»   » ಪೋಲಿಗಳ ಜೊತೆ ಜಾಲಿ ಬಾರಿಗೆ ನರ್ಸ್ ಜಯಲಕ್ಷ್ಮಿ

ಪೋಲಿಗಳ ಜೊತೆ ಜಾಲಿ ಬಾರಿಗೆ ನರ್ಸ್ ಜಯಲಕ್ಷ್ಮಿ

Posted By:
Subscribe to Filmibeat Kannada

'ಬಿಗ್ ಬಾಸ್'ಗೆ ಬಂದವರು ಬೆಳ್ಳಿಪರದೆಗೆ ಬರದೆ ಇರುತ್ತಾರೆಯೇ? ಕಾಳಿಮಠದ ಋಷಿಕುಮಾರ ಸ್ವಾಮೀಜಿ ಬೆಳ್ಳಿಪರದೆಗೆ ಅಡಿಯಿಡಬೇಕೆ ಬೇಡವೆ ಎಂದು ಪತ್ರಕರ್ತರನ್ನೇ ಕೇಳಿದ್ದರು. ಈಗ ನರ್ಸ್ ಜಯಲಕ್ಷ್ಮಿ ಕೂಡ ಬೆಳ್ಳಿಪರದೆಗೆ ಅಡಿಯಿಡುತ್ತಿದ್ದಾರೆ.

ಕಾರಂಜಿ ಶ್ರೀಧರ್ ಆಕ್ಷನ್ ಕಟ್ ಹೇಳುತ್ತಿರುವ 'ಜಾಲಿ ಬಾರು, ಪೋಲಿ ಹುಡುಗರು' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಬಿಗ್ ಬಾಸ್ ಸ್ಪರ್ಧೆಗಳಿಗಳಿಗೆ ಒಂದೊಂದೇ ಅವಕಾಶಗಳು ಬರುತ್ತಿರುವುದು ಗೊತ್ತೇ ಇದೆ. [ನರ್ಸ್ ಜಯಲಕ್ಷ್ಮಿ ತುಪ್ಪಾ ಬೇಕಾ ತುಪ್ಪಾ ಐಟಂ ಡಾನ್ಸ್]

Nurse Jayalakshmi

ವಿನಾಯಕ ಜೋಶಿ, ತಿಲಕ್ ಶೇಖರ್, ಸಂಜನಾ, ಶ್ವೇತಾ ಪಂಡಿತ್, ಅನುಶ್ರೀ, ಅರುಣ್ ಸಾಗರ್, ವಿಜಯ್ ರಾಘವೇಂದ್ರ, ನಿಖಿತಾ ಹಾಗೂ ಚಂದ್ರಿಕಾ ಎಲ್ಲರೂ ಈಗ ಬಿಜಿಯಾಗಿದ್ದಾರೆ. ಈಗ ನರ್ಸ್ ಜಯಲಕ್ಷ್ಮಿ ಅವರಿಗೆ ಅವಕಾಶ ಸಿಕ್ಕಿದೆ.

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ರಂಜಿಸಿದ್ದ ಜಯಲಕ್ಷ್ಮಿ ಅವರು ತಾವು ಕರ್ನಾಟಕದ ಸಿಎಂ ಆಗಬೇಕು ಎಂದು ಕನಸು ಕಂಡಿರುವುದಾಗಿಯೂ ಹೇಳಿಕೊಂಡಿದ್ದರು. ಹುಚ್ಚಾಸ್ಪತ್ರೆಯ ಹುಚ್ಚು ನರ್ಸ್ ಆಗಿ ಅವರು ಬಿಗ್ ಬಾಸ್ ನಲ್ಲಿ ಟಾಸ್ಕ್ ನಿರ್ವಹಿಸಿದ್ದನ್ನು ಇನ್ನೂ ಕಿರುತೆರೆ ವೀಕ್ಷಕರು ಮರೆತಿರಕ್ಕಿಲ್ಲ.

ಜಾಲಿ ಬಾರು ಪೋಲಿ ಹುಡುಗರು ಚಿತ್ರದಲ್ಲಿ ನರ್ಸ್ ಜಯಲಕ್ಷ್ಮಿ ಅವರದು ಡಾಕ್ಟರ್ ಪಾತ್ರ. ಹೆಸರಘಟ್ಟ ಬಳಿ ದಾಬಾ ಸೆಟ್ ಹಾಕಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಆ ಹಾಡಿನಲ್ಲಿ ನರ್ಸ್ ಜಯಲಕ್ಷ್ಮಿ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ತಂತ್ರಜ್ಞರೆ ಸೇರಿ ನಿರ್ಮಿಸುತ್ತಿರುವ ಚಿತ್ರವಿದು.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ತುಪ್ಪಾ ಬೇಕಾ ತುಪ್ಪಾ ಎಂಬ ಹಾಡಿಗೆ ತಮ್ಮ ದಢೂತಿ ದೇಹವನ್ನು ಬಳುಕಿಸಿದ್ದ ನರ್ಸ್ ಜಯಲಕ್ಷ್ಮಿ ಈ ಚಿತ್ರದಲ್ಲಿ ಇನ್ನೇನು ಮಾದಿದ್ದಾರೋ ಏನೋ ಎಂಬ ಕುತೂಹಲ ಚಿತ್ರಪ್ರೇಮಿಗಳಿಗಿದೆ. (ಏಜೆನ್ಸೀಸ್)

English summary
Miss Jayalakshmi in a new avthar- as doctor for Kannada movie Jaali Baaru Poli Hudugaru (JBMPH). 'Jaali Baaru....is a fun filled cinema with thrill in the second half says Shridhar of 'Karanji' Kannada cinema.
Please Wait while comments are loading...