»   » ತಮಿಳುನಾಡಿಗೆ ಎಚ್ಚರಿಕೆ ನೀಡಿದ 'ಬಿಗ್ ಬಾಸ್' ಪ್ರಥಮ್!

ತಮಿಳುನಾಡಿಗೆ ಎಚ್ಚರಿಕೆ ನೀಡಿದ 'ಬಿಗ್ ಬಾಸ್' ಪ್ರಥಮ್!

Posted By:
Subscribe to Filmibeat Kannada

ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ತಮಿಳು ನಟ ಸತ್ಯರಾಜ್ ಕೊನೆಗೂ ಕನ್ನಡಿಗರಿಗೆ ವಿಷಾದ ವ್ಯಕ್ತಪಡಿಸಿದ್ದರು. ಇದಾದ ಮೇಲೆ, ಈ ವಿವಾದ ಮತ್ತೊಂದು ಹಂತಕ್ಕೆ ತಲುಪಿದ್ದು ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನ ಬ್ಯಾನ್ ಮಾಡಲಾಗಿದೆ.[ಮುಂದುವರೆದ 'ಕಟ್ಟಪ್ಪ'ನ ವಿವಾದ: ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಬ್ಯಾನ್!]

ಇದು ಕನ್ನಡಿಗರನ್ನ ಮತ್ತಷ್ಟು ಆಕ್ರೋಶಗೊಳಿಸಿದ್ದು, ಕಟ್ಟಪ್ಪನ ವಿವಾದ ಎರಡು ರಾಜ್ಯಗಳ ಚಿತ್ರೋಧ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಈ ಬಗ್ಗೆ ಬಿಗ್ ಬಾಸ್ ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅವರು ತಮಿಳುನಾಡಿಗೆ ತನ್ನದೇ ಆದ ಸ್ಟೈಲ್ ನಲ್ಲಿ ಸಂದೇಶ ರವಾನಿಸಿದ್ದಾರೆ. ಮುಂದೆ ಓದಿ.....

ನಮ್ಮ ಬಗ್ಗೆ ಕೆಳಮಟ್ಟದಲ್ಲಿ ಮಾತಾಡಿರೋರಿಗೆ ಪಬ್ಲಿಸಿಟಿ ಬೇಡ!

''ಎಲ್ಲರೂ ಸತ್ಯರಾಜ್ ಅಲಿಯಾಸ್ ಕಟ್ಟಪ್ಪ ವಿವಾದದ ಬಗ್ಗೆ ಯಾಕೆ ಮಾತಾಡ್ತಿಲ್ಲ ಅಂತ ಕೇಳ್ತಾನೆ ಇದಾರೆ. ನಮ್ಮ ಕನ್ನಡ, ಕರ್ನಾಟಕದ ಬಗ್ಗೆ ಬಹಳ ಕೆಳಮಟ್ಟದಲ್ಲಿ ಮಾತಾಡಿರೋರ ಬಗ್ಗೆ ಮಾತಾಡಿ ನಾನ್ಯಾಕೆ ಬಿಟ್ಟಿ ಪಬ್ಲಿಸಿಟಿ ಕೊಡಲಿ ಅವರಿಗೆ?'' - ಪ್ರಥಮ್ [ಕನ್ನಡಿಗರನ್ನ ಉದ್ದೇಶಿಸಿ ಸತ್ಯರಾಜ್ ಮಾಡಿದ ತಮಿಳು ಭಾಷಣದಲ್ಲಿ ಏನಿದೆ.?]

ಕನ್ನಡ ಚಿತ್ರಗಳನ್ನ ನಿ‍ಷೇಧಿಸಿದರೆ ಸಂಬಂಧ ಹಳಸುತ್ತೆ

''ಒಂದು ಮಾತು ನಿಜ.... ಕನ್ನಡ ಚಿತ್ರಗಳನ್ನ ಅಲ್ಲಿ ನಿಷೇಧಿಸಿದರೆ ನಮ್ಮ ಮತ್ತು ತಮಿಳುನಾಡು ಮಧ್ಯದ ಸಂಬಂಧ ಇನ್ನು ಹಳಸುತ್ತದೆ'' - ಪ್ರಥಮ್ [ಕನ್ನಡಿಗರ ಮುಂದೆ ಮಂಡಿಯೂರಿದ ಕಟ್ಟಪ್ಪ: ಸಾ.ರಾ.ಗೋವಿಂದು ಪ್ರತಿಕ್ರಿಯೆ ಏನು.?]

ನಾವೇನು ಪಾಕಿಸ್ತಾನದವರಲ್ಲ

''ನಾವೇನು ಪಾಕಿಸ್ತಾನದವರಲ್ಲ ನಮ್ಮ ಮೇಲೆ ದ್ವೇಷ ಸಾಧಿಸೋಕೆ.... ಇದನ್ನ ಅರ್ಥ ಮಾಡಿಕೊಂಡರೆ ನಿಮ್ಮೆಲ್ಲರಿಗೂ ನನ್ನ ಸಲ್ಯೂಟ್'' - ಪ್ರಥಮ್ [ಕನ್ನಡಿಗರ ಹೋರಾಟಕ್ಕೆ ಸಂದ ಜಯ: ಕಡೆಗೂ ತಲೆಬಾಗಿದ ಕಟ್ಟಪ್ಪ.!]

ತಮಿಳುನಾಡು ಮುಖ್ಯಮಂತ್ರಿಗಳೇ ಗಮನ ಹರಸಿ

''ಈ ಕೂಡಲೇ ತಮಿಳುನಾಡು ಮುಖ್ಯಮಂತ್ರಿಗಳು ಇದರ ಬಗ್ಗೆ ಗಮನ ಹರಿಸಿ ಇನ್ನು ಮುಂದಾಗವ ಅನಾಹುತ ತಪ್ಪಿಸಿ''- ಪ್ರಥಮ್ [ಕನ್ನಡಿಗರನ್ನ ಹೀಯಾಳಿಸುತ್ತಿರುವ ತಮಿಳರು: ಟ್ವಿಟ್ಟರ್ ನಲ್ಲಿ ಘೋರ ಯುದ್ಧ.!]

English summary
Biggboss Winner Olle Huduga Pratham Talk About Tamil Actor Sathyaraj (Kattappa).

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X