For Quick Alerts
  ALLOW NOTIFICATIONS  
  For Daily Alerts

  'ನಾನು ದರ್ಶನ್‌ರನ್ನು ನೋಡಲೇಬೇಕು ಕರೆದುಕೊಂಡು ಹೋಗಿ': ಅಜ್ಜಿಯ ಬೇಡಿಕೆ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಅಭಿಮಾನಿಗಳಿದ್ದಾರೆ. ಕರ್ನಾಟಕದಲ್ಲಿ ಅತಿ ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ಎನ್ನುತ್ತಾರೆ. ಆದ್ರೆ, ಡಿ ಬಾಸ್ ಅಂದ್ರೆ ಹಿರಿಯರಿಗೂ ಅಷ್ಟೇ ಇಷ್ಟ ಎನ್ನುವುದಕ್ಕೆ ಈ ಅಜ್ಜಿ ಸಾಕ್ಷಿ.

  ಡಿ ಬಾಸ್ ದರ್ಶನ್ ನೋಡೋಕೆ ಹಠ ಹಿಡಿದು ಕುಳಿತ ಅಜ್ಜಿ, ವಿಡಿಯೋ ವೈರಲ್ | Filmibeat Kannada

  ಮೈಸೂರಿನ ಮೂಲದ ಅಜ್ಜಿಯೊಬ್ಬರು ದರ್ಶನ್ ಅವರನ್ನು ನೋಡಲೇಬೇಕು ನನ್ನನ್ನು ಕರೆದುಕೊಂಡು ಹೋಗಿ ಎಂದು ಯುವಕರ ಬಳಿ ಬೇಡಿಕೆಯಿಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ''ದರ್ಶನ್ ಅವರನ್ನು ನೋಡಲೇಬೇಕು, ನೋಡಲೇಬೇಕು, ನೋಡಲೇಬೇಕು, ಕರೆದುಕೊಂಡು ಹೋಗಿ. ನೀವು ಮಾತ್ರ ಫೋಟೊ ತೆಗಿಸಿಕೊಂಡಿದ್ದೀರಾ, ನನಗೂ ಫೋಟೋ ಬೇಕು'' ಎಂದು ಡಿಮ್ಯಾಂಡ್ ಮಾಡಿದ್ದಾರೆ.

  ದರ್ಶನ್ ಅವರು ಮೈಸೂರಿನಲ್ಲಿ ಇಲ್ಲ ಎಂದು ಯುವಕರು ಹೇಳಿದರೂ, ಪರವಾಗಿಲ್ಲ ಬೆಂಗಳೂರಿಗೆ ಹೋಗೋಣ, ಕರ್ಕೊಂಡು ಹೋಗಿ ಎಂದು ಹಠ ಮಾಡಿದ್ದಾರೆ.

  ''ಬೆಂಗಳೂರಿಗೆ ಬಿಡಲ್ಲ, ಕೊರೊನಾ ಟೆಸ್ಟ್ ಮಾಡಿಸಿಬೇಕು ಎಂದು ಯುವಕರು ಅಜ್ಜಿಗೆ ಹೇಳಿದರು, ಸರಿ ಟೆಸ್ಟ್ ಮಾಡಿಸಿಕೊಂಡೇ ಹೋಗೋಣ, ಬಾಡಿಗೆ ಕಾರು ಮಾಡ್ತೀನಿ, ಕಾಸ್ ಇಲ್ಲ ಅಂದ್ರೆ ನನ್ನೊಂದು ಓಲೆ ಅಡಮಾನ ಇಟ್ಟು ಹೋಗೋಣ. ದರ್ಶನ್ ಅವರನ್ನು ನೋಡಲೇಬೇಕು'' ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

  ರೈತರ ಬಗ್ಗೆ ದರ್ಶನ್‌ಗಿರುವ ಕಾಳಜಿ ಕುರಿತು ಪವನ್ ಒಡೆಯರ್ ಮಾತು

  ಅಜ್ಜಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿ ಬಾಸ್ ಭಕ್ತರು ಅಜ್ಜಿಯ ಅಭಿಮಾನವನ್ನು ಕಂಡು ಖುಷ್ ಆಗಿದ್ದಾರೆ. ಅಜ್ಜಿಯ ಆಸೆ ಬೇಗ ನೆರವೇರಲಿ ಎಂದೆಲ್ಲ ಹೇಳುತ್ತಿದ್ದಾರೆ.

  English summary
  Watch Video: Old Woman Fan wants to Meet Challenging Star Darshan. This video is viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X