»   » ಒಲವೇ ಮಂದಾರ ಶ್ರೀಕಿಗೆ ಕೂಡಿಬಂತು ಕಂಕಣಬಲ

ಒಲವೇ ಮಂದಾರ ಶ್ರೀಕಿಗೆ ಕೂಡಿಬಂತು ಕಂಕಣಬಲ

Posted By:
Subscribe to Filmibeat Kannada

'ಒಲವೇ ಮಂದಾರ' ಖ್ಯಾತಿಯ ನಟ ಶ್ರೀಕಿ ಅವರಿಗೆ ಕಂಕಣಬಲ ಕೂಡಿಬಂದಿದೆ. ನವೆಂಬರ್ 29ರಂದು ಅವರ ವಿವಾಹ ನಡೆಯಲಿದೆ. ಎಂಬಿಎ ಓದಿರುವ ವೀಣಾ ಅವರು ಶ್ರೀಕಿ ಬಾಳಸಂಗಾತಿಯಾಗುತ್ತಿದ್ದಾರೆ. ಅಂದಹಾಗೆ ಇದು ಗುರುಹಿರಿಯರು ನಿಶ್ಚಯಿಸಿರುವ ಮದುವೆ ಎಂದಿವೆ ಕುಟುಂಬ ಮೂಲಗಳು.

ಒಲವೇ ಮಂದಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಕಿ ಆರಂಭದಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಅಭಿನಯಿಸಿದ ಲೂಸುಗಳು, 'B3' ಹಾಗೂ ಮನದ ಮರೆಯಲ್ಲಿ ಚಿತ್ರಗಳ ಮೂಲಕ ಎಲ್ಲರ ಗಮನಸೆಳೆದರು. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

Kannada actor Shriki

ಸದ್ಯಕ್ಕೆ ಅವರು 'ಗೋವಾ' ಹಾಗೂ 'ಪಾತರಗಿತ್ತಿ' ಎಂಬ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನವೆಂಬರ್ 29ರಂದು ಶ್ರೀಕಿ ಮದುವೆ ಶೃಂಗೇರಿಯಲ್ಲಿ ನಡೆಯಲಿದೆ. ಆರತಕ್ಷತೆ ಕಾರ್ಯಕ್ರಮ ನವೆಂಬರ್ 30ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಪಾತರಗಿತ್ತಿ ಹಾಗೂ ಗೋವಾ ಚಿತ್ರಗಳ ಬಳಿಕ ಶ್ರೀಕಿ ಗೃಹಸ್ಥಾಶ್ರಮ ಪ್ರವೇಶಿಸುತ್ತಿದ್ದು ಬಳಿಕ ತಾತ್ಕಾಲಿಕವಾಗಿ ಸ್ಯಾಂಡಲ್ ವುಡ್ ನಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. 'ಒಲವೇ ಮಂದಾರ' ಚಿತ್ರವನ್ನು ಬಿಬಿಎಂಪಿ ಕಾರ್ಪೊರೇಟರ್ ಹಾಗೂ ಶ್ರೀಕಿ ಅವರ ತಂದೆ ಗೋವಿಂದರಾಜು ನಿರ್ಮಿಸಿದ್ದರು. ಪಾತರಗಿತ್ತಿ ಹಾಗೂ ಗೋವಾ ಚಿತ್ರಗಳ ಬಳಿಕ ಅವರ ತಂದೆಯರ ನಿರ್ಮಾಣದ ಚಿತ್ರದಲ್ಲಿ ಶ್ರೀಕಿ ತೊಡಗಿಕೊಳ್ಳಲಿದ್ದಾರೆ.

English summary
'Olave Mandara' fame actor Shriki aka Shrikanth is all set to enter marital life. His wedding has been fixed on 29th November. Veena, an MBA graduate, is the bride and family says it's an arranged marriage.
Please Wait while comments are loading...