»   » ರಾಗಿಣಿ ಜೊತೆ ಅಶ್ಲೀಲ ಮಾತನ್ನಾಡಿದ್ದ ಉಮೇಶ್ ದುರಂತ ಸಾವು

ರಾಗಿಣಿ ಜೊತೆ ಅಶ್ಲೀಲ ಮಾತನ್ನಾಡಿದ್ದ ಉಮೇಶ್ ದುರಂತ ಸಾವು

Posted By:
Subscribe to Filmibeat Kannada

'ತಪ್ಪು ಮಾಡೋದು ಸಹಜ. ತಿದ್ದಿ ನಡೆಯೋನು ಮನುಜ' ಅನ್ನೋ ಮಾತಿದೆ. ಆದ್ರೆ, ಕುಡಿದ ಮತ್ತಿನಲ್ಲಿ ಆದ ತಪ್ಪನ್ನ ತಿದ್ದಿಕೊಳ್ಳುವ ಮುನ್ನವೇ, ಇತರರಿಂದ ಅವಮಾನ ಸಹಿಸಲಾರದೆ, ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ ಜೀವನಕ್ಕೆ ಪೂರ್ಣ ವಿರಾಮ ಇಟ್ಟುಕೊಂಡವನ ಕರುಣಾಜನಕ ಕಥೆ ಹೇಳ್ತೀವಿ ಕೇಳಿ.

ಇದು ಯಾವುದೋ ರೀಲ್ ಕಥೆ ಅಂದುಕೊಳ್ಳಬೇಡಿ. ನಮ್ಮ ಕಣ್ಣ ಮುಂದೆ...ಅಲ್ಲ ಅಲ್ಲ, ನಿಮ್ಮೆಲ್ಲರ ಕಣ್ಣ ಮುಂದೆ ನಡೆದ ರಾದ್ಧಾಂತದ ರಿಯಲ್ ಕ್ಲೈಮ್ಯಾಕ್ಸ್ ಇದು. [ರಾಗಿಣಿಗೆ ಅಶ್ಲೀಲ ಎಸ್ಎಂಎಸ್; ಉಮೇಶ್ ಬಂಧನ]

ನಿಮಗೆ ನೆನಪಿದ್ಯಾ...ತಮ್ಮ ಮೊಬೈಲ್ ಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದಾರೆ ಅಂತ ಸಹಾಯಕ ನಿರ್ದೇಶಕ ಉಮೇಶ್ ಎಂಬುವವರ ವಿರುದ್ಧ ನಟಿ ರಾಗಿಣಿ ದ್ವಿವೇದಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಸಾಲದ್ದಕ್ಕೆ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದರು. [ಕುಡಿದ ಮತ್ತಿನಲ್ಲಿ ರಾಗಿಣಿಗೆ ಉಮೇಶ್ ಎಸ್ಎಂಎಸ್]

ಎಲ್ಲರ ಮುಂದೆ 'ತಪ್ಪು ಮಾಡಿದ್ದೇನೆ' ಅಂತ ಅಂದು ಕ್ಷಮೆಯಾಚಿಸಿದ್ದ ಉಮೇಶ್ ಮೊನ್ನೆ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.!! ಮುಂದೆ ಓದಿ.....

ಆತ್ಮಹತ್ಯೆ ಮಾಡಿಕೊಂಡ ಉಮೇಶ್.!

ಶಾಕಿಂಗ್ ಸಂಗತಿ ಅಂದ್ರೆ ಇದೆ. ನಟಿ ರಾಗಿಣಿ ದ್ವಿವೇದಿಗೆ ಅಶ್ಲೀಲ ಎಸ್.ಎಂ.ಎಸ್ ಮಾಡಿ ವರ್ಷಗಳ ಹಿಂದೆ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಮಾಡಿದ್ದ ಉಮೇಶ್ ಇಡೀ ಜಗತ್ತಿಗೆ ಗುಡ್ ಬೈ ಹೇಳಿದ್ದಾರೆ.

ಸೂಸೈಡ್ ಗೆ ಕಾರಣವೇನು?

ಉಮೇಶ್ ರನ್ನ ಹತ್ತರದಿಂದ ಬಲ್ಲವರು ಹೇಳುವ ಪ್ರಕಾರ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. 'ರಾಗಿಣಿ ರಾದ್ಧಾಂತ' ಆದ ನಂತರ ಆತನ ಮನಸ್ಸು ಜರ್ಝರಿತಗೊಂಡಿತ್ತು. ಹೊರಗೆಲ್ಲೂ ಆತ ತಿರುಗಾಡದ ಪರಿಸ್ಥಿತಿಗೆ ಬಂದುಬಿಟ್ಟಿದ್ದ. ಕೆಲಸದ ಮೇಲೂ ಅಡ್ಡ ಪರಿಣಾಮ ಬೀರಿದ ಕಾರಣ ಬೇರೆ ದಾರಿ ಕಾಣದೆ ಉಮೇಶ್ ನೇಣಿನ ಕುಣಿಕೆಗೆ ಶರಣಾಗಿದ್ದಾರೆ.

ನಾಲ್ಕು ತಿಂಗಳು ಚಿತ್ರರಂಗದಿಂದ ಬ್ಯಾನ್

ಫಿಲ್ಮ್ ಚೇಂಬರ್ ನಲ್ಲಿ ನಟಿ ರಾಗಿಣಿ ದೂರು ದಾಖಲಿಸಿದ ಬಳಿಕ ಸಭೆ ನಡೆಸಿದ ವಾಣಿಜ್ಯ ಮಂಡಳಿ ಸಹಾಯಕ ನಿರ್ದೇಶಕ ಉಮೇಶ್ ಗೆ ಕನ್ನಡ ಚಿತ್ರರಂಗದಿಂದ ನಾಲ್ಕು ತಿಂಗಳ ಕಾಲ ಬಹಿಷ್ಕಾರ ವಿಧಿಸಿತ್ತು. ನಿರ್ದೇಶಕ ಪ್ರೀತಂ ಗುಬ್ಬಿ, ಆನಂದ್.ಪಿ.ರಾಜು ಬಳಿ ಅಸೋಸಿಯೇಟ್ ಆಗಿದ್ದ ಉಮೇಶ್ ಗೆ ನಂತರ ಯಾವ ನಿರ್ದೇಶಕರೂ ಕೆಲಸ ನೀಡಲಿಲ್ಲ.

ಖಾಲಿ ಕೈಲಿದ್ದ ಉಮೇಶ್

ಫಿಲ್ಮ್ ಚೇಂಬರ್ ನಲ್ಲಾದ ಘಟನೆ ನಂತರ ಉಮೇಶ್ ಗೆ ಕೆಲಸವೆಲ್ಲೂ ಸಿಗಲಿಲ್ಲ. ನಿರ್ದೇಶಕರು ಹತ್ತಿರ ಸೇರಿಸಲಿಲ್ಲ. ಮಾನಸಿಕ ಖಿನ್ನತೆ ಬೇರೆ. ದೊಡ್ಡ ನಿರ್ದೇಶಕನಾಗಬೇಕು ಅಂತ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ ಉಮೇಶ್ ನಿಗೆ ಯಾರೂ ಕೈಹಿಡಿಯದ ಕಾರಣ ಬದುಕುವ ಆತ್ಮವಿಶ್ವಾಸವೇ ನಶಿಸಿಹೋಯ್ತು.

ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ರು!

ವೃತ್ತಿ ಬದುಕ್ಕಲ್ಲಿ ಏಟು ಬಿದ್ದಿರಬಹುದು. ಆದ್ರೆ, ಹೊಸ ಜೀವನಕ್ಕೆ ಉಮೇಶ್ ಇತ್ತೀಚೆಗಷ್ಟೇ ಕಾಲಿಟ್ಟಿದ್ದರು. ಕೇವಲ ಆರು ತಿಂಗಳ ಹಿಂದೆಯಷ್ಟೇ ಉಮೇಶ್ ಮದುವೆ ಆಗಿದ್ದರು.

ರಾಗಿಣಿ ರಾದ್ಧಾಂತದ ಹಿನ್ನಲೆ....

ಘಟನೆ ನಡೆದದ್ದು 2013, ಸೆಪ್ಟೆಂಬರ್ ನಲ್ಲಿ. ಅಂದು ಭಾನುವಾರ ರಾತ್ರಿ ರಾಗಿಣಿ ತಾಯಿಯ ಫೋನ್ ಗೆ ನಿರಂತರವಾಗಿ ಉಮೇಶ್ ಫೋನ್ ಮಾಡಿದ್ದರು. ಅಶ್ಲೀಲವಾಗಿ ಮಾತಾಡಿದ್ದೂ ಅಲ್ಲದೇ, ಎಸ್.ಎಂ.ಎಸ್ ಕೂಡ ಕಳುಹಿಸಿದ್ದರು ಅಂತ ನಟಿ ರಾಗಿಣಿ ದೂರು ನೀಡಿದ್ದರು.

ಕ್ಷಮೆಯಾಚಿಸಿದ್ದ ಉಮೇಶ್

''ರಾಗಿಣಿಗೆ ಫೋನ್ ಮಾಡಿ, ಅಶ್ಲೀಲವಾಗಿ ಮಾತನಾಡಿದ್ದು ನಿಜ. ಇದಾಗಿದ್ದೆಲ್ಲವೂ ಕುಡಿದ ಮತ್ತಿನಲ್ಲಿ'' ಅಂತ ಉಮೇಶ್ ಒಪ್ಪಿಕೊಂಡು ಕ್ಷಮೆಯಾಚಿಸಿದ್ದರು.

ಮಾಡಿದ್ದು ತಮಾಷೆ, ಆಗಿದ್ದು ಅಮಾವಾಸ್ಯೆ.!

ಉಮೇಶ್ ಆಪ್ತವಲಯ ಹೇಳುವ ಪ್ರಕಾರ, ಆತ ಸ್ವಭಾವತಃ ಒಳ್ಳೆಯ ವ್ಯಕ್ತಿ. ವಿಕೃತ ಕಾಮಿ ಅಲ್ಲ. ಎಲ್ಲವೂ ಆಗಿದ್ದು ಆಲ್ಕೋಹಾಲಿನ ಮತ್ತಿನಲ್ಲಿ. ಆತನ ಸುತ್ತಲಿದ್ದವರು ಆತನನ್ನ ತಮಾಷೆಯ ವಸ್ತುವಿನಂತೆ ಅಂದು ಬಳಸಿಕೊಂಡಿದ್ದರು. ಆ ತಮಾಷೆಯಿಂದಲೇ ಉಮೇಶ್ ವಿವಾದಕ್ಕೆ ಸಿಲುಕುವಂತಾಗಿದ್ದು.

ತಿದ್ದಿಕೊಳ್ಳುವುದಕ್ಕೆ ಅವಕಾಶ ನೀಡಬಹುದಿತ್ತು?

ನಿರ್ದೇಶಕನಾಗಬೇಕು ಅನ್ನೋ ಬೆಟ್ಟದಷ್ಟು ಕನಸು ಹೊತ್ತು ಉಮೇಶ್ ಮನೆ ಬಿಟ್ಟು ಬೆಂಗಳೂರು ಸೇರಿದ್ದರು. ಆ ಕನಸನ್ನ ನನಸು ಮಾಡಿಕೊಳ್ಳುವ ಹಾದಿಯಲ್ಲೇ ವಿವಾದಕ್ಕೆ ಸಿಲುಕಿಕೊಂಡರು. ಅದನ್ನ ತಿದ್ದಿಕೊಳ್ಳುವ ಮನಸ್ಸು ಆತನಿಗಿತ್ತು ಅನ್ನೋದಕ್ಕೆ ಅವರ ಗೆಳೆಯರೇ ಸಾಕ್ಷಿ. ಆದರೆ ಆತನಿಗೆ ಅವಕಾಶ ಸಿಕ್ಲಿಲ್ಲ. ಒಂದು ಪುಟ್ಟ ಚಾನ್ಸ್ ಸಿಕ್ಕಿದ್ದರೆ, ಬಹುಶಃ ಉಮೇಶ್ ಬದುಕಿಗೆ ಪೂರ್ಣ ವಿರಾಮ ಬೀಳುತ್ತಿರಲಿಲ್ಲ. ಆತನನ್ನೇ ನಂಬಿದ ಜೀವಗಳು ಇಂದು ಕಣ್ಣೀರಲ್ಲಿ ಕೈತೊಳೆಯುವಂತಾಗುತ್ತಿರಲಿಲ್ಲ.

ಫೇಸ್ ಬುಕ್ ನಲ್ಲಿ ಕಂಬನಿ

ಚಿತ್ರರಂಗದಲ್ಲಿ ಆಗಷ್ಟೇ ಗುರುತಿಸಿಕೊಳ್ಳುತ್ತಿದ್ದ ಉಮೇಶ್ ಆತ್ಮಹತ್ಯೆಗೆ ಶರಣಾದ ಸುದ್ದಿ ಕೇಳಿ ನಿರ್ದೇಶಕ ವೀರೇಂದ್ರ, ಫೇಸ್ ಬುಕ್ ನಲ್ಲಿ ಕಂಬನಿ ಮಿಡಿದಿದ್ದಾರೆ.

English summary
Associate Director Umesh, who made headlines for sending offensive SMS to Kannada Actress Ragini Dwivedi has committed suicide in Bengaluru. According to the sources, Umesh was under depression after the above said controversy.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X