For Quick Alerts
  ALLOW NOTIFICATIONS  
  For Daily Alerts

  ಅಮೃತ ಮಹೋತ್ಸವಕ್ಕೆ ಸರ್ಪ್ರೈಸ್ ಕೊಡಲು ಮುಂದಾದ ಆ್ಯಕ್ಷನ್ ಪ್ರಿನ್ಸ್!

  |

  2022 ಕನ್ನಡ ಚಿತ್ರರಂಗಕ್ಕೆ ಸುವರ್ಣ ಕಾಲ ಅಂತ ನಿಸ್ಸಂದೇಹವಾಗಿ ಹೇಳಬಹುದು. ಕನ್ನಡ ಚಿತ್ರರಂಗಕ್ಕೆ ಸೂಪರ್‌ ಹಿಟ್ ಸಿನಿಮಾಗಳು ಸಿಕ್ಕಿವೆ. ದಕ್ಷಿಣ ಭಾರತದಲ್ಲಿಯೇ ಸ್ಯಾಂಡಲ್‌ವುಡ್‌ ಟಾಪ್ ಲಿಸ್ಟ್‌ನಲ್ಲಿದೆ. ಈ ವರ್ಷದ ಮೊದಲಾರ್ಧ ಕನ್ನಡ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈಗ ದ್ವಿತೀಯಾರ್ಧದಲ್ಲಿಯೂ ಭರ್ಜರಿ ರೆಕಾರ್ಡ್ ಮಾಡುವುದಕ್ಕೆ ಸಿನಿಮಾಗಳು ಸರದಿಯಲ್ಲಿ ನಿಂತಿವೆ.

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಇದೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ನಿರೀಕ್ಷೆಗಳು ಕೊಂಚ ಹೆಚ್ಚಿದೆ. ಯಾಕಂದ್ರೆ, ಈ ವರ್ಷ ಬಿಡುಗಡೆಯಾಗಿರೋ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿವೆ. ಈ ಕಾರಣಕ್ಕೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಕುತೂಹಲ ಗರಿಗೆದರಿದೆ.

  ಧ್ರುವ ಸರ್ಜಾ ಸಿನಿಮಾ 'ಮಾರ್ಟಿನ್' ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಾ? ಅನ್ನೋ ಕುತೂಹಲವಿದೆ. ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವುದಕ್ಕೆ ಸಜ್ಜಾಗಿದ್ದಾರೆ. ಹಾಗಿದ್ದರೆ ಆ ಸರ್ಪ್ರೈಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಮಾರ್ಟಿನ್' ಸರ್ಪ್ರೈಸ್

  'ಮಾರ್ಟಿನ್' ಸರ್ಪ್ರೈಸ್

  ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಎಪಿ ಅರ್ಜುನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಾಳೆ (ಆಗಸ್ಟ್ 15) ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಚಿತ್ರತಂಡ ಅಭಿಮಾನಿಗಳಿಗೆ ಸಪ್ರೈಸ್ ಕೊಡುವುದಕ್ಕೆ ಸಜ್ಜಾಗಿದೆ. ಬೆಳಗ್ಗೆ ಸರಿಸುಮಾರು 10.05ಕ್ಕೆ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿರುವ ಈ ಶುಭ ಸಂದರ್ಭದಲ್ಲಿ ಸಿನಿಮಾ ಪೋಸ್ಟರ್ ರಿಲೀಸ್ ಮಾಡುತ್ತಿದೆ.

  'ಮಾರ್ಟಿನ್' ಪ್ಯಾನ್ ಇಂಡಿಯಾ ಸಿನಿಮಾ

  'ಮಾರ್ಟಿನ್' ಪ್ಯಾನ್ ಇಂಡಿಯಾ ಸಿನಿಮಾ

  ಧ್ರುವ ಸರ್ಜಾ ಸಿನಿಮಾಗಳಲ್ಲಿ ನಟಿಸಿದ್ದು ತೀರಾ ಕಡಿಮೆ. ಸಾಕಷ್ಟು ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ಈ ಹಿಂದೆ ತೆರೆಕಂಡ ಧ್ರುವ ಸಿನಿಮಾಗಳು ಸಾಕಷ್ಟು ತಡವಾಗಿಯೇ ರಿಲೀಸ್ ಆಗಿದ್ದವು. ಆದರೂ, ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ್ದವು. ಈ ಹಿಂದೆ ತೆರೆಕಂಡ 'ಪೊಗರು' ಚಿತ್ರವನ್ನು ಮೂರು ಭಾಷೆಯಲ್ಲಿ ರಿಲೀಸ್ ಮಾಡಿದ್ದರು. ಇದೇ ಮೊದಲ ಬಾರಿಗೆ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ವಿಶೇಷ ಅಂದರೆ, ಧ್ರುವ ನಟಿಸಿದ ಹಿಂದಿನ ಎಲ್ಲಾ ಸಿನಿಮಾಗಳಿಗಿಂತಲೂ ಮೊದಲು 'ಮಾರ್ಟಿನ್' ರಿಲೀಸ್ ಆಗಲಿದೆ.

  28 ದಿನ ಶೂಟಿಂಗ್ ಬಾಕಿ

  28 ದಿನ ಶೂಟಿಂಗ್ ಬಾಕಿ

  'ಮಾರ್ಟಿನ್' ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಕೇವಲ 28 ದಿನಗಳ ಶೂಟಿಂಗ್ ಬಾಕಿ ಉಳಿದಿತ್ತು. ಈ 28 ದಿನಗಳಲ್ಲಿ ಚಿತ್ರತಂಡ 'ಮಾರ್ಟಿನ್' ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೆರೆ ಹಿಡಿಯಲಿದೆ. ಇದು ಮುಗಿದರೆ, ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಂತೆ. ಇನ್ನು ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತೊಡಗಿಸಿಕೊಳ್ಳಲಿದೆ. ಈ ಹಂತ ಮುಗಿದರೆ ಸಿನಿಮಾ ಬಹುತೇಕ ಬಿಡುಗಡೆ ಸಜ್ಜಾದಂತೆಯೇ.

  ಅಜ್ಜಿ ನಿಧನದಿಂದ ಚಿತ್ರೀಕರಣ ಸ್ಥಗಿತ

  ಅಜ್ಜಿ ನಿಧನದಿಂದ ಚಿತ್ರೀಕರಣ ಸ್ಥಗಿತ

  ಧ್ರುವ ಸರ್ಜಾ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಧ್ರುವ ಸರ್ಜಾ ಶೂಟಿಂಗ್‌ಗೆ ಬ್ರೇಕ್ ಹಾಕಿದ್ದರು. ಕೆಲವೇ ದಿನಗಳ ಹಿಂದೆ ಅಜ್ಜಿ ನಿಧನರಾಗಿದ್ದು, ಅಂತ ಸಂದರ್ಭದಲ್ಲಿ ಶೂಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 30ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಪೋಸ್ಟ್ ಮಾಡಲಾಗಿದೆ. ಶೀಘ್ರದಲ್ಲಿಯೇ ಹೊಸ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಿದೆ. ಈ ಕಾರಣಕ್ಕೆ ಧ್ರುವ ಅಭಿಮಾನಿಗಳಿಗೆ ಸಿನಿಮಾ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಲಿದೆ.

  English summary
  On Independence Day Dhruva Sarja Starrer Martin Poster Releasing, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X