»   » ತೆಲುಗು ನಟಿಗೆ ಅಶ್ಲೀಲ ಎಸ್ಎಂಎಸ್: ವ್ಯಕ್ತಿ ಬಂಧನ

ತೆಲುಗು ನಟಿಗೆ ಅಶ್ಲೀಲ ಎಸ್ಎಂಎಸ್: ವ್ಯಕ್ತಿ ಬಂಧನ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಫೋಟೋದಲ್ಲಿ ಮಳ್ಳನ ತರಹ ನೋಡುತ್ತಿರುವ ಈತ ತೆಲುಗು ಪೋಷಕ ನಟಿ ಹೇಮಾ ಅವರಿಗೆ ಅಶ್ಲೀಲ ಎಸ್ಎಂಎಸ್ ಕಳುಹಿಸಿ ಸಿಕ್ಕಿಬಿದ್ದ ಆಸಾಮಿ. ಹೈದರಾಬಾದಿನ ಮಾದಾಪುರ್ ಪೊಲೀಸರ ಬಂಧಿಸಿರುವ ಈತನ ಹೆಸರು ಮಧು (27).

ಕಳೆದ ಕೆಲದಿನಗಳಿಂದ ಈತ ಎಡಬಿಡದಂತೆ ನಟಿ ಹೇಮಾ ಅವರಿಗೆ ಅಶ್ಲೀಲ ಎಸ್ಎಂಎಸ್ ಗಳನ್ನು ಕಳುಹಿಸುತ್ತಿದ್ದ. ಈ ಸಂಬಂಧ ಹೇಮಾ ಅವರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಈತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ನಲ್ಗೊಂಡ ಜಿಲ್ಲೆ ಸೂರ್ಯಾಪೇಟೆಗೆ ಸೇರಿದ ಮಧು (27) ದಿನಸಿ ಅಂಗಡಿ ಇಟ್ಟುಕೊಂಡಿದ್ದಾನೆ. ಮಾದಾಪೂರ್ ನಲ್ಲಿ ವಾಸವಾಗಿರುವ ನಟಿ ಹೇಮಾ ನಂಬರ್ ಅದು ಹೇಗೋ ಏನೋ ಪತ್ತೆ ಮಾಡಿದ್ದಾನೆ.

ಫೋನ್ ನಲ್ಲೂ ಅಸಭ್ಯ ಸಂಭಾಷಣೆ

ನಂಬರ್ ಸಿಕ್ಕಿದ್ದೇ ತಡ ಎಡಬಿಡದಂತೆ ಹೇಮಾ ಅವರ ಮೊಬೈಲ್ ಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದಾನೆ. ಇದಿಷ್ಟೇ ಅಲ್ಲದೆ ಫೋನ್ ಮಾಡಿ ಅಸಭ್ಯವಾಗಿಯೂ ಮಾತನಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಸತ್ತ ನಟಿ ಪೊಲೀಸರಿಗೆ ದೂರು

ಫೋನ್ ಕಾಲ್ ರಿಸೀವ್ ಮಾಡದಿದ್ದಾಗ ಅಶ್ಲೀಲ ಎಸ್ಎಂಎಸ್ ಗಳನ್ನು ಕಳುಹಿಸಿದ್ದಾನೆ. ತಿರುಗಿ ಈತನಿಗೆ ಫೋನ್ ಮಾಡಿದರೆ ಸ್ವಿಚ್ ಆಫ್. ಇದರಿಂದ ಬೇಸತ್ತ ನಟಿ ಕಡೆಗೆ ಪೊಲೀಸರ ಮೊರೆ ಹೋಗಿದ್ದರು.

ಸದ್ಯಕ್ಕೆ ಪೊಲೀಸ್ ರಿಮ್ಯಾಂಡ್ ಗೆ ರವಾನೆ

ಈತನ ಫೋನ್ ನಂಬರ್ ಆಧಾರವಾಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸದ್ಯಕ್ಕೆ ಈತನನ್ನು ಪೊಲೀಸ್ ರಿಮ್ಯಾಂಡ್ ರೂಂಗೆ ಕಳುಹಿಸಲಾಗಿದೆ. ಈ ಹಿಂದೆಯೂ ಈತ ಹಲವಾರು ಮಹಿಳೆಯರಿಗೆ ಇದೇ ರೀತಿ ಅಶ್ಲೀಲ ಎಸ್ಎಂಎಸ್ ಗಳನ್ನು ಕಳುಹಿಸಿದ್ದ ಎನ್ನುತ್ತವೆ ಪೊಲೀಸ್ ಮೂಲಗಳು.

ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

ಇನ್ನು ನಟಿ ಹೇಮಾ ಅವರ ಬಗ್ಗೆ ಹೇಳಬೇಕೆಂದರೆ ಇದುವರೆಗೂ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಮಿಡಿ, ಪೋಷಕ ಪಾತ್ರಗಳಲ್ಲಿ ಟಾಲಿವುಡ್ ನಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ಕಲಾವಿದೆ.

English summary
Tollywood actress Hema has been harassed by an unknown man who's been making lewd calls and sending abusive and obscene text messages to her mobile for some time now. Hema complained in Madhapur Police Station regarding this about a week days ago and the Police have successfully tracked the mobile number and caught the person in Suryapet, Nalgonda district.
Please Wait while comments are loading...