For Quick Alerts
  ALLOW NOTIFICATIONS  
  For Daily Alerts

  ಡ್ರಗ್ ಪ್ರಕರಣದಲ್ಲಿ ರಾಗಿಣಿಗೆ ಮುಳುವಾಗಿದ್ದು ಎಲ್ಲಿ? ನಟಿ ಹೆಸರು ಸಿಕ್ಕಿಹಾಕಿಕೊಂಡಿದ್ದು ಹೇಗೆ?

  |

  ಡ್ರಗ್ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟಿ ರಾಗಿಣಿ ಬಂಧನವಾಗಿದೆ. ರಾಗಿಣಿ ಆಪ್ತ ರವಿಶಂಕರ್ ಅವರ ಜೊತೆ ಸಂಪರ್ಕದಲ್ಲಿದ್ದ ಕಾರಣ ರಾಗಿಣಿ ಅವರಿಗೂ ಡ್ರಗ್ ಪ್ರಕರಣದಲ್ಲಿ ಸಂಬಂಧವಿದೆ ಎಂಬ ಆರೋಪದಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  ಇಡೀ ರಾತ್ರಿ ಪೊಲೀಸ್ ವಶದಲ್ಲಿದ್ದ Raginiಗೆ ಇಂದು ಎರಡನೇ ದಿನದ ವಿಚಾರಣೆ | Filmibeat Kannada

  ಮೇಲ್ನೋಟಕ್ಕೆ ಇಂದ್ರಜಿತ್ ಲಂಕೇಶ್ ನೀಡಿರುವ ಮಾಹಿತಿ ಈ ಪ್ರಕರಣದಲ್ಲಿ ಕೆಲಸ ಮಾಡುತ್ತಿರುಬಹುದು ಎಂಬ ಚರ್ಚೆ ಇದ್ದರೂ, ಅದಕ್ಕೂ ಮುಂಚೆಯೇ ಸಿಸಿಬಿ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದರು ಎಂದು ತಿಳಿದು ಬಂದಿದೆ. ರಾಗಿಣಿ, ರವಿಶಂಕರ್, ರಾಹುಲ್ ಹಾಗೂ ಇನ್ನಿತರರ ಬಂಧನದ ಹಿಂದೆ 2018ರ ಪ್ರಕರಣ ಇದೆ. ಏನಿದು ಹಳೆ ಕೇಸ್? ಮುಂದೆ ಓದಿ....

  ದೆಹಲಿಯಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ, ರಾಗಿಣಿಗೂ ನಂಟು!

  ಪ್ರತೀಕ್ ಶೆಟ್ಟಿ ಪ್ರಕರಣ

  ಪ್ರತೀಕ್ ಶೆಟ್ಟಿ ಪ್ರಕರಣ

  2018ರಲ್ಲಿ ಸಿಸಿಬಿ ಪೋಲಿಸರು ಪ್ರತೀಕ್ ಶೆಟ್ಟಿ ಎಂಬ ಸಾಫ್ಟ್‌ವೇರ್ ಇಂಜಿನಿಯರ್‌ನನ್ನು ಬಂಧಿಸುತ್ತಾರೆ. ಈತ ಡ್ರಗ್ ಪೆಡ್ಲರ್ ಆಗಿದ್ದ ಎನ್ನುವುದು ತಿಳಿಯುತ್ತದೆ. ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ಸಿಸಿಬಿ ಪೊಲಿಸರಿಗೆ ಸಿಗುತ್ತದೆ. ಪಾರ್ಟಿ ಹೆಸರಿನಲ್ಲಿ ಸಿನಿಮಾ ನಟಿಯರಿಗೆ, ಉದ್ಯಮಿಗಳ ಮಕ್ಕಳಿಗೆ ಹಾಗೂ ಅಧಿಕಾರಿಗಳ ಮಕ್ಕಳಿಗೆ ಡ್ರಗ್ ಸರಬರಾಜು ಮಾಡುತ್ತಿದ್ದ ಎಂದು ಬಹಿರಂಗವಾಗಿತ್ತು.

  ಸ್ಯಾಂಡಲ್‌ವುಡ್ ಬೇಟೆಗೆ ಆಗಲೇ ಪ್ಲಾನ್ ಆಗಿತ್ತು !

  ಸ್ಯಾಂಡಲ್‌ವುಡ್ ಬೇಟೆಗೆ ಆಗಲೇ ಪ್ಲಾನ್ ಆಗಿತ್ತು !

  ಪ್ರತೀಕ್ ಶೆಟ್ಟಿಯಿಂದ ಪಡೆದ ಮಾಹಿತಿ ಆಧಾರದಲ್ಲಿ ಕೆಲವು ಸಿನಿಮಾ ಕಲಾವಿದರು ಹಾಗೂ ಅವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಆಪ್ತರ ಮೇಲೆ ಸಿಸಿಬಿ ಕಣ್ಣಿಟ್ಟಿತ್ತು. ಹೀಗೆ, ಗ್ರೌಂಡ್ ವರ್ಕ್ ಮಾಡಿದ ವೇಳೆ ಸಿಕ್ಕಿಬಿದ್ದವರೇ ರವಿಶಂಕರ್ ಮತ್ತು ರಾಹುಲ್ ಹಾಗೂ ಕಾರ್ತಿಕ್ ರಾಜ್.

  ಮೂರು ದಿನ ರಾಗಿಣಿ ಸಿಸಿಬಿ ವಶಕ್ಕೆ ನೀಡಿದ ನ್ಯಾಯಾಲಯ

  ರವಿಶಂಕರ್ ಜೊತೆ ನಟಿ ರಾಗಿಣಿ ನಂಟು!

  ರವಿಶಂಕರ್ ಜೊತೆ ನಟಿ ರಾಗಿಣಿ ನಂಟು!

  ರವಿಶಂಕರ್ ಡ್ರಗ್ ಜಾಲದಲ್ಲಿ ಭಾಗಿಯಾಗಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ರವಿಶಂಕರ್ ಅವರ ದಿನಚರಿಯನ್ನು ತೀರಾ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಎಲ್ಲೆಲ್ಲಿ ಹೋಗುತ್ತಿದ್ದಾರೆ, ಯಾರನ್ನು ಭೇಟಿ ಮಾಡ್ತಾರೆ, ಯಾವ ಪಾರ್ಟಿಗಳಲ್ಲಿ ಭಾಗಿಯಾಗಿದ್ದಾರೆ ಹಾಗೂ ರಾಗಿಣಿ ಜೊತೆಗಿನ ನಂಟು ಎಂತಹದ್ದು ಎಂಬ ಮಾಹಿತಿಯನ್ನು ಕಲೆ ಹಾಕಿದ್ದರು.

  ರಾಗಿಣಿ ಹೆಸರು ಸಿಕ್ಕಿಹಾಕಿಕೊಂಡಿದ್ದೇ ಇಲ್ಲಿ?

  ರಾಗಿಣಿ ಹೆಸರು ಸಿಕ್ಕಿಹಾಕಿಕೊಂಡಿದ್ದೇ ಇಲ್ಲಿ?

  ಡ್ರಗ್ ಪ್ರಕರಣದಲ್ಲಿ ರವಿಶಂಕರ್ ಅವರ ಮೇಲೆ ಸಿಸಿಬಿ ಪೊಲೀಸರು ಅದಾಗಲೇ ಕಣ್ಣಿಟ್ಟಿದ್ದರು. ಈ ವೇಳೆ ರಾಗಿಣಿ ಜೊತೆ ಹೆಚ್ಚು ನಂಟು ಹೊಂದಿರುವ ಬಗ್ಗೆ ತಿಳಿಯಿತು. ಪಾರ್ಟಿಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿಯೇ ರವಿಶಂಕರ್ ಬಂಧಿಸಿದ ಮರುದಿನವೇ ರಾಗಿಣಿಗೂ ನೋಟಿಸ್ ನೀಡಲಾಯಿತು. ಮನೆ ಮೇಲೆ ದಾಳಿ ಮಾಡಲಾಯಿತು. ರಾಗಿಣಿ ಸಹ ಡ್ರಗ್ ಜಾಲದಲ್ಲಿ ನಂಟು ಹೊಂದಿರುವ ಬಗ್ಗೆ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿರುವ ಕಾರಣ ಅರೆಸ್ಟ್ ಸಹ ಮಾಡಲಾಗಿದೆ.

  ವೀರೇನ್ ಖನ್ನಾ ಹೇಳಿಕೆಯೂ ಕಂಟಕ?

  ವೀರೇನ್ ಖನ್ನಾ ಹೇಳಿಕೆಯೂ ಕಂಟಕ?

  ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ದೆಹಲಿಯಲ್ಲಿ ವೀರೇನ್ ಖನ್ನಾ ಎಂಬ ಮತ್ತೊಬ್ಬ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿರುವ ಪೊಲೀಸರ ಬಳಿಕ ಹಲವು ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ಹೇಳಲಾಗಿದೆ. ವೀರೇನ್ ಖನ್ನಾ ಸಹ ರಾಗಿಣಿ ಹೆಸರು ಉಲ್ಲೇಖಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  English summary
  Drugs in Sandalwood: Kannada actress ragini dwivedi has arrested by CCB police. here is the story behind the ragini arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X