For Quick Alerts
  ALLOW NOTIFICATIONS  
  For Daily Alerts

  ಅಧಿಕೃತವಾಗಿ 'ಕಮಲ' ಪಕ್ಷ ಸೇರಿದ ಬಿಗ್ ಬಾಸ್ ಕನ್ನಡ ಸ್ಪರ್ಧಿ

  By Bharath Kumar
  |
  ಬಿಗ್ ಬಾಸ್ ಕನ್ನಡ ಸೀಸನ್ 5 ಸ್ಪರ್ದಿ ಇಂದು ಬಿಜೆಪಿಗೆ ಸೇರ್ಪಡೆ | Oneindia Kannada

  ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷಕ್ಕೆ ಸೆಲೆಬ್ರಿಟಿಗಳು ರಾಜಕೀಯ ಪಕ್ಷಕ್ಕೆ ಸೇರುವುದು ಸಾಮಾನ್ಯ. ಇದೀಗ, ಬಿಗ್ ಬಾಸ್ ಕನ್ನಡ 5ನೇ ಆವೃತ್ತಿಯಲ್ಲಿ ಮೊದಲ ಸ್ಪರ್ಧಿಯಾಗಿದ್ದ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರು ಅಧಿಕೃತವಾಗಿ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.

  ಪ್ರಧಾನಿ ನರೇಂದ್ರ ಮೋದಿ ಅವರ ತತ್ವ ಸಿದ್ಧಾಂತಗಳನ್ನ ಮೆಚ್ಚಿಕೊಂಡಿರುವ ಜಯಶ್ರೀನಿವಾಸನ್ ಅವರು, ಇಂದು ಸಂಜೆ 5 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.

  'ಬಿಗ್ ಬಾಸ್' ನಿಂದ ಬಂದ ಮೇಲೆ ಸಿನಿಮಾ ಹೀರೋ ಆದ ಜಯಶ್ರೀನಿವಾಸನ್! 'ಬಿಗ್ ಬಾಸ್' ನಿಂದ ಬಂದ ಮೇಲೆ ಸಿನಿಮಾ ಹೀರೋ ಆದ ಜಯಶ್ರೀನಿವಾಸನ್!

  ಕಳೆದ ಕೆಲವು ದಿನಗಳಿಂದ ಜಯಶ್ರೀನಿವಾಸನ್ ಅವರು ಬಿಜೆಪಿ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಮಾತುಗಳಿತ್ತು. ಆದ್ರೆ, ಖಚಿತವಾಗಿರಲಿಲ್ಲ. ಇದೀಗ, ಅಧಿಕೃತವಾಗಿ ಕಮಲದ ಕೈ ಹಿಡಯುತ್ತಿದ್ದಾರೆ ಜೆ.ಎಸ್ ಖ್ಯಾತಿಯ ಜಯಶ್ರೀನಿವಾಸನ್.

  ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಜಯಶ್ರೀನಿವಾಸನ್ ಅವರು ಕನ್ನಡದ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. 'Y5=X' ಎಂಬ ವಿಶೇಷ ಟೈಟಲ್ ಅನ್ನು ಜಯಶ್ರೀನಿವಾಸನ್ ಅವರ ಮೊದಲ ಸಿನಿಮಾಗೆ ಇಡಲಾಗಿದೆ. ಈ ಸಿನಿಮಾವನ್ನು ರಿವನ್ ವಿಕ್ರಂ ನಿರ್ದೇಶನ ಮಾಡುತ್ತಿದ್ದಾರೆ.

  English summary
  bigg boss kannada 5 contestant Numerologist Jayasreenivasan is joining to bjp officially today at malleswaram bjp party office (march 7th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X