ಅಂಬರೀಶ್ ಜನ್ಮದಿನಕ್ಕೆ ಯಂಗ್ ರೆಬೆಲ್ ಸ್ಟಾರ್ ನೀಡಿದ ಉಡುಗೊರೆ
ರೆಬೆಲ್ ಸ್ಟಾರ್ ಅವರ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಉಡುಗೊರೆಯಾಗಿ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್' ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆ ಮಾಡಲಾಗಿದೆ.
Recommended Video
ದುನಿಯಾ ಸೂರಿ ನಿರ್ದೇಶನದಲ್ಲಿ ಅಭಿಷೇಕ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ ವುಡ್‌ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಏಕೆಂದರೆ ದುನಿಯಾ ಸೂರಿ ಪಕ್ಕಾ ಮಾಸ್ ಮತ್ತು ರಾ ಚಿತ್ರಗಳಿಗೆ ಹೆಸರಾದವರು. ಅವರ ಚಿತ್ರದಲ್ಲಿ ಅಭಿಷೇಕ್ ಹೇಗೆ ಕಾಣಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಹಾಗೆಯೇ ಅಭಿಷೇಕ್ ಅವರ ಸಿನಿ ಬದುಕಿನ ಆರಂಭದಲ್ಲಿ ಸೂರಿ ಜತೆ ಸಿನಿಮಾ ಅವರಿಗೆ ಬಹುದೊಡ್ಡ ತಿರುವು ನೀಡಲಿದೆ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ.
ಸೂರಿ ನಿರ್ದೇಶನದ ಸಿನಿಮಾಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಹೊಡೆದಾಟ, ಪ್ರೀತಿ-ಪ್ರೇಮ, ರೌಡಿಸಂ ಎಲ್ಲ ಕಥೆಗಳನ್ನೂ ವಿಭಿನ್ನ ದಾಟಿಯಲ್ಲಿ ಹೇಳುವ ಸೂರಿ ಹಾಗೂ ಈಗಷ್ಟೇ ಚಿತ್ರರಂಗದ ಪಯಣ ಆರಂಭಿಸಿರುವ ಅಭಿಷೇಕ್ ಕಾಂಬಿನೇಷನ್ ಅನೇಕ ನಿರೀಕ್ಷೆಗಳನ್ನು ಮೂಡಿಸಿದೆ. ಮುಂದೆ ಓದಿ...

ಕಾತರ ಮೂಡಿಸಿದ 'ಬ್ಯಾಡ್ ಮ್ಯಾನರ್ಸ್'
ಸೂರಿ ಮತ್ತು ಅಭಿಷೇಕ್ ಜೋಡಿ 'ಬ್ಯಾಡ್ ಮ್ಯಾನರ್ಸ್' ಚಿತ್ರ ಮಾಡುತ್ತಿರುವುದು ಇತ್ತೀಚೆಗೆ ಬಹಿರಂಗವಾಗಿತ್ತು, ಎರಡು ದಿನಗಳ ಹಿಂದೆ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಕೈಯಲ್ಲಿ ಗನ್ ಹಿಡಿದ ಅಭಿಷೇಕ್ ಲುಕ್ ಗಮನ ಸೆಳೆದಿತ್ತು.

ಅಂಬರೀಷ್ ನೆನಪು
ಅಂಬರೀಷ್ ಅವರ ಜನ್ಮದಿನ ಅಂಗವಾಗಿ ಚಿತ್ರದ ಮೊದಲ ಅಧಿಕೃತ ಲುಕ್ ವಿಡಿಯೋ ಬಿಡುಗಡೆ ಮಾಡಲಾಗಿದೆ. 'ಯಂಗ್ ರೆಬೆಲ್ ಸ್ಟಾರ್' ಎಂಬ ಬಿರುದಿನೊಂದಿಗೆ ಅಭಿಷೇಕ್ ಅಂಬರೀಷ್ ಅವರನ್ನು ಪರಿಚಯಿಸಲಾಗಿದೆ. ಗನ್ ಹಿಡಿದ ರಗಡ್ ಲುಕ್‌ನಲ್ಲಿ ಅಭಿಷೇಕ್, 'ಅಂತ' ಚಿತ್ರದ ಅಂಬರೀಷ್ ಅವರನ್ನು ನೆನಪಿಸುತ್ತಾರೆ.

ಆಕ್ಷನ್ ಚಿತ್ರ ಗ್ಯಾರಂಟಿ
ಅಭಿಷೇಕ್ ಅವರ ಎರಡು ಲುಕ್‌ಗಳು ಅವರು 'ಯಂಗ್ ರೆಬೆಲ್' ಎಂಬ ಬಿರುದಿಗೆ ಸೂಕ್ತವಾಗಿದೆ ಎಂಬುದನ್ನು ತೋರಿಸಿವೆ. ಚರಣ್ ರಾಜ್ ಹಿನ್ನೆಲೆ ಸಂಗೀತ ಪರಿಪೂರ್ಣ ಆಕ್ಷನ್ ಚಿತ್ರದ ಫೀಲ್ ನೀಡುತ್ತದೆ. ಸೂರಿ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸುವುದು ಈ ಮೂಲಕ ಖಾತರಿಯಾಗಿದೆ.

ಯಶಸ್ಸು ಗಳಿಸದ ಅಮರ್
ಅಭಿಷೇಕ್ 'ಅಮರ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ನಾಗಶೇಖರ್ ನಿರ್ದೇಶನದ ಈ ಸಿನಿಮಾ ಅನೇಕ ನಿರೀಕ್ಷೆಗಳನ್ನು ಮೂಡಿಸಿದ್ದರೂ, ಯಶಸ್ಸು ಗಳಿಸುವಲ್ಲಿ ವಿಫಲವಾಗಿತ್ತು. ಪ್ರೇಮ ಕಥೆಯೊಂದನ್ನು ನಾಗಶೇಖರ್ ಹೇಳಿದ್ದರು. ಎರಡನೆಯ ಚಿತ್ರದಲ್ಲಿಯೇ ಅಭಿಷೇಕ್ ತಮ್ಮ ಲುಕ್ ಬದಲಿಸಿಕೊಳ್ಳುತ್ತಿದ್ದಾರೆ. ಇದು ಅವರ ಸಿನಿಮಾ ಬದುಕಿಗೆ ದೊಡ್ಡ ಮೆಟ್ಟಿಲಾಗಲಿದೆ ಎಂಬ ಮಾತುಗಳು ಈಗಲೇ ಕೇಳಿಬರುತ್ತಿವೆ.


Click it and Unblock the Notifications











