ವರ್ಮಾ ಶಿಷ್ಯನ ಒಂದು ರೊಮ್ಯಾಂಟಿಕ್ ಕ್ರೈಂ ಕಥೆ
ಭಾರತೀಯ ಸಿನೆಮಾದ ಅತ್ಯಂತ ಚಿರಪರಿಚಿತ ಹೆಸರು ರಾಮ್ ಗೋಪಾಲ್ ವರ್ಮ. ಅವರ ಶಿಷ್ಯಂದಿರ ಬಳಗ ಬಹಳವೆ ಇದೆ. ಅದರಲ್ಲಿ ಒಬ್ಬ ಶಿಷ್ಯ ಶಶುನರಾಜು ನಾಯಕುಲ ರೀಮೇಕ್ ಸಿನಿಮಾದೊಂದಿಗೆ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.
ರಾಮ್ ಗೋಪಾಲ್ ವರ್ಮ ಅವರ 'ಸತ್ಯ-2' ಸಿನೆಮಾದಲ್ಲಿ ಅಸೋಸಿಯೇಟ್ ನಿರ್ದೇಶಕರಾದ ಶಶುನರಾಜು ನಾಯಕುಲ ಅವರು ಕನ್ನಡಲ್ಲಿ ಸ್ವತಂತ್ರ ನಿರ್ದೇಶಕರಾಗಿ ಆಗಮಿಸುತ್ತಿದ್ದಾರೆ. ತೆಲುಗು ಭಾಷೆಯಲ್ಲಿ ಜನಪ್ರಿಯತೆ ಪಡೆದ 'ಒಕ ರೊಮ್ಯಾಂಟಿಕ್ ಕ್ರೈಂ ಕಥಾ' ಕನ್ನಡದಲ್ಲಿ 'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಆಗಿ ಸೆಟ್ಟೇರುತ್ತಿದೆ.

ಈ ಚಿತ್ರದ ಕಥಾಹಂದರ ಇಂದಿನ ಸಾಮಾಜಿಕ ಬದುಕಿಗೆ ಸಂಬಂದಪಟ್ಟ ವಿಚಾರ ಆಗಿದೆ. ದೂರದ ಊರುಗಳಿಂದ ಶ್ರೀಮಂತ ಮನೆತನದ ಮಕ್ಕಳು ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳಿಗೆ ಬಂದು ಸಹವಾಸದೋಷದಿಂದ ಮೋಜು, ಮಸ್ತಿಯಲ್ಲಿ ತೊಡಗಿಕೊಂಡು ಸಮಾಜಕ್ಕೆ ಒಂದು ಪಿಡುಗಾಗಿ ಬಿಡುವುದು ಈ ಚಿತ್ರದ ಎಳೆ. [ಹೆಣ್ಣೆಂದರೆ ಕೇವಲ ಕಾಮತೃಷೆ ತೀರಿಸುವ ವಸ್ತು]
ಶಶುನರಾಜು ಅವರು ಈ ಹಿಂದೆ '1940ಲೋ ಒಕ ಗ್ರಾಮಮ್' ಎಂಬ ತೆಲುಗು ಸಿನಿಮಾಕ್ಕೆ ಸಹಾಯಕ ನಿರ್ದೇಶಕರಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ್ದರು. ಪ್ರಭುದೇವ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಲಾವಿದರ ಆಯ್ಕೆ ಪ್ರಕ್ರಿಯೆ ಇದೀಗ ಪ್ರಾರಂಭವಾಗಿದೆ. ಅಭಿನಯಿಸಲು ಇಚ್ಛಿಸುವವರು ತಮ್ಮ ವಿವರಗಳನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ: [email protected] (ಒನ್ಇಂಡಿಯಾ ಕನ್ನಡ)


Click it and Unblock the Notifications











