»   » ಮತ್ತೆ ಬಂದ್ರು ಮಹೇಂದರ್ : ಅಂದು ಆ ಕೌರವ, ಇಂದು ಈ ಕೌರವ

ಮತ್ತೆ ಬಂದ್ರು ಮಹೇಂದರ್ : ಅಂದು ಆ ಕೌರವ, ಇಂದು ಈ ಕೌರವ

Posted By:
Subscribe to Filmibeat Kannada
ಒನ್ಸ್ ಮೋರ್ ಕೌರವ ಚಿತ್ರ ತಂಡದೊಂದಿಗೆ ಮಾತುಕತೆ | Filmibeat Kannada

'ಒನ್ಸ್ ಮೋರ್ ಕೌರವ' ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರ್ ನೋಡಿದವರಿಗೆ ಒಂದು ಕ್ಷಣ ಆ ಕೌರವ ನೆನಪಾಗುತ್ತಾನೆ.

'ಒನ್ಸ್ ಮೋರ್ ಕೌರವ' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಾಜ್ಯಾದಂತ್ಯ ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕು ಅಂದರೆ ಇದು ಪಕ್ಕಾ ಮಹೇಂದರ್ ಸ್ಟೈಲ್ ಸಿನಿಮಾ. 6 ವರ್ಷದ ನಂತರ ಮತ್ತೆ ಮಹೇಂದರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಹಳೆಯ ಚಿತ್ರಗಳನ್ನು ನೋಡಿ ಇಷ್ಟಪಟ್ಟವರಿಗೆ ಈ ಚಿತ್ರ ಕೂಡ ಇಷ್ಟ ಆಗಲಿದೆಯಂತೆ.

'Once More Kaurava' movie will be releasing tomorrow

ಇನ್ನು ಈ ಚಿತ್ರದ ನಾಯಕನಾಗಿ ನರೇಶ್ ಗೌಡ ಕಾಣಿಸಿಕೊಂಡಿದ್ದಾರೆ. ನರೇಶ್ ಅವರ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ಅವರೇ ನಿರ್ಮಾಪಕರು ಕೂಡ. ಇನ್ನು ನರೇಶ್ ಗೆ ಜೋಡಿಯಾಗಿ ಅನುಷಾ ಕಾಣಿಸಿಕೊಂಡಿದ್ದಾರೆ. 'ಸೋಡಾಬುಡ್ಡಿ' ಬಳಿಕ ಅನುಷಾ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಅನುಷಾ ಇಲ್ಲಿ ಖಡಕ್ ಹುಡುಗಿ ಆಗಿದ್ದಾರೆ.

ಅಂದಹಾಗೆ, 'ಒನ್ಸ್ ಮೋರ್ ಕೌರವ' ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ನಿಮ್ಮ 'ಫಿಲ್ಮ್ ಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದೆ.

English summary
'Once More Kaurava' movie will be releasing tomorrow (November 3).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X