊರೆಯಲಿ. ಎಂಬುದು ನಮ್ಮ ಹಾರೈಕೆ.

English summary
NRI Kannadiga Guruprasad shares his experience watching 'RangiTaranga' movie in Tokyo(Japan)Skip city theatre. The movie directed by Anup Bhandari got good response all over US, Europe, and Canada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada