»   » ಓಂ ಪ್ರಕಾಶ್ ರಿಂದ ಕಿಚ್ಚನಿಲ್ಲದ ಮತ್ತೊಂದು ಹುಚ್ಚ

ಓಂ ಪ್ರಕಾಶ್ ರಿಂದ ಕಿಚ್ಚನಿಲ್ಲದ ಮತ್ತೊಂದು ಹುಚ್ಚ

Posted By:
Subscribe to Filmibeat Kannada

ನಟ ಸುದೀಪ್ ವೃತ್ತಿಜೀವನದಲ್ಲಿ ಮಹತ್ತರ ತಿರುವು ನೀಡಿದ ಚಿತ್ರ 'ಹುಚ್ಚ'. ತಮಿಳಿನ ಯಶಸ್ವಿ 'ಸೇತು' ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲಾಗಿತ್ತು. ಭಾರಿ ಬಜೆಟ್ ನಲ್ಲಿ ನಿರ್ಮಿಸಿದ ಚಿತ್ರವಿದು. ಈ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷಗಳೇ ಕಳೆದುಹೋಗಿವೆ.

ಈಗ ಮತ್ತೊಮ್ಮೆ ನಿರ್ದೇಶಕ ಓಂ ಪ್ರಕಾಶ್ ರಾವ್ ಅದೇ ಹೆಸರಿನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ನಾಯಕ ನಟ ಮಾತ್ರ ಹೊಸಬ. ಆದರೆ ಹಳೆ ಹುಚ್ಚ ಚಿತ್ರಕ್ಕೂ ಇದಕ್ಕೂ ಯಾವುದೇ ಬಂಧ ಇರುವುದಿಲ್ಲವಂತೆ. ಆದರೆ ಇದು ತಮಿಳಿನ ಮತ್ತೊಂದು ಚಿತ್ರ 'ರಾಮ್' ರೀಮೇಕ್ ಎನ್ನಲಾಗಿದೆ.

Dhananjay in Huchcha

ಓಂ ಪ್ರಕಾಶ್ ರಾವ್ ಅವರಿಗೆ ಅದ್ಯಾಕೋ ಏನೋ ಹುಚ್ಚ ಚಿತ್ರದ ಶೀರ್ಷಿಕೆ ಮೇಲೆ ಬಹಳ ಸೆಂಟಿಮೆಟ್ ಇದೆಯಂತೆ. ಆ ಚಿತ್ರ ತಮ್ಮ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲು ಎಂಬ ಕಾರಣಕ್ಕೆ ಅವರು ಮತ್ತೆ ಹುಚ್ಚ ಎಂದು ಹೆಸರಿಟ್ಟಿದ್ದಾರಂತೆ.

ಮಠ ಗುರುಪ್ರಸಾದ್ ಅವರ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಹೊಸಬ ಧನಂಜಯ್ ಅವರು ಹುಚ್ಚ ಚಿತ್ರದ ಹೀರೋ. ಪ್ರಾರ್ಥನಾ ಚಿತ್ರದ ನಾಯಕಿ. ಪಾತ್ರವರ್ಗದಲ್ಲಿ ಶ್ರೀನಿವಾಸಮೂರ್ತಿ, ಲೋಕನಾಥ್, ಶಿವರಾಂ, ಸುಮಿತ್ರಾ ಮುಂತಾದವರಿದ್ದಾರೆ.

ಅರ್ಜುನ್ ಜನ್ಯಾ ಸಂಗೀತ ನಿರ್ದೇಶಕರಾಗಿರುವ ಈ ಚಿತ್ರ ಏಪ್ರಿಲ್ 11ರಂದು ಸೆಟ್ಟೇರುತ್ತಿದೆ. ಜಗದೀಶ್ ವಾಲಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಅಂದಹಾಗೆ ಜೀವಾ, ಗಜಾಲಾ, ಕೂನಲ್ ಶಾ ಮುಖ್ಯಭೂಮಿಕೆಯಲ್ಲಿದ್ದ ತಮಿಳಿನ 'ರಾಮ್' (2005) ಚಿತ್ರ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡಿತ್ತು. (ಏಜೆನ್ಸೀಸ್)

English summary
N Om Prakash Rao forthcoming film titled as Huchcha. But this is not a sequel to Sudeep's Huchcha, released in 2001, a decade ago. It is said to be a remake of Tamil film 'Raam' (2005) written and directed by Ameer Sultan.
Please Wait while comments are loading...