»   » ಓಂ ಸಾಯಿ ಪ್ರಕಾಶ್ ಮುಂದಿನ ಚಿತ್ರ ಗರ್ಭದ ಗುಡಿ

ಓಂ ಸಾಯಿ ಪ್ರಕಾಶ್ ಮುಂದಿನ ಚಿತ್ರ ಗರ್ಭದ ಗುಡಿ

Posted By:
Subscribe to Filmibeat Kannada
Om Saiprakash
ಮಹಿಳೆಯರ ಮನಕಲುಕುವ ಸಾಂಸಾರಿಕ ಚಿತ್ರಗಳನ್ನು ನೀಡುತ್ತಲೇ ಬಂದಿರುವ ಓಂ ಸಾಯಿ ಪ್ರಕಾಶ್ ಈ ಬಾರಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಅವರ ನೋಟ ಹೆಣ್ಣು ಭ್ರೂಣ ಹತ್ಯೆ ಕಡೆಗೆ ಹರಿದಿದೆ. ತಮ್ಮ ಹೊಸ ಚಿತ್ರಕ್ಕೆ ಗರ್ಭದ ಗುಡಿ ಎಂದು ನಾಮಕರಣ ಮಾಡಿದ್ದಾರೆ.

ಹೆಣ್ಣು ಭ್ರೂಣಹತ್ಯೆಯ ಬಗೆಗಿನ ಕೂಗು ಮುಗಿಲು ಮುಟ್ಟಿದೆ. ಇನ್ನೊಂದು ಕಡೆ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹ ಒಂದು ಕಾಲಘಟ್ಟದಲ್ಲಿ ಸಾಯಿ ಪ್ರಕಾಶ್ ಗಾರು ಮಹಿಳಾ ಪ್ರಧಾನ ಚಿತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ತಮ್ಮ ಗರ್ಭಗುಡಿ ಚಿತ್ರದಲ್ಲಿ ಮಹತ್ತರ ಸಂದೇಶವೂ ಇರುತ್ತದಂತೆ. ಈಗಾಗಲೆ ಚಿತ್ರೀಕರಣ ಶುರುವಾಗಿದ್ದು ನಟಿ ಚಂದ್ರಿಕಾ ಅವರ ಬಂಗಲೆಯಲ್ಲಿ ಭರದಿಂದ ಚಿತ್ರೀಕರಣ ಸಾಗುತ್ತಿದೆ. ಇಲ್ಲಿ ವಿಶೇಷ ಎಂದರೆ ನಿರ್ಮಾಪಕರಾದ ಬಾವಾಜಿ ಅವರೇ ಕಥೆಯನ್ನು ಹೆಣೆದಿರುವುದು. ಚಿತ್ರಕಥೆ ಮಾತ್ರ ಓಂ ಅವರದು.

ಕೇಶವಚಂದ್ರು ಅವರ ಸಂಭಾಷಣೆ ಚಿತ್ರಕ್ಕಿದ್ದು, ಸಂಗೀತ ವಿಜಯ್ ಶ್ರೀನಿವಾಸ್, ಛಾಯಾಗ್ರಹಣ ಸಿ.ನಾರಾಯಣ. ಅನು ಪ್ರಭಾಕರ್ ಅವರು ಪ್ರಮುಖ ಪಾತ್ರವನ್ನು ಪೋಷಿಸುತ್ತಿದ್ದು ಮೋಹನ್, ರಮೇಶ್ ಭಟ್, ಪದ್ಮಜಾ ರಾವ್, ಗಿರಿಜಾ ಲೋಕೇಶ್, ಟೆನ್ನಿಸ್ ಕೃಷ್ಣ ಮುಂತಾದ ತಾರಾಬಳಗ ಚಿತ್ರದಲ್ಲಿದೆ. (ಏಜೆನ್ಸೀಸ್)

English summary
Kannada sentiment films director Om Saiprakash back to direction. His new film titled as 'Garbada Gudi', is referred to the womb of a woman. Vijay Srinivas is scoring music and C Narayan is cameraman, Keshava Chandru penned dialogues.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada