For Quick Alerts
  ALLOW NOTIFICATIONS  
  For Daily Alerts

  ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು

  |
  Yajamana Movie: ರಿಲೀಸ್ ಆದ 7 ನಿಮಿಷದಲ್ಲಿ ದಾಖಲೆ ಬರೆದ 'ಯಜಮಾನ' ಎರಡನೇ ಹಾಡು | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಹಾಡುಗಳ ಹಬ್ಬ ಶುರುವಾಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದ್ದ ಶಿವನಂದಿ ಹಾಡು ಸತತ ಮೂರು ದಿನ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು.

  ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಪಡೆದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿತು. ಈ ಹಾಡಿನ ಗುಂಗಲ್ಲೇ ಇರೋವಾಗಲೇ ಈಗ ಯಜಮಾನ ಚಿತ್ರದ ಎರಡನೇ ಹಾಡು ಬಂದಿದ್ದು, ಇದು ಇನ್ನು ವೇಗವಾಗಿ ದಾಖಲೆ ಮಾಡ್ತಿದೆ.

  ಮೊದಲ ಹಾಡಿನ ಯಶಸ್ಸಿನ ಬಳಿಕ 'ಯಜಮಾನ' ಎರಡನೇ ಹಾಡು ಬರ್ತಿದೆ ಮೊದಲ ಹಾಡಿನ ಯಶಸ್ಸಿನ ಬಳಿಕ 'ಯಜಮಾನ' ಎರಡನೇ ಹಾಡು ಬರ್ತಿದೆ

  ''ಒಂದು ಮುಂಜಾನೆ ಹಂಗೆ ಸುಮ್ಮನೆ ನಾವು ಹೋಗೋಣ ಬಾರೇ....'' ಎಂಬ ಸಾಲುಗಳಿಂದ ಶುರುವಾಗು ರೋಮ್ಯಾಂಟಿಕ್ ಹಾಡು ಈಗ ಡಿ-ಬಾಸ್ ಭಕ್ತರ ಹೃದಯ ಕದ್ದಿದೆ. ವಿಶೇಷ ಅಂದ್ರೆ ಈ ಹಾಡು ಕೇವಲ 7 ನಿಮಿಷದಲ್ಲೇ ಇತಿಹಾಸ ನಿರ್ಮಿಸಿದೆ. ಏನಪ್ಪಾ ಅದು? ಮುಂದೆ ಓದಿ......

  7 ನಿಮಿಷದಲ್ಲಿ 100k

  7 ನಿಮಿಷದಲ್ಲಿ 100k

  ಯಜಮಾನ ಚಿತ್ರದ ಎರಡನೇ ಹಾಡು 'ಒಂದು ಮುಂಜಾನೆ....' ಹಳೆ ದಾಖಲೆಗಳನ್ನ ಅಳಿಸಿಹಾಕಿ ಹೊಸ ದಾಖಲೆ ನಿರ್ಮಿಸಿದೆ. ಈ ಹಾಡು ಯೂಟ್ಯೂಬ್ ನಲ್ಲಿ ತೆರೆಕಂಡ ಕೇವಲ 7 ನಿಮಿಷದಲ್ಲೇ 100K (1 ಲಕ್ಷ) ವೀಕ್ಷಣೆಯಾಗಿದೆ.

  'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ 'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ

  43 ನಿಮಿಷದಲ್ಲಿ 300K

  43 ನಿಮಿಷದಲ್ಲಿ 300K

  ಮೊದಲ ಏಳು ನಿಮಿಷದಲ್ಲಿ ಒಂದು ಲಕ್ಷ ವೀಕ್ಷಣೆ ಪಡೆದ ಯಜಮಾನ ಹಾಡು, 43 ನಿಮಿಷದಲ್ಲಿ 3 ಲಕ್ಷ (300k) ವೀಕ್ಷಣೆಯಾಗಿದೆ. ಅತಿ ವೇಗವಾಗಿ 1 ಲಕ್ಷ, 2 ಲಕ್ಷ, 3 ಲಕ್ಷ ವೀಕ್ಷಣೆ ಹೊಂದಿದ ಹಾಡು ಎಂಬ ಹೆಗ್ಗಳಿಕೆಗೆ 'ಒಂದು ಮುಂಜಾನೆ....' ಹಾಡು ಪಾತ್ರವಾಗಿದೆ.

  'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ 'ಯಜಮಾನ'ನ ಯಶಸ್ಸನ್ನು ಆಚರಿಸಿದ 'ಭರಾಟೆ' ತಂಡ

  5 ಮಿಲಿಯನ್ 'ಶಿವನಂದಿ'

  5 ಮಿಲಿಯನ್ 'ಶಿವನಂದಿ'

  ಇನ್ನು ಯಜಮಾನ ಚಿತ್ರದ ಮೊದಲ ಹಾಡು 'ಶಿವನಂದಿ' ನಾಲ್ಕು ದಿನಗಳಲ್ಲಿ 5 ಮಿಲಿಯನ್ ವೀವ್ಸ್ ಪಡೆದು ಅಬ್ಬರಿಸಿದೆ. ಸತತ ಮೂರು ದಿನ ಟ್ರೆಂಡಿಂಗ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದ ಶಿವನಂದಿ ಹಾಡು ಐದನೇ ದಿನ ಮೂರನೇ ಸ್ಥಾನಕ್ಕೆ ಜಾರಿದೆ.

  'ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ! 'ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ!

  ಧನ್ಯವಾದ ಹೇಳಿದ ದರ್ಶನ್

  ಧನ್ಯವಾದ ಹೇಳಿದ ದರ್ಶನ್

  ಯಜಮಾನ ಚಿತ್ರದ ಮೊದಲ ಹಾಡು ಸೂಪರ್ ಹಿಟ್ ಮಾಡಿದ್ದಕ್ಕೆ ನಟ ದರ್ಶನ್ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಎರಡನೇ ಹಾಡನ್ನ ಶೇರ್ ಮಾಡಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.

  English summary
  Kannada actor Darshan's 'Yajamana' movie second song ''ondu munjane'' has releasing today february 19th. The movie is producing by Shailaja Nag. P.Kumar and V Harikrishana directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X