»   » ದರ್ಶನ್ 'ಸಂಸಾರ ಗಲಾಟೆ'ಯನ್ನು ನಾನು ಸರಿ ಮಾಡುತ್ತೇನೆ: ಅಂಬರೀಶ್

ದರ್ಶನ್ 'ಸಂಸಾರ ಗಲಾಟೆ'ಯನ್ನು ನಾನು ಸರಿ ಮಾಡುತ್ತೇನೆ: ಅಂಬರೀಶ್

Posted By:
Subscribe to Filmibeat Kannada

ಬಾಕ್ಸಾಫೀಸ್ ಸುಲ್ತಾನ ನಟ ದರ್ಶನ್ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿರುವ ವಿಚಾರವನ್ನು ಎಲ್ಲಾ ನ್ಯೂಸ್ ಚಾನಲ್ ನವರು ಒಂದು ಕ್ಷಣ ಬಿಡದೇ ಪ್ರಸಾರ ಮಾಡುತ್ತಿರುವುದನ್ನು ನೀವೇ ನೋಡುತ್ತೀದ್ದೀರಾ.

ಅಂದಹಾಗೆ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರ ನಡುವಿನ ಮನಸ್ತಾಪದ ಬಗ್ಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೊಮ್ಮೆ ಇದೇ ರೀತಿ ಘಟನೆ ನಡೆದಿದ್ದಾಗ ಅವರಿಬ್ಬರ ನಡುವೆ ರಾಜಿ ಸಂಧಾನ ಮಾಡಿದ್ದ ಅಂಬಿ ಅವರು ಈ ಬಾರಿ ಕೂಡ ದರ್ಶನ್ ಅವರನ್ನು ಕೂರಿಸಿಕೊಂಡು ಮಾತನಾಡಲಿದ್ದಾರೆ.[ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ನಟ ದರ್ಶನ್ ಅವರ ವಿರುದ್ಧ ಪತ್ನಿ ವಿಜಯಲಕ್ಷ್ಮಿ ಅವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ದರ್ಶನ್ ಅವರು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹೋಗಬೇಕಿತ್ತು.

ಈ ನಡುವೆ ದರ್ಶನ್ ಅವರಿಗೆ ಪೊಲೀಸರು ಬುಲಾವ್ ಕಳುಹಿಸಿದ್ದರು ಕೂಡ ನಟ ಪೊಲೀಸ್ ಠಾಣೆಗೆ ಹೋಗದೇ, ತಮ್ಮ ಕಾರನ್ನು ಮೈಸೂರಿನತ್ತ ತಿರುಗಿಸಿದ್ದಾರೆ. ಈಗಾಗಲೇ ದರ್ಶನ್ ಅವರು ಮೈಸೂರಿಗೆ ಹೋಗುವ ದಾರಿಯಲ್ಲಿ ಅರ್ಧ ದಾರಿ ಕ್ರಮಿಸಿದ್ದಾರೆ.['ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?]

ಅಷ್ಟಕ್ಕೂ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ವಿಚಾರಣೆಗೆ ತೆರಳದೆ, ಮೈಸೂರಿನತ್ತ ಯಾಕೆ ಪ್ರಯಾಣ ಬೆಳೆಸುತ್ತಿದ್ದಾರೆ, ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಮೀನಾ ತೂಗುದೀಪ್ ಗೆ ಚಿಕಿತ್ಸೆ

ಅಂದಹಾಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಮೀನಾ ತೂಗುದೀಪ್ ಅವರನ್ನು ನೋಡಲು ಬೆಂಗಳೂರಿನಿಂದ ಮೈಸೂರಿನತ್ತ ದರ್ಶನ್ ಅವರು ಪ್ರಯಾಣ ಬೆಳೆಸಿದ್ದರು.[ವಿಜಯಲಕ್ಷ್ಮಿ-ದರ್ಶನ್ ಕೇಸನ್ನು ಕೈಗೆತ್ತಿಕೊಂಡ ಮಹಿಳಾ ಆಯೋಗ]

ಈ ಘಟನೆಯಿಂದ ಹೀಗಾಯಿತೆ?

ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರಿಗೆ ಮಗ-ಸೊಸೆಯ ಸಂಸಾರದ ಗಲಾಟೆಯಿಂದ ಸಡನ್ ಆಗಿ ಆರೋಗ್ಯ ಕೆಟ್ಟಿರಬಹುದೆ?.

ಜ್ವರದಿಂದ ಬಳಲುತ್ತಿರುವ ಮೀನಾ

ಇಲ್ಲ, ಇವರಿಬ್ಬರ 'ಗಲಾಟೆ ಸಂಸಾರ' ದಿಂದ ಅಲ್ಲ ಬದ್ಲಾಗಿ ಕಳೆದ 1 ವಾರದಿಂದ ತೀವ್ರ ಜ್ವರದಿಂದ ಬಳಲುತ್ತಿರುವ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರಿಗೆ ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಬರೀಶ್ ಭೇಟಿ

ದರ್ಶನ್ ಅವರು ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮದ್ಯದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಕರೆ ಮಾಡಿದ್ದಾರೆ ಕರೆಯನ್ನು ಸ್ವೀಕರಿಸಿದ ದರ್ಶನ್ ಅವರು ಅಂಬಿ ಅವರನ್ನು ಮಂಡ್ಯದಲ್ಲಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.

ಮಂಡ್ಯಕ್ಕೆ ಹೋಗಿ ಮೈಸೂರಿಗೆ

ಇನ್ನೇನು ಕೆಲವೇ ಘಂಟೆಗಳಲ್ಲಿ ಮಂಡ್ಯದಲ್ಲಿ ನಟ ಅಂಬರೀಶ್ ಅವರನ್ನು ಭೇಟಿಯಾಗಿ ಮಾತನಾಡಿದ ನಂತರ ದರ್ಶನ್ ಅವರು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಗೆ ತೆರಳಿ ತಮ್ಮ ತಾಯಿಯ ಆರೋಗ್ಯ ವಿಚಾರಿಸಿಕೊಳ್ಳಲಿದ್ದಾರೆ.

ಇನ್ನೆರಡು ದಿನಗಳಲ್ಲಿ ಡಿಸ್ಚಾರ್ಜ್

ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರ ಆರೊಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ಇನ್ನೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ಅಂಬರೀಶ್ ಹೇಳಿಕೆ

'ದರ್ಶನ್ ಜೊತೆ ನಾನು ಫೋನ್ ಮಾಡಿ ಮಾತನಾಡಿದ್ದೇನೆ. ಸ್ವಲ್ಪ ಹೊತ್ತು ಬಿಟ್ಟು ಅವರೇ ಕಾಲ್ ಮಾಡುತ್ತೇನೆ ಎಂದು ಹೇಳಿದ್ದಾರೆ. 2011ರಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬಂದಿದ್ದಾಗ ನಾನೇ ಕೂರಿಸಿ ಮಾತನಾಡಿದ್ದೆ. ಈಗಲೂ ನಾನೇ ರಾಜಿ ಸಂಧಾನ ಮಾಡುತ್ತೇನೆ, ಅವರಿಬ್ಬರ ಸಂಧಾನ ಮಾಡಬೇಕಾಗಿರುವುದು ನನ್ನ ಕರ್ತವ್ಯ' ಎಂದು ಮಂಡ್ಯದಲ್ಲಿ ಅಂಬರೀಶ್ ಅವರು ಹೇಳಿಕೆ ನೀಡಿದ್ದಾರೆ.

ಶೂಟಿಂಗ್ ರದ್ದು ಮಾಡಿ ಮೈಸೂರಿಗೆ ಪ್ರಯಾಣ

ನಟ ದರ್ಶನ್ ಅವರು ಇಂದಿನ ಎಲ್ಲಾ ಶೂಟಿಂಗ್ ಕೆಲಸಗಳನ್ನು ರದ್ದು ಮಾಡಿ ತಮ್ಮಷ್ಟಕ್ಕೆ ತಾವು ಮೈಸೂರಿಗೆ ತಾಯಿಯ ಆರೋಗ್ಯ ವಿಚಾರಿಸಲು ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

ಬೇಸತ್ತ ದರ್ಶನ್

ಇದೀಗ ಬಂದಿರುವ ಸುದ್ದಿಯ ಪ್ರಕಾರ ದರ್ಶನ್ ಅವರು ಮೈಸೂರಿಗೂ ಹೋಗುತ್ತಿಲ್ಲವಂತೆ. ಈ ಗಲಾಟೆಯಿಂದ ಬೇಸತ್ತಿರುವ ದರ್ಶನ್ ಅವರು ಒಂಟಿಯಾಗಿರಲು ಬಯಸಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಡಿಸಿಪಿ ಲೋಕೇಶ್ ಅವರು ಸಂಜೆಯ ಒಳಗಾಗಿ ವಿಚಾರಣೆಗೆ ಹಾಜರಾಗಬೇಕಾಗಿ ದರ್ಶನ್ ಅವರಿಗೆ ಸೂಚಿಸಿದ್ದಾರೆ.

English summary
On his toes Actor Darshan passing through a difficult day. Darshan Planning to meet Actor Ambareesh, later Darshan going to Mysuru to meet his mother Meena Thoogudeepa. She was suffering from Fever and Admitted to JSS hospital
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada