»   » ಇಂದು ಸಂಜೆ 5 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ 'ಒನ್ಸ್ ಮೋರ್ ಕೌರವ' ತಂಡ

ಇಂದು ಸಂಜೆ 5 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ 'ಒನ್ಸ್ ಮೋರ್ ಕೌರವ' ತಂಡ

Posted By:
Subscribe to Filmibeat Kannada

'ಒನ್ಸ್ ಮೋರ್ ಕೌರವ' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ಈ ವಿಶೇಷವಾಗಿ ಚಿತ್ರತಂಡ ಇಂದು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಮೂಲಕ ಮಾಹಿತಿ ನೀಡಲಿದೆ.

ಕನ್ನಡದ ಖ್ಯಾತ ನಿರ್ದೇಶಕ ಎಸ್.ಮಹೇಂದರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನರೇಶ್ ಈ ಚಿತ್ರದ ನಾಯಕರಾಗಿದ್ದು, ಆಯುಷ್ ಎಂಟರ್ ಪ್ರೈಸಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಎಲ್ಲರ ಗಮನ ಸೆಳೆದಿದೆ. ಟ್ರೇಲರ್ ಎಲ್ಲ ರೀತಿಯ ಕಮರ್ಶಿಯಲ್ ಅಂಶಗಳನ್ನು ಹೊಂದಿದೆ. ಜೊತೆಗೆ ಹಳ್ಳಿಯ ಸೊಗಡು ಚಿತ್ರದಲ್ಲಿದೆ.

'Once More Kaurava' will be releasing on November 3

ಚಿತ್ರದಲ್ಲಿ ನಟ ದೇವರಾಜ್ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಹಿಂದೆ 'ಸೋಡಾಬುಡ್ಡಿ' ಚಿತ್ರದಲ್ಲಿ ನಟಿಸಿದ್ದ ಅನೂಷಾ ಸಿನಿಮಾದ ನಾಯಕಿ ಆಗಿದ್ದಾರೆ. ನರೇಶ್ ಪೊಲೀಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಯಾರಿಗೂ ಹೆದರದ ಬೋಲ್ಡ್ ಹುಡುಗಿ ಪಾತ್ರ ಅನೂಷಾ ಅವರದ್ದು. ಚಿತ್ರಕ್ಕೆ ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದಾರೆ.

'Once More Kaurava' will be releasing on November 3

ಅಂದಹಾಗೆ, ಜಯಣ್ಣ ಫಿಲ್ಮ್ ಚಿತ್ರವನ್ನು ಹಂಚಿಕೆ ಮಾಡಿದೆ. ನವೆಂಬರ್ 3ಕ್ಕೆ ಅಂದರೆ ಇದೇ ಶುಕ್ರವಾರ 'ಒನ್ಸ್ ಮೋರ್ ಕೌರವ' ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

English summary
'Once More Kaurava' movie will be releasing on November 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X