For Quick Alerts
  ALLOW NOTIFICATIONS  
  For Daily Alerts

  ಶರಣ್ ಚಿತ್ರಕ್ಕೆ ಮತ್ತೆ ನಂದಕಿಶೋರ್ ಆಕ್ಷನ್ ಕಟ್

  By Rajendra
  |

  'ವಿಕ್ಟರಿ' ಚಿತ್ರದ ಮೂಲಕ ಗೆಲುವಿನ ಸವಾರಿ ಹೊರಟ ಕಾಮಿಡಿ ಹೀರೋ ಶರಣ್ ಈಗ ಮತ್ತೊಂದು ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. 'ವಿಕ್ಟರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ಈ ಬಾರಿಯೂ ಶರಣ್ ಕೈಜೋಡಿಸುತ್ತಿದ್ದಾರೆ.

  ಇದು ತಮಿಳಿನ 'ವರುಥಪದಥ ವಾಲಿಬಾರ್ ಸಂಗಂ' ರೀಮೇಕ್. ನಿರ್ಮಾಪಕರನ್ನು ಹೊರತುಪಡಿಸಿದರೆ ಬಹುತೇಕ ಕಲಾವಿದರು, ತಂತ್ರಜ್ಞರು ವಿಕ್ಟರಿ ಬಳಗದವರೇ ಇಲ್ಲೂ ಇರುತ್ತಾರೆ ಎಂದಿದ್ದಾರೆ ನಂದಕಿಶೋರ್. [ವಿಕ್ಟರಿ ಚಿತ್ರ ವಿಮರ್ಶೆ]

  ಕನ್ನಡ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಈ ಚಿತ್ರವನ್ನು ನಿರ್ಮಿಸುತ್ತಿರುವವರು ಗಂಗಾಧರ್. ತಮಿಳಿನ 'ವಾಲಿ ಬಾರ್ ಸಂಗಂ' ಚಿತ್ರವನ್ನು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸಲ್ಲಿ ಈ ಚಿತ್ರ ಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿತ್ತು.

  ಈಗ ಅದೇ ರೀತಿಯ ನಿರೀಕ್ಷೆಗಳು ಕನ್ನಡದ 'ವಾಲಿಬಾರ್ ಸಂಗಂ' ಮೇಲಿವೆ. ಕಡಿಮೆ ಬಜೆಟ್ ನಲ್ಲಿ ಭರ್ಜರಿ ಫಸಲು ತೆಗೆಯುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೆ ಶರಣ್ ಪೂರ್ಣಪ್ರಮಾಣದ ನಾಯಕನಾಗಿ 'ರ್‍ಯಾಂಬೋ' ಹಾಗೂ 'ವಿಕ್ಟರಿ' ಮೂಲಕ ಗೆದ್ದಿದ್ದಾರೆ. ಈಗ ಹ್ಯಾಟ್ರಿಕ್ ಹೊಡೆಯುವ ತವಕ ಅವರದು. (ಏಜೆನ್ಸೀಸ್)

  English summary
  Comedy actor Sharan next will be directed by Nanada Kishore, who directed Sharan's latest hit film Victory. This time Sharan picked a remake of Tamil film Varuthapadatha Valibar Sangam.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X