For Quick Alerts
  ALLOW NOTIFICATIONS  
  For Daily Alerts

  ಮನೆ ಖಾಲಿ ಮಾಡಿ, ಬೆಂಗಳೂರು ಬಿಟ್ಟ ಒಳ್ಳೆಹುಡುಗ ಪ್ರಥಮ್

  |

  ಒಳ್ಳೆ ಹುಡುಗ ಪ್ರಥಮ್ ಯಾಕೊ ಏನೋ ರಾತ್ರೊ-ರಾತ್ರಿ ಬೆಂಗಳೂರಿನ ಬಾಡಿಗೆ ಮನೆ ಖಾಲಿ ಮಾಡಿದ್ದಾರೆ.

  ಹೌದು, ಬೆಂಗಳೂರಲ್ಲಿ ಪ್ರಥಮ್ ವಾಸವಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಊರಿಗೆ ತೆರಳಿದ್ದಾರೆ ಪ್ರಥಮ್.

  ಬೆಂಗಳೂರು ಬಿಟ್ಟು ಹೋಗುತ್ತಿರುವ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಾಕಿರುವ ಪ್ರಥಮ್, 'ಮೂರು ವರ್ಷ ವಾಸವಿದ್ದ ಬೆಂಗಳೂರಿನ ಮನೆಯಲ್ಲಿ ಖಾಲಿ ಮಾಡುತ್ತಿದ್ದೇನೆ, ಬೆಂಗಳೂರು ಬಿಟ್ಟು ಹೋಗುವಾಗ ಬೇಸರವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಬಾಡಿಗೆ ಮನೆ ಖಾಲಿ ಮಾಡುತ್ತಿರುವ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ ಪ್ರಥಮ್.

  ನಟಭಯಂಕರ ಸಿನಿಮಾದ ಉಳಿಕೆ ಕೆಲಸಗಳು ಕಚೇರಿಯಲ್ಲಿಯೇ ನಡೆಯಲಿವೆ, ನಾನು ಆಗಾಗ್ಗೆ ಮಾತ್ರವೇ ಬೆಂಗಳೂರಿಗೆ ಬಂದು ಹೋಗುತ್ತಿರುತ್ತೇನೆ ಎಂದು ಹೇಳಿದ್ದಾರೆ ಪ್ರಥಮ್. ಒಳ್ಳೆ ಹುಡುಗ ಪ್ರಥಮ್ ಶಾಶ್ವತವಾಗಿ ತಮ್ಮ ಊರಿನಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ.

  ಗುರುತು ಕೊಟ್ಟ ಊರು ಬೆಂಗಳೂರು: ಪ್ರಥಮ್

  ಗುರುತು ಕೊಟ್ಟ ಊರು ಬೆಂಗಳೂರು: ಪ್ರಥಮ್

  ಬೆಂಗಳೂರು ತಮಗೆ ಗುರುತು ಕೊಟ್ಟ ಊರು, ಇದನ್ನು ಬಿಟ್ಟು ಹೋಗಲು ಬೇಸರವಾಗುತ್ತಿದೆ ಎಂದಿರುವ ಪ್ರಥಮ್, 'ಬಿಗ್‌ಬಾಸ್ ಮನೆ ಬಿಟ್ಟು ಬರುವಾಗಲೂ ನನಗೆ ಹೀಗೆಯೇ ಆಗಿತ್ತು' ಎಂದಿದ್ದಾರೆ. ವ್ಯಕ್ತಿಗಳಿಗಿಂತಲೂ ವಸ್ತುಗಳೊಂದಿಗೆ ನಾನು ಹೆಚ್ಚು ಆತ್ಮೀಯತೆ ಬೆಳೆಸಿಕೊಳ್ಳುತ್ತೇನೆ ಎಂದಿದ್ದಾರೆ ಪ್ರಥಮ್.

  ಬಾಡಿಗೆ ಮನೆ ಮಾತ್ರ ಖಾಲಿ ಮಾಡಿದ್ದಾರೆ

  ಬಾಡಿಗೆ ಮನೆ ಮಾತ್ರ ಖಾಲಿ ಮಾಡಿದ್ದಾರೆ

  ಹೊಸ ಸಿನಿಮಾದ ಕೆಲಸ ನಡೆಯುತ್ತಿದೆ, ಕೆಲವೇ ದಿನಗಳಲ್ಲಿ ಸಂತಸದ ಸುದ್ದಿಯೊಂದಿಗೆ ವಾಪಸ್ ಬರುತ್ತೇನೆ ಎಂದಿದ್ದಾರೆ ಪ್ರಥಮ್. ಸದ್ಯಕ್ಕೆ ಕಚೇರಿ ಇನ್ನೂ ಬೆಂಗಳೂರಿನಲ್ಲಿಯೇ, ಸದ್ಯಕ್ಕೆ ಬಾಡಿಗೆ ಮನೆ ಮಾತ್ರ ಖಾಲಿ ಮಾಡಿದ್ದೇನೆ ಎಂದಿದ್ದಾರೆ ಪ್ರಥಮ್.

  ಸ್ವಂತ ಊರಲ್ಲಿ ಕೃಷಿ ಮಾಡಲಿದ್ದಾರೆ ಪ್ರಥಮ್?

  ಸ್ವಂತ ಊರಲ್ಲಿ ಕೃಷಿ ಮಾಡಲಿದ್ದಾರೆ ಪ್ರಥಮ್?

  ಸ್ವಂತ ಊರಲ್ಲಿ ಕೃಷಿ ಜಮೀನು ಹೊಂದಿರುವ ಪ್ರಥಮ್ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಕುರಿ ಸಾಕಣೆ, ಹಸು ಸಾಕಣೆ ಸಹ ಮಾಡುತ್ತಾರೆ. ಈ ಹಿಂದೆ ಲಾಕ್‌ಡೌನ್ ಸಮಯದಲ್ಲಿ ಸ್ವಂತ ಊರಲ್ಲಿ ಕುರಿ ಮೇಯಿಸಿ ದಿನಗಳೆದಿದ್ದರು.

  ನಟ ಭಯಂಕರ ಸಿನಿಮಾ ಬಿಡುಗಡೆ ಆಗಬೇಕಿದೆ

  ನಟ ಭಯಂಕರ ಸಿನಿಮಾ ಬಿಡುಗಡೆ ಆಗಬೇಕಿದೆ

  ಬಿಗ್‌ಬಾಸ್ ವಿಜೇತ ಪ್ರಥಮ್, ಬಿಗ್‌ಬಾಸ್ ಸ್ಪರ್ಧೆಯಿಂದಾಗಿ ಭಾರಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದರು. ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾ ಬಿಡುಗಡೆ ಆಗಬೇಕಿದೆ. ಈ ಹಿಂದೆ ಎಂಎಲ್‌ಎ ಮತ್ತು ದೇವರಂಥಾ ಮನುಷ್ಯ ಸಿನಿಮಾಗಳಲ್ಲಿ ಪ್ರಥಮ್ ನಟಿಸಿದ್ದಾರೆ.

  English summary
  Olle Hudga Pratham vacate his room in Bengaluru and said he going to his village leaving Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X