»   » ಕಿಡಿಗೇಡಿಯಿಂದ ನಟಿಯ ಖಾಸಗಿ ಫೋಟೋ ಲೀಕ್, ದೂರು ದಾಖಲಿಸಿದ ನಟಿ

ಕಿಡಿಗೇಡಿಯಿಂದ ನಟಿಯ ಖಾಸಗಿ ಫೋಟೋ ಲೀಕ್, ದೂರು ದಾಖಲಿಸಿದ ನಟಿ

By: ಒನ್ ಇಂಡಿಯಾ ಸಿಬ್ಬಂದಿ
Subscribe to Filmibeat Kannada

ಚಿತ್ರರಂಗ ಅಂದ್ರೆ ಹಾಗೆ, ಆ ಕಲರ್ ಫುಲ್ ದುನಿಯಾದಲ್ಲಿ ಹೆಣ್ಣುಮಕ್ಕಳು ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಎಲ್ಲಾ ಭಾಷೆಯ ಚಿತ್ರರಂಗ ಕ್ಷೇತ್ರದಲ್ಲಿ 'ಕ್ಯಾಸ್ಟಿಂಗ್ ಕೌಚ್' ಸಮಸ್ಯೆ ಹೇಗಿರುತ್ತೋ, ಹಾಗೆ ನಟಿಯರ ಬಗ್ಗೆ ಅಪಪ್ರಚಾರ ಮಾಡುವವರು ಸಾಕಷ್ಟು ಮಂದಿ ಕಂಡು ಬರುತ್ತಾರೆ.

ಜೊತೆಗೆ ಒಬ್ಬ ಹೆಣ್ಣು ಮಗಳು ಯಶಸ್ಸಿನ ಮೆಟ್ಟಿಲೇರುತ್ತಿದ್ದಾಳೆ ಅಂದ್ರೆ, ಅದನ್ನು ಸಹಿಸಲಾರದ ಕೆಲವು ಕೆಟ್ಟ ಜಂತುಗಳು, ಅವರನ್ನು ತುಳಿಯಲು ಯತ್ನಿಸುತ್ತಾರೆ. ಇದೀಗ ನಟಿ ಸೋನು ಗೌಡ ಅವರ ವಿಚಾರದಲ್ಲೂ ಅದೇ ರೀತಿಯ ಘಟನೆ ನಡೆದಿದೆ.[ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ]

'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ನಟಿ ಸೋನು ಗೌಡ ಅವರ ಬಗ್ಗೆ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಸೋನು ಅವರು ತಮ್ಮ ಪತಿಯ ಜೊತೆ ಬಹಳ ಆತ್ಮೀಯವಾಗಿ ಇದ್ದ ಫೋಟೋಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಸುದ್ದಿ ನೋಡಿ ಇಡೀ ಸ್ಯಾಂಡಲ್ ವುಡ್ ಮತ್ತು ಅಭಿಮಾನಿಗಳು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.

ತಾವಾಯಿತು, ತಮ್ಮ ಕೆಲಸವಾಯಿತು, ಅಂತ ತಮ್ಮಷ್ಟಕ್ಕೆ ತಾವಿದ್ದ ನಟಿ ಸೋನು ಗೌಡ ಅವರ ಮಾನ-ಮಾರ್ಯಾದೆಗೆ ಧಕ್ಕೆ ತರುವಂತಹ ಕೆಲಸವನ್ನು, ಯಾರೋ ಕಿಡಿಗೇಡಿಗಳು ಮಾಡಿದ್ದಾರೆ.

ಅಷ್ಟಕ್ಕೂ ಸೋನು ಅವರ ಈ ಪರ್ಸನಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಕಾರಣವಾದ್ರೂ ಏನು?, ಇದಕ್ಕೆ ನಟಿ ಸೋನು ಗೌಡ ಅವರು ನೀಡಿದ ಸ್ಪಷ್ಟನೆ ಏನು.?, ನೋಡಲು ಮುಂದೆ ಓದಿ....

ಸಾಮಾಜಿಕ ಜಾಲತಾಣದಲ್ಲಿ ಸೋನು ಫೋಟೋಗಳು

ನಟಿ ಸೋನು ಗೌಡ ಅವರು ತಮ್ಮ ಗಂಡನ ಜೊತೆ ಆತ್ಮೀಯವಾಗಿದ್ದ ಹಳೇ ಫೋಟೋಗಳು, ವಾಟ್ಸಾಪ್ ಮತ್ತು ಫೇಸ್ ಬುಕ್ಕಿನಲ್ಲಿ ಹರಿದಾಡುತ್ತಿದ್ದು, ಇದನ್ನು ಕಂಡ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.[ನಾಚಿಕೆಗೇಡು: ಕನ್ನಡ ಚಿತ್ರರಂಗದಲ್ಲಿ 'ಕಾಸ್ಟಿಂಗ್ ಕೌಚ್'! ಸಾಕ್ಷಿ ಬೇಕಾ?]

ಫೋಟೋ ನನ್ನದೇ ಎಂದ ಸೋನು

ಈ ಬಗ್ಗೆ ಸೋನು ಗೌಡ ಅವರನ್ನು ಮಾಧ್ಯಮದ ಮಂದಿ ಪ್ರಶ್ನೆ ಮಾಡಿದಾಗ, ಸೋನು ಅವರು ಹೀಗಂತಾರೆ, 'ಯಾರೋ ಒಬ್ಬ ಕಿಡಿಗೇಡಿ ನನ್ನ ಪರ್ಸನಲ್ ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿ, ಈ ಫೋಟೋಗಳನ್ನು ಎಲ್ಲಾ ಕಡೆ ಹಾಕಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಆ ಫೋಟೋದಲ್ಲಿರೋದು ನಾನು ಮತ್ತು ನನ್ನ ಗಂಡ' ಅಂತ ನಟಿ ಸೋನು ಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ 'ಲೈಂಗಿಕ ಕಿರುಕುಳ' ಬಗ್ಗೆ ಕವಿತಾ ಲಂಕೇಶ್ ಪ್ರತಿಕ್ರಿಯೆ]

4 ದಿನಗಳ ಹಿಂದೆಯೇ ದೂರು ನೀಡಿದ್ದ ನಟಿ

'ನನ್ನ ಭವಿಷ್ಯವನ್ನು ಹಾಳು ಮಾಡುವುದಕ್ಕಾಗಿ, ಇ-ಮೇಲ್ ಅಕೌಂಟ್ ಹ್ಯಾಕ್ ಮಾಡಿ ಫೋಟೋಗಳನ್ನು ಯಾರೋ ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾನೆ. ಅವನ ವಿರುದ್ಧ ಕ್ರಮ ಕೈಗೊಳ್ಳಿ', ಅಂತ ನಟಿ ಸೋನು ಗೌಡ ಅವರು ಸುಮಾರು 4 ದಿನಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರಂತೆ.

ಯಾರಾಗಿರಬಹುದು.?

ನಟಿ ಸೋನು ಗೌಡ ಅವರ ಇ-ಮೇಲ್ ಅಕೌಂಟ್ ಅನ್ನು ಹ್ಯಾಕ್ ಮಾಡಿರುವಾತ, ಯಾಕೆ ಈ ರೀತಿ ಮಾಡಿರಬಹುದು ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.

ಸೋನು ಏನಂತಾರೆ?

"ನಾನು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದೇನೆ, ಇನ್ನೇನೇ ಇದ್ರೂ ಕಾನೂನು ಮೂಲಕಾನೇ ಹೋರಾಟ ನಡೆಸುತ್ತೇನೆ. ನನಗೆ ಇದರ ಬಗ್ಗೆ ಮಾತನಾಡಲೂ ಆಗ್ತಾ ಇಲ್ಲ. ಇನ್ನು ಒಂದು ಹೆಣ್ಣಿಗೆ ಹೀಗೆಲ್ಲಾ ಆದಾಗ, ನಿಜ ವಿಷಯ ಏನೂಂತ ತಿಳಿಯದೇ ಯಾರೂ ಕೂಡ ಬಾಯಿಗೆ ಬಂದಂತೆ ಮಾತನಾಡಬಾರದು. ಮೀಡಿಯಾದವರಿಗೂ ಒಂದು ಸೆನ್ಸ್ ಇರಬೇಕು. ಮಾತಾಡುವ ಮುನ್ನ ಆ ಹೆಣ್ಣಿನ ಭವಿಷ್ಯದ ಬಗ್ಗೆ ಯೋಚಿಸಬೇಕು. ಮತ್ತೆ ಯಾರಾದ್ರೂ ಯಶಸ್ಸು ಗಳಿಸ್ತಾ ಇದ್ದಾರೆ ಅಂತ ಅಂದ್ರೆ, ಅವರನ್ನು ತುಳಿಯುವವರು ತುಂಬಾ ಜನ ಇರ್ತಾರೆ. ನಾನು ಕಂಪ್ಲೈಂಟ್ ಕೊಟ್ಟಿದ್ದೇನೆ. ಅವರು ಖಂಡಿತ ಕ್ರಮ ಕೈಗೊಳ್ಳುತ್ತಾರೆ.' ಅಂತ ನಟಿ ಸೋನು ಗೌಡ ಅವರು ನೋವಿನಿಂದ ನುಡಿದಿದ್ದಾರೆ.

English summary
Objectionable photos of Kannada Actress Sonu Gowda Marriage surface. Here is the details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada