»   » ಇದೇ ಶುಕ್ರವಾರ ತೆರೆಗೆ ಬರಲಿದೆ 'ಒನ್ಸ್ ಮೋರ್ ಕೌರವ' ಸಿನಿಮಾ

ಇದೇ ಶುಕ್ರವಾರ ತೆರೆಗೆ ಬರಲಿದೆ 'ಒನ್ಸ್ ಮೋರ್ ಕೌರವ' ಸಿನಿಮಾ

Posted By:
Subscribe to Filmibeat Kannada

ಇಷ್ಟು ದಿನ ಗಾಂಧಿನಗರದಲ್ಲಿ ಟೈಟಲ್ ಮೂಲಕ ಕುತೂಹಲ ಹುಟ್ಟಿಸಿರುವ 'ಒನ್ಸ್ ಮೋರ್ ಕೌರವ' ಸಿನಿಮಾ ಇದೇ ವಾರ ತೆರೆಗೆ ಬರಲಿದೆ. ಬಿ.ಸಿ.ಪಾಟೀಲ್ ನಟನೆಯ 'ಕೌರವ' ಸಿನಿಮಾ ಬಳಿಕ ಈಗ ಮತ್ತೊಬ್ಬ 'ಕೌರವ' ಗಾಂಧಿನಗರಕ್ಕೆ ಬರುವುದಕ್ಕೆ ಸಜ್ಜಾಗಿದ್ದಾನೆ.

ನರೇಶ್ ಗೌಡ ಈ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿದ್ದಾರೆ. ಈ ಹಿಂದೆ 'ಸೋಡಾಬುಡ್ಡಿ' ಚಿತ್ರದಲ್ಲಿ ನಟಿಸಿದ್ದ ಅನೂಷಾ ಸಿನಿಮಾದ ನಾಯಕಿ ಆಗಿದ್ದಾರೆ. ನರೇಶ್ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಯಾರಿಗೂ ಹೆದರದ ಬೋಲ್ಡ್ ಹುಡುಗಿ ಪಾತ್ರ ಅನೂಷಾ ಅವರದ್ದು.

'Once More Kaurava' movie will be releasing on November 3.

ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಒಂದು ಅದ್ಭುತ ಪ್ರೇಮಕಥೆ ಇದ್ದು, ಮೈಸೂರು ಭಾಗದಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆಯಂತೆ. ಚಿತ್ರಕ್ಕೆ ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

'Once More Kaurava' movie will be releasing on November 3.

ಅಂದಹಾಗೆ, ಜಯಣ್ಣ ಫಿಲ್ಮ್ ಚಿತ್ರವನ್ನು ಹಂಚಿಕೆ ಮಾಡಿದೆ. ಆಯುಷ್ ಎಂಟರ್ ಪ್ರೈಸಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ನವೆಂಬರ್ 3ಕ್ಕೆ ಅಂದರೆ ಇದೇ ಶುಕ್ರವಾರ 'ಒನ್ಸ್ ಮೋರ್ ಕೌರವ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

English summary
'Once More Kaurava' movie will be releasing on November 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X