For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಲೈಕ್ಸ್ ದಾಖಲೆ ಉಡೀಸ್ ಮಾಡಿದ 'ಒಡೆಯ': ಕನ್ನಡದ ಟಾಪ್ 5 ಟೀಸರ್ ಪಟ್ಟಿ

  |

  ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಟೀಸರ್, ಟ್ರೈಲರ್, ಡೈಲಾಗ್ ಟ್ರೈಲರ್, ಸಾಂಗ್ ಗಳ ಹವಾ ಹೆಚ್ಚಾಗಿದೆ. ಆ ಟೀಸರ್ ಟಾಪ್, ಈ ಟೀಸರ್ ಟಾಪ್, ಅವರದ್ದು ಅಷ್ಟು ವೀವ್ಸ್, ಇವರದ್ದು ಇಷ್ಟು ವೀವ್ಸ್ ಎಂಬ ಪೈಪೋಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.

  ವೀಕ್ಷಣೆ ವಿಚಾರದಲ್ಲಿ ಸದ್ದು ಮಾಡುತ್ತಿದ್ದ ಸ್ಟಾರ್ ಅಭಿಮಾನಿಗಳು ಈಗ ಲೈಕ್ಸ್ ವಿಚಾರದಲ್ಲೂ ರೇಸ್ ಗಿಳಿದಿದ್ದಾರೆ. ಕನ್ನಡದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿರುವ ಟೀಸರ್ ಯಾವುದು ಎನ್ನುವುದು ಈಗ ಗಾಂಧಿನಗರದ ಟಾಕ್ ಆಫ್ ದಿ ಟೌನ್ ಆಗಿದೆ.

  ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದಿರುವ ಟಾಪ್ 5 ಟೀಸರ್ ಗಳು ಯಾವುದು.? ಮುಂದೆ ಓದಿ...

  'ದಿ ವಿಲನ್' ಟೀಸರ್

  'ದಿ ವಿಲನ್' ಟೀಸರ್

  ಶಿವರಾಜ್ ಕುಮಾರ್ ಮತ್ತು ಸುದೀಪ್ ನಟನೆಯ ದಿ ವಿಲನ್ ಸಿನಿಮಾ ಎರಡು ಟೀಸರ್ ಬಿಡುಗಡೆಯಾಗಿತ್ತು. ಸುದೀಪ್ ವರ್ಷನ್ ಒಂದು, ಶಿವಣ್ಣ ವರ್ಷನ್ ಒಂದು ಟೀಸರ್. ಇದರಲ್ಲಿ ಸುದೀಪ್ ವರ್ಷನ್ ಟೀಸರ್ 7.7 ಮಿಲಿಯನ್ ವೀಕ್ಷಣೆ ಕಂಡಿದೆ. ಒಂದು ವರ್ಷದ ಹಿಂದೆ ಬಿಡುಗಡೆಯಾಗಿದ್ದ ಈ ಟೀಸರ್ ಗೆ 103K ಲೈಕ್ಸ್ ಬಂದಿದೆ. ಇದು ಟಾಪ್ ಐದರಲ್ಲಿ 5ನೇ ಸ್ಥಾನದಲ್ಲಿದೆ.

  'ಒಡೆಯ' ಟೀಸರ್ ಮೂಲಕ ದರ್ಶನ್ ನಿರ್ಮಿಸಿದ 8 ದಾಖಲೆ'ಒಡೆಯ' ಟೀಸರ್ ಮೂಲಕ ದರ್ಶನ್ ನಿರ್ಮಿಸಿದ 8 ದಾಖಲೆ

  'ಪೊಗರು' ಟೀಸರ್

  'ಪೊಗರು' ಟೀಸರ್

  ಧ್ರುವ ಸರ್ಜಾ ನಟನೆಯಲ್ಲಿ ಮೂಡಿಬರುತ್ತಿರುವ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ಭರ್ಜರಿ ಸದ್ದು ಮಾಡ್ತಿದೆ. ಅದಕ್ಕೂ ಮುಂಚೆ ಬಂದಿದ್ದ ಟೀಸರ್ ಕೂಡ ಅಷ್ಟೇ ಅಬ್ಬರ ಮಾಡಿತ್ತು. ಯೂಟ್ಯೂಬ್ ನಲ್ಲಿ 6.1 ಮಿಲಿಯನ್ ವೀಕ್ಷಣೆ ಕಂಡಿರುವ ಈ ಟೀಸರ್ 113K ಲೈಕ್ಸ್ ಪಡೆದುಕೊಂಡಿದೆ. ಟಾಪ್ ಐದರಲ್ಲಿ 4ನೇ ಸ್ಥಾನದಲ್ಲಿದೆ.

  'ನನ್ನ ಫೇಸ್ ಮಾಡಬೇಕು ಅಂದರೆ ಗುಂಡಿಗೆಲಿ ಧಮ್ ಇರಬೇಕು: ಒಡೆಯ ಡೈಲಾಗ್ ಗೆ ಅಭಿಮಾನಿಗಳು ಫಿದಾ'ನನ್ನ ಫೇಸ್ ಮಾಡಬೇಕು ಅಂದರೆ ಗುಂಡಿಗೆಲಿ ಧಮ್ ಇರಬೇಕು: ಒಡೆಯ ಡೈಲಾಗ್ ಗೆ ಅಭಿಮಾನಿಗಳು ಫಿದಾ

  'ಯುವರತ್ನ' ಟೀಸರ್

  'ಯುವರತ್ನ' ಟೀಸರ್

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. 3.1 ಮೀಲಿಯನ್ ವೀಕ್ಷಣೆ ಕಂಡಿರುವ ಈ ಟೀಸರ್ ಲೈಕ್ಸ್ ವಿಚಾರದಲ್ಲಿ ಮುಂದಿದೆ. 136K ಲೈಕ್ಸ್ ಪಡೆದುಕೊಂಡಿರುವ ಯುವರತ್ನ ಟಾಪ್ ಐದರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

  'ಪೈಲ್ವಾನ್' ಟೀಸರ್

  'ಪೈಲ್ವಾನ್' ಟೀಸರ್

  ಅತಿ ಹೆಚ್ಚು ಲೈಕ್ಸ್ ಪಡೆದ ಕನ್ನಡದ ಟೀಸರ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಪೈಲ್ವಾನ್ 178k ಲೈಕ್ಸ್ ಹೊಂದಿತ್ತು.6.7 ಮಿಲಿಯನ್ ವೀಕ್ಷಣೆಯೂ ಇತ್ತು. ಇದೀಗ, ಪೈಲ್ವಾನ್ ಟೀಸರ್ ಲೈಕ್ಸ್ ವಿಚಾರದಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದೆ.

  'ಕುರುಕ್ಷೇತ್ರ', 'ಪೈಲ್ವಾನ್' ಟ್ರೇಲರ್ ಗಳನ್ನು ಹಿಂದೆ ಹಾಕಿದ 'ಪೊಗರು''ಕುರುಕ್ಷೇತ್ರ', 'ಪೈಲ್ವಾನ್' ಟ್ರೇಲರ್ ಗಳನ್ನು ಹಿಂದೆ ಹಾಕಿದ 'ಪೊಗರು'

  ಮೊದಲ ಸ್ಥಾನಕ್ಕೆ ಬಂದ 'ಒಡೆಯ'

  ಮೊದಲ ಸ್ಥಾನಕ್ಕೆ ಬಂದ 'ಒಡೆಯ'

  ಡಿ ಬಾಸ್ ದರ್ಶನ್ ನಟಿಸಿರುವ ಒಡೆಯ ಚಿತ್ರದ ಟೀಸರ್ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್ ಗೆ 179K ಲೈಕ್ಸ್ ಬಂದಿದೆ. ಈ ಮೂಲಕ ಅತಿ ಹೆಚ್ಚು ಲೈಕ್ಸ್ ಪಡೆದ ಕನ್ನಡದ ಟೀಸರ್ ಗಳ ಪೈಕಿ ಒಡೆಯ ಮೊದಲ ಸ್ಥಾನದಲ್ಲಿದೆ.

  English summary
  Darshan starrer Odeya is the most liked teaser in Kannada Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X