»   » ಶಿವಣ್ಣನಿಗೆ ರಾಘಣ್ಣನ ಪ್ರೀತಿಯ ಕಾಣಿಕೆ: ಬ್ರೋ ಯು ಆರ್ ಮೈ ಡ್ಯಾಡ್

ಶಿವಣ್ಣನಿಗೆ ರಾಘಣ್ಣನ ಪ್ರೀತಿಯ ಕಾಣಿಕೆ: ಬ್ರೋ ಯು ಆರ್ ಮೈ ಡ್ಯಾಡ್

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭಾನುವಾರ (ಜು 12) ತನ್ನ 53ನೇ ಹುಟ್ಟುಹಬ್ಬವನ್ನು ಎಂದಿನಂತೆ ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ದಿನದ ಹೆಚ್ಚಿನ ಹೊತ್ತು ಕಾಲ ಕಳೆದ ಶಿವಣ್ಣನಿಗೆ, ತಮ್ಮ ರಾಘವೇಂದ್ರ ರಾಜಕುಮಾರ್ ಪ್ರೀತಿಯ ಉಡುಗೊರೆಯೊಂದನ್ನು ನೀಡಿದ್ದಾರೆ.[ರಾಘಣ್ಣನ ಒಲವಿನ ಉಡುಗೊರೆಯ ವಿಡಿಯೋ]

ಅಣ್ಣಾವ್ರ ವಿಧಿವಶವಾದ ನಂತರ ಈ ಹಿಂದೆ ಕೂಡಾ ಶಿವಣ್ಣ ಮತ್ತು ಗೀತಾ ಅತ್ತಿಗೆಯಲ್ಲಿ ನನ್ನ ತಂದೆ ತಾಯಿಯನ್ನು ಕಾಣುತ್ತಿದ್ದೇನೆಂದು ರಾಘಣ್ಣ ಹೇಳಿದ್ದುಂಟು. (ರಾಘಣ್ಣನ ಮಾತು ಕೇಳಿ ಗದ್ಗಿತರಾದ ಶಿವಣ್ಣ)

ಅಣ್ಣನ ಹುಟ್ಟುಹಬ್ಬದ ದಿನದಂದು 'ಬ್ರೋ ಯು ಆರ್ ಮೈ ಡ್ಯಾಡ್' ಎನ್ನುವ ಡಿವಿಡಿಯನ್ನು ಶಿವಣ್ಣ, ಗೀತಾ ಶಿವರಾಜ್ ಕುಮಾರ್ ಸಮ್ಮುಖದಲ್ಲಿ ರಾಘಣ್ಣ ಬಿಡುಗಡೆ ಮಾಡಿ ತನ್ನ ಸಹೋದರ ಪ್ರೇಮವನ್ನು ಮತ್ತೆ ತೋರಿಸಿದ್ದಾರೆ.

ಶಿವಣ್ಣನಿಗೆ ಉಡುಗೊರೆ

ಅಣ್ಣನ ಹುಟ್ಟಿದ ಹಬ್ಬಕ್ಕೆ ತಮ್ಮ ರಾಘವೇಂದ್ರ ರಾಜಕುಮಾರ್ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ. ಶಿವಣ್ಣ ಮತ್ತು ರಾಘಣ್ಣ ಕುಟುಂಬದ ಸದಸ್ಯರ ಸಮ್ಮುಖದಲ್ಲಿ 'ಬ್ರೋ ಯು ಆರ್ ಮೈ ಡ್ಯಾಡ್' ಎನ್ನುವ ಡಿವಿಡಿಯನ್ನು ರಾಘಣ್ಣ, ಶಿವಣ್ಣ ಮತ್ತು ಗೀತಾ ಬಿಡುಗಡೆ ಮಾಡಿದರು.

ಸಿಡಿಯಲ್ಲಿ ಏನಿದೆ?

ಏಳು ನಿಮಿಷಗಳ ಈ ಡಿವಿಡಿಯಲ್ಲಿ ತಮ್ಮಿಬ್ಬರ ನಡುವಿನ ಸಂಬಂಧ, ತಾನು ಶಿವಣ್ಣನಿಗೆ ತಂದೆಯ ಸ್ಥಾನ ಯಾಕೆ ನೀಡುತ್ತಿದ್ದೇನೆ ಎನ್ನುವ ಅಂಶಗಳನ್ನು ಹೊಂದಿದೆ. ಜೊತೆಗೆ ನಮ್ಮಿಬ್ಬರ ಅಪರೂಪದ ಫೋಟೋಗಳೂ ಡಿವಿಡಿಯಲ್ಲಿ ಇದೆ ಎಂದು ರಾಘಣ್ಣ ಹೇಳಿದ್ದಾರೆ.

ವೀಕೆಂಡ್ ವಿತ್ ರಮೇಶ್

ಜೀಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವಣ್ಣ, ಕಾರ್ಯಕ್ರಮದ ಕ್ಲಿಪ್ಪಿಂಗ್ಸ್ ನಲ್ಲಿ ರಾಘಣ್ಣ ಮಾತನಾಡುತ್ತಿದ್ದಾಗ ಭಾವೋದ್ವೇಗಕ್ಕೆ ಒಳಗಾಗಿ ಬಿಕ್ಕಿಬಿಕ್ಕಿ ಅತ್ತಿದ್ದರು.

ಕ್ಲಿಪ್ಪಿಂಗ್ಸ್ ನಲ್ಲಿ

ನಾನು, ಶಿವಣ್ಣ ಮತ್ತು ಅತ್ತಿಗೆಯಲ್ಲಿ ತಂದೆ ತಾಯಿಯನ್ನು ಕಾಣುತ್ತಿದ್ದೇನೆಂದು ರಾಘಣ್ಣ ಕಾರ್ಯಕ್ರಮಕ್ಕೆ ನೀಡಿದ್ದ ಕ್ಲಿಪ್ಪಿಂಗ್ಸ್ ನಲ್ಲಿ ಹೇಳಿದ್ದರು. ಆ ಸಂದರ್ಭದಲ್ಲಿ ತೀವ್ರ ಕಣ್ಣೀರಿಟ್ಟ ಶಿವಣ್ಣ ಅವರನ್ನು ಖುದ್ದು ರಮೇಶ್ ಸಮಾಧಾನ ಪಡಿಸಿದ್ದರು. ರಾಘು ಇತ್ತೀಚೆಗೆ ತುಂಬಾ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದಾನೆಂದು ಶಿವಣ್ಣ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಶಿವಣ್ಣನ Birthdayಗೆ ಸಾವಿರಾರು ಜನ

ಬೆಂಗಳೂರಿನ ನಾಗಾವರದ ಶಿವಣ್ಣನ ಮನೆಗೆ ಶನಿವಾರ ರಾತ್ರಿಯೇ ಅಭಿಮಾನಿಗಳ ದಂಡು ಹರಿದು ಬರಲಾರಂಭಿಸಿತ್ತು. ಬೇರೆ ಬೇರೆ ರೀತಿಯ ಕೇಕ್ ತಂದು ಅಭಿಮಾನಿಗಳು ಸಂಭ್ರಮಿಸಿದರು. ಒಂದು ಹಂತದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

English summary
On his 53rd Birthday, Raghavendra Rajkumar gifted DVD to Hatrick Hero Shivaraj Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada