For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕಕ್ಕೆ ಹೆಮ್ಮೆ ತಂದ ರಾಮ್ ಗೋಪಾಲ್ ವರ್ಮಾ

  By Bharath Kumar
  |

  ಸದಾ ಒಂದಲ್ಲ ಒಂದು ವಿವಾದಗಳಿಂದ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ ಈಗ ಕರ್ನಾಟಕ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಲವು ಬಾರಿ ಕನ್ನಡಿಗರ ಕೆಂಗಣ್ಣಿಗೂ ಗುರಿಯಾಗಿರುವ ಆರ್.ಜಿ.ವಿ ಈ ಸಲ ಇಷ್ಟವಾಗುವ ಕೆಲಸ ಮಾಡಿದ್ದಾರೆ.

  ಏನಪ್ಪಾ ವಿವಾದಾತ್ಮಕ ನಿರ್ದೇಶಕನಿಂದ ಅಂತಹ ಖುಷಿಯ ವಿಚಾರ ಅಂದ್ರಾ.! ಇದೇ ರೀ. ತೆಲುಗು ಸೂಪರ್ ಸ್ಟಾರ್ ನಾಗಾರ್ಜುನ ಅಭಿನಯಿಸಿ, ವರ್ಮಾ ನಿರ್ದೇಶನ ಮಾಡಿರುವ 'ಆಫೀಸರ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಟ್ರೈಲರ್ ಮತ್ತು ಪೋಸ್ಟರ್ ಗಳಿಂದ ಹೆಚ್ಚು ಗಮನ ಸೆಳೆಯುತ್ತಿದೆ.

  ಇಷ್ಟು ದಿನ ಇದು ಆರ್.ಜಿ.ವಿ ಸಿನಿಮಾ, ನಾಗಾರ್ಜುನ ಸಿನಿಮಾ ಎನ್ನುತ್ತಿದ್ದವರು, ಇದು ಕರ್ನಾಟಕ್ಕೂ ಸಂಬಂಧ ಹೊಂದಿರುವ ಸಿನಿಮಾ ಎನ್ನಬೇಕಿದೆ. ಅಷ್ಟಕ್ಕೂ, ವರ್ಮಾ ಅವರ ಆಫೀಸರ್ ಗೂ ಕರ್ನಾಟಕಕ್ಕೂ ಏನ್ ಸಂಬಂಧ. ಇದರಿಂದ ಕನ್ನಡಿಗರು ಯಾಕೆ ಹೆಮ್ಮೆ ಪಡಬೇಕು.? ಮುಂದೆ ಓದಿ....

  'ಆಫೀಸರ್' ಸಿನಿಮಾ ಯಾರ ಕಥೆ ಗೊತ್ತಾ.?

  'ಆಫೀಸರ್' ಸಿನಿಮಾ ಯಾರ ಕಥೆ ಗೊತ್ತಾ.?

  ನಾಗಾರ್ಜುನ ಅಭಿನಯದ 'ಆಫೀಸರ್' ನೈಜಕಥೆಯಾಧರಿತ ಸಿನಿಮಾ. ಮುಂಬೈನಲ್ಲಿ ನಡೆಯುವ ಕಥೆ ಇದಾಗಿದ್ದು, ಮುಂಬೈ ಎಸ್.ಐ.ಟಿ ಅಧಿಕಾರೊಯೊಬ್ಬರ ನಿಜಜೀವನದ ಕಥೆ. ಈ ಅಧಿಕಾರಿ ಮೂಲತಃ ಕರ್ನಾಟಕದವರು ಎನ್ನುವುದು ಹೆಮ್ಮೆಯ ವಿಚಾರ. ಈ ವಿಷ್ಯವನ್ನ ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಬಹಿರಂಗಪಡಿಸಿದ್ದಾರೆ.

  ಯಾರು ಆ ಅಧಿಕಾರಿ.?

  ಯಾರು ಆ ಅಧಿಕಾರಿ.?

  'ಆಫೀಸರ್' ಸಿನಿಮಾ ಹಿಂದಿನ ರಿಯಲ್ ಹೀರೋ ಐಪಿಎಸ್ ಅಧಿಕಾರಿ ಕೆ.ಎಸ್ ಪ್ರಸನ್ನ. ಅಂದ್ಹಾಗೆ, ಪ್ರಸನ್ನ ಅವರು ಮೂಲತಃ ಕರ್ನಾಟಕದವರು. ಮುಂಬೈನಲ್ಲಿ ಎಸ್.ಐ.ಟಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕೂಡ ಇವರನ್ನ ಹಲವು ಬಾರಿ ಭೇಟಿ ಮಾಡಿದ್ದಾರೆ. ಪ್ರಸ್ತುತ ಮುಂಬೈ ಕ್ರೈಂ ವಿಭಾಗದಲ್ಲಿ ಸಹಾಯಕ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ.

  'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ'ಬಾಹುಬಲಿ' ಚಿತ್ರವನ್ನ ಕೈಬಿಟ್ಟ ಶ್ರೀದೇವಿಯ ಅಸಲಿ ಕಾರಣ ಬಿಚ್ಚಿಟ್ಟ ವರ್ಮಾ

  ನಾಗಾರ್ಜುನ ಸೂಕ್ತ ಆಯ್ಕೆ

  'ಐಪಿಎಸ್ ಅಧಿಕಾರಿ ಕೆ.ಎಸ್ ಪ್ರಸನ್ನ ಮತ್ತು ನಟ ನಾಗಾರ್ಜುನ ಅವರ ನಡುವೆ ವಿಚಿತ್ರ ಹೋಲಿಕೆ ಇದೆ. ನನ್ನ ವೈಯಕ್ತಿಕ ದೃಷ್ಟಿಕೋನದಲ್ಲಿ ಇಬ್ಬರನ್ನ ಹೋಲಿಸಿದ್ದೇನೆ. ಮತ್ತು ಆಫೀಸರ್ ಚಿತ್ರದಲ್ಲಿ ಅದನ್ನ ಸೆರೆಹಿಡಿದಿದ್ದೇನೆ'' ಎಂದು ಆರ್.ಜಿ.ವಿ ಸರಣಿ ಟ್ವೀಟ್ ಮಾಡಿದ್ದಾರೆ.

  ಪ್ರಸನ್ನ ಅವರೇ ಹೇಳಿದ ಕಥೆ

  ಪ್ರಸನ್ನ ಅವರೇ ಹೇಳಿದ ಕಥೆ

  ''ಕರ್ನಾಟಕ ಮೂಲದ ಕೆ ಎಂ ಪ್ರಸನ್ನ ಐಪಿಎಸ್ ಅಧಿಕಾರಿ. ಅವರನ್ನು ಮುಂಬೈನ ಓರ್ವ ಪೊಲೀಸ್ ಉನ್ನತಾಧಿಕಾರಿ ಪ್ರಕರಣದ ವಿಚಾರಣೆಗೆ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್.ಐ.ಟಿ) ಮುಖ್ಯಸ್ಥರನ್ನಾಗಿ ನೇಮಿಸಿದ್ದರು. 2010ರಲ್ಲಿ ಅವರು ನನ್ನೊಂದಿಗೆ ಕೆಲವು ಸಂಗತಿಗಳನ್ನು ಹಂಚಿಕೊಂಡರು. ಅದರ ಆಧಾರವಾಗಿ ತೆರೆಗೆ ತಂದಿರುವ ಸಿನಿಮಾ 'ಆಫೀಸರ್' ಎಂದು ಟ್ವೀಟ್ ಮಾಡಿದ್ದಾರೆ.

  ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ

  English summary
  The Story of Nagarjuna‘s OFFICER is based upon a true life IPS officer K M Prasanna from Karnataka, who was appointed as the chief of a SIT (Special Investigation Team) to investigate a highly reputed cop in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X