For Quick Alerts
  ALLOW NOTIFICATIONS  
  For Daily Alerts

  ಸತೀಶ್ ಜಾರಕಿಹೊಳಿಯ ಗ್ರಹಚಾರ ಬಿಡಿಸ್ತೀನಿ ಎಂದ ಒಳ್ಳೆ ಹುಡ್ಗ ಪ್ರಥಮ್

  By ಫಿಲ್ಮಿಬೀಟ್ ಡೆಸ್ಕ್
  |

  ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ 'ಹಿಂದೂ' ಪದದ ಬಗ್ಗೆ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿವೆ. ಸತೀಶ್ ಜಾರಕಿಹೊಳಿ ಹೇಳಿಕೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.

  ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಪದಕ್ಕೆ ಅಶ್ಲೀಲ ಅರ್ಥವಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು. ಹಲವರು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ್ದಾರೆ. ಕಾಂಗ್ರೆಸ್‌ನ ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಸತೀಶ್ ಹೇಳಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸತೀಶ್ ಅವರಿಂದ ಸ್ಪಷ್ಟನೆ ಪಡೆಯುತ್ತೇವೆ ಎಂದಿದ್ದಾರೆ. ಇನ್ನು ಮುಖ್ಯಮಂತ್ರಿಯಾದಿಯಾಗಿ ಬಿಜೆಪಿಯ ನಾಯಕರು ಸತೀಶ್‌ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕೆಲವು ಸಿನಿಮಾ ನಟ-ನಟಿಯರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನಟ ಚೇತನ್ ಅಹಿಂಸ, ನಟ ಒಳ್ಳೆ ಹುಡ್ಗ ಪ್ರಥಮ್, ನಟಿ ಮಾಳವಿಕಾ ಅವಿನಾಶ್ ಇನ್ನೂ ಕೆಲವರು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದರಲ್ಲಿ ಪ್ರಥಮ್ ನೀಡಿರುವ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.

  ಸತೀಶ್ ಜಾರಕಿಹೊಳಿಯ ಗ್ರಹಚಾರ ಬಿಡಿಸ್ತೀನಿ ಎಂದ ಪ್ರಥಮ್

  ಸತೀಶ್ ಜಾರಕಿಹೊಳಿಯ ಗ್ರಹಚಾರ ಬಿಡಿಸ್ತೀನಿ ಎಂದ ಪ್ರಥಮ್

  ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ ಎರಡರಲ್ಲೂ ಸತೀಶ್‌ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಥಮ್, ''ಇದೆಲ್ಲಾ ನೋಡಿಕೊಂಡು ಸುಮ್ಮನಿರೋಕಾಗಲ್ಲ, ನನ್ನ ಸಿ‌ನಿಮಾ ಸೋತರೂ ನಾನೊಬ್ಬ ಭಾರತೀಯ, ಹಿಂದು, ಹೆಮ್ಮೆಯ ಕನ್ನಡಿಗ, ನಾಲಿಗೆ ಮೇಲೆ ನಿಗಾ ಇರಲಿ ಸತೀಶ್ ಜಾರಕಿಹೊಳ್ಳಿ, ಯಾವುದಾದ್ರೂ ವೇದಿಕೆ ಕಾರ್ಯಕ್ರಮದಲ್ಲಿ ನನ್ನ ಜೊತೆ ನೇರವಾಗಿ ಸಿಕ್ಕಿ. ನಿಮ್ಗೆ ಗ್ರಹಚಾರ ಬಿಡಿಸಲಿಲ್ಲ ಅಂದ್ರೆ ನೋಡಿ'' ಎಂದು ಆಕ್ರೋಶ ಹೊರಹಾಕಿದ್ದಾರೆ ಪ್ರಥಮ್.

  ರಮೇಶ್ ಜಾರಕಿಹೊಳಿಯ ವಿಡಿಯೋ ನೆನಪಿಸಿದ ಪ್ರಥಮ್!

  ರಮೇಶ್ ಜಾರಕಿಹೊಳಿಯ ವಿಡಿಯೋ ನೆನಪಿಸಿದ ಪ್ರಥಮ್!

  ಇನ್ನು ಟ್ವಿಟ್ಟರ್‌ನಲ್ಲಿ ಸತೀಶ್‌ರ ಸಹೋದರ ರಮೇಶ್ ಜಾರಕಿಹೊಳಿಯ ವಿಡಿಯೋ ಬಗ್ಗೆ ಪ್ರಸ್ತಾಪಿಸಿ ಬರೆದಿರುವ ಪ್ರಥಮ್, ''ಸತೀಶ್ ಜಾರಕಿಹೊಳ್ಳಿ ಅವ್ರೆ, ನೀವು ಹಿಂದು ಅಂದ್ರೆ ಅಶ್ಲೀಲ ಅಂದಿದ್ದೀರಾ ನಾನು ನಿಮ್ಗೆ ಕನ್ನಡದಲ್ಲಿ ತಿಳಿಸಿಕೊಡ್ತೀನಿ, ಅಶ್ಲೀಲ ಅಂದ್ರೆ ಹೋದ ವರ್ಷ CD ಬಂತಲ್ಲ? ಅದೇ ಎಗರಿ ಎಗರಿ ಬೀಳ್ತಿದ್ರಲ್ಲಾ? ಅದು ಅಶ್ಮೀಲ. ಹಿಂದು ಅನ್ನೋದಲ್ಲ. ನನ್ನ ಸಿನಿಮಾ‌ಸೋತರೂ ನಾನು ಹಿಂದು. ಮುಂದಿನ ಬಾರಿ ಲೈಟ್ ಆಫ್ ಮಾಡಿಕೊಂಡು ಎಗರೋಕೆ ಹೇಳಿ ಅಶ್ಲೀಲತೆ ಕಮ್ಮಿ ಆಗುತ್ತೆ ಎಂದು ಬರೆದುಕೊಂಡಿದ್ದಾರೆ ಪ್ರಥಮ್.

  ನಟ ಚೇತನ್ ಅಹಿಂಸ ಹೇಳಿದ್ದೇನು?

  ನಟ ಚೇತನ್ ಅಹಿಂಸ ಹೇಳಿದ್ದೇನು?

  ನಟ ಚೇತನ್ ಅಹಿಂಸ ಸಹ ಸತೀಶ್ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, 'ಶಾಸಕ ಸತೀಶ್ ಜಾರಕಿಹೊಳಿ ಹೇಳಿಕೆಯು ಆರ್ಟಿಕಲ್-19 ರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅನುಗುಣವಾಗಿದೆ. ಪರ್ಷಿಯನ್ ಪದವಾದ 'ಹಿಂದೂ'ವಿನ ಪರ್ಯಾಯ ವ್ಯಾಖ್ಯಾನಗಳ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಚರ್ಚೆಗಳ ಅಗತ್ಯವಿದೆ. ಭವಿಷ್ಯದಲ್ಲಿ ಜಾರಕಿಹೊಳಿ ಅವರು ರಾಜಕೀಯ ಲಾಭಕ್ಕಾಗಿ 'ಹಿಂದೂ' ಕಾಂಗ್ರೆಸ್ ಜೊತೆ ನಿಲ್ಲುವ ಬದಲು ಸಮಾನತಾವಾದಿಗಳಾದ ನಮ್ಮೊಂದಿಗೆ ಮತ್ತು ಸತ್ಯದೊಂದಿಗೆ ನಿಲ್ಲುತ್ತಾರೆ ಎಂದು ಭಾವಹಿಸುತ್ತೇನೆ'' ಎಂದಿದ್ದಾರೆ.

  ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಟೀಕೆ

  ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಟೀಕೆ

  ಇನ್ನು ಬಿಜೆಪಿ ವಕ್ತಾರೆ ಹಾಗೂ ನಟಿಯೂ ಆಗಿರುವ ಮಾಳವಿಕಾ ಅವಿನಾಶ್ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ''ಆಯ್ತು ನಾವು ಸನಾತನ ಧರ್ಮ ಅಂತಾನೇ ಹೇಳ್ತೀವಿ. ಅದರ ವಿಸ್ತಾರದಲ್ಲಿ ನಿಮ್ಮಂಥಹಾ ಚಾರ್ವಾಕರೂ ಸೇರ್ಯಾರೆ'' ಎಂದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ''ಪರ್ಷಿಯಲ್ ಕಲಿಯುವುದರಲ್ಲಿ ಬ್ಯುಸಿ ಇರುವವರಿಗೆ ಈ ದೇಶದ ಹಿಂದೂವಿನ ಧ್ವನಿಯನ್ನು ಆಸಲಿಸಲೆಲ್ಲಿ ಸಮಯ?'' ಎಂದು ಸತೀಶ್ ಜಾರಕಿಹೊಳಿ ಹೆಸರು ಉಲ್ಲೇಖಿಸದೆ ಪ್ರಶ್ನೆ ಮಾಡಿದ್ದಾರೆ.

  English summary
  Actor Olle Hudga Pratham, Chetan Ahimsa, Malavika Avinash reacted to Congress MLA Satish Jarkiholi's comment about word Hindu.
  Wednesday, November 9, 2022, 18:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X