ವಿದೇಶಗಳಲ್ಲಿ ಸಂಚರಿಸಲಿದೆ 'ಒಂದು ಮೊಟ್ಟೆಯ ಕಥೆ'

By Bharath Kumar

ರಾಜ್ ಬಿ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಬಿಡುಗಡೆಯಾಗಿರುವ ಎಲ್ಲ ಚಿತ್ರಮಂದಿಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗೆ ಕರ್ನಾಟಕದಲ್ಲಿ ಕಮಾಲ್ ಮಾಡುತ್ತಿರುವ 'ಒಂದು ಮೊಟ್ಟೆಯ ಕಥೆ' ಈಗ ವಿದೇಶಗಳಲ್ಲಿ ಸಂಚರಿಸಲಿದೆ.

ಪವನ್ ಕುಮಾರ್ ನಿರ್ಮಾಣದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಜರ್ಮನಿಯಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದು, ಜುಲೈ 15ರಂದು ಜರ್ಮನಿಯ ಲಿವರ್ಕುಸೆನ್ ನಲ್ಲಿ ಸಿನಿಮಾ ತೆರೆಕಾಣುತ್ತಿದೆ. ನಂತರ ಫ್ರಾಂಕ್‍ಫರ್ಟ್, ಮ್ಯೂನಿಚ್, ಬರ್ಲಿನ್, ಹ್ಯಾಂಬರ್ಗ್ ಮುಂತಾದ ಕಡೆ ಬಿಡುಗಡೆಯಾಗಿ ಪ್ರದರ್ಶನ ಕಾಣಲಿದೆ. ಆಗಸ್ಟ್‌ನಲ್ಲಿ ಗಾಲ್ಫ್‌ ನಲ್ಲೂ ಕೂಡ 'ಒಂದು ಮೊಟ್ಟೆಯ ಕಥೆ' ಬಿಡುಗಡೆಯಾಗಲಿದೆ.

Ondu Motteya Kathe Movie Will Releasing in Germany

ಅಂದ್ಹಾಗೆ, ಒಂದು ಮೊಟ್ಟೆಯ ಕಥೆ' ಚಿತ್ರ ಈ ಮೊದಲೇ ಹೊರದೇಶಗಳಲ್ಲಿ ಪ್ರಿಮಿಯರ್ ಶೋ ಕಂಡಿದೆ. ನ್ಯೂಯಾರ್ಕ್ ಚಿತ್ರೋತ್ಸವ, ಅಮೆರಿಕಾ ಚಿತ್ರೋತ್ಸವ ಮತ್ತು ಲಂಡನ್ ಚಿತ್ರೋತ್ಸವಗಳಲ್ಲಿ ಒಂದು ಮೊಟ್ಟೆಯ ಕಥೆ' ಪ್ರದರ್ಶನವಾಗಿದ್ದು ಪ್ರಶಂಸೆ ಪಡೆದುಕೊಂಡಿತ್ತು.

ರಾಜ್.ಬಿ.ಶೆಟ್ಟಿ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಉಷಾ ಭಂಡಾರಿ, ಶೈಲಶ್ರೀ, ಅಮೃತಾ ನಾಯಕ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮಿಥುನ್ ಮುಕುಂದನ್ ಅವರ ಸಂಗೀತ ನಿರ್ದೇಶನ, ಪ್ರವೀಣ್ ಶ್ರಿಯಾನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

More from Filmibeat

English summary
Raj B Shetty Starrer and Directional 'Ondu Motteya Kathe' Movie Will Releasing in Germany on July 15th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X