For Quick Alerts
  ALLOW NOTIFICATIONS  
  For Daily Alerts

  ಸಾಲಮನ್ನಾ ವಿಚಾರದ ಬಗ್ಗೆ ಮಾತನಾಡಿದ ಪ್ರಥಮ್

  By Naveen
  |
  ಎಚ್ ಡಿ ಕೆ ರೈತರ ಸಾಲ ಮನ್ನಾ ಮಾಡೇ ಮಾಡ್ತಾರೆ ಅಂದ್ರು ಒಳ್ಳೆ ಹುಡುಗ ಪ್ರಥಮ್ | Oneindia Kannada

  ಮುಖ್ಯಮಂತ್ರಿ ಕುಮಾರ ಸ್ವಾಮಿ ತಾವು ಅಧಿಕಾರ ಸ್ವೀಕಾರ ಮಾಡಿದ 24 ಗಂಟೆಗಳಲ್ಲಿ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅದೇ ದೊಡ್ಡ ಚರ್ಚೆಗೆ ಕಾರಣ ಆಗಿದೆ. ಅಧಿಕಾರ ಸಿಕ್ಕರೂ ಸಾಲಮನ್ನಾ ಮಾಡಿಲ್ಲ ಎಂದು ಅನೇಕರು ತಮ್ಮ ಅಸಮಾಧಾನ ವ್ಯಕ್ತಿ ಪಡಿಸುತ್ತಿದ್ದಾರೆ. ಇದೀಗ ಬಿಗ್ ಬಾಗ್ ಖ್ಯಾತಿಯ ಪ್ರಥಮ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

  'ರಾಂಗ್ ರೂಟ್' ಎಂಬ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಥಮ್ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಮಾತನಾಡಿದ್ದಾರೆ. ''ಕುಮಾರಸ್ವಾಮಿ ಅವರು ಅಧಿಕಾರ ಸ್ವೀಕರಿಸಿ ಒಂದು ವಾರಗಳು ಕಳೆದಿವೆ. ಅವರಿಗೆ ಸ್ವಲ್ಪ ಸಮಯ ಅವಕಾಶ ಕೊಡಿ. ಖಂಡಿತ ಸಾಲಮನ್ನಾ ಮಾಡ್ತಾರೆ. ಎಲ್ಲದಕ್ಕೂ ಸಮಯ ಬೇಕಾಗುತ್ತದೆ.'' ಎಂದು ಪ್ರಥಮ್ ಹೇಳಿದ್ದಾರೆ.

  'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ಹೇಳಿಲ್ಲ : ಕುಮಾರಸ್ವಾಮಿ

  ನಟ ಪ್ರಥಮ್ ಈ ಹಿಂದೆ ಅನೇಕ ಬಾರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಜೊತೆಗೆ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ರಾಷ್ಟ್ರಧ್ಯಕ್ಷ ದೇವಗೌಡರಿಗೆ ಸಹ ಚಿರಪರಿಚಿತರು.

  ಅಂದಹಾಗೆ, ನಿನ್ನೆ ನವ ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಮಾತನಾಡಿರುವ ಕುಮಾರಸ್ವಾಮಿ 'ಸಾಲ ಮನ್ನಾ ಸಾಧ್ಯವಿಲ್ಲ' ಎಂದು ಎಲ್ಲೂ ನಾನು ಹೇಳಿಲ್ಲ, ಹೇಳುವುದೂ ಇಲ್ಲ. ಅದರ ಬಗ್ಗೆ ಬುಧವಾರ ಪೂರ್ಣ ಮಾಹಿತಿ ನೀಡುತ್ತೇನೆ'' ಎಂದು ಹೇಳಿದ್ದಾರೆ.

  English summary
  bigg boss kannada season 5 winner, olle huduga pratham spoke about cm kumaraswamy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X