»   » ಕೆಜಿ ರಸ್ತೆಯ ಮತ್ತೊಂದು ಥಿಯೇಟರ್ ಇತಿಹಾಸದ ಪುಟಕ್ಕೆ?

ಕೆಜಿ ರಸ್ತೆಯ ಮತ್ತೊಂದು ಥಿಯೇಟರ್ ಇತಿಹಾಸದ ಪುಟಕ್ಕೆ?

Posted By:
Subscribe to Filmibeat Kannada

ಮೈನ್ ಥಿಯೇಟರ್ ಕಾನ್ಸೆಪ್ಟ್ ನಿಂದ ಹೊರ ಬರಬೇಕೋ ಬೇಡವೋ ಎನ್ನುವ ಚರ್ಚೆಗಳ ನಡುವೆ ಕೆ ಜಿ ರಸ್ತೆಯ ಮತ್ತೊಂದು ಚಿತ್ರಮಂದಿರ ಸದ್ದಿಲ್ಲದೇ ಬಾಗಿಲು ಮುಚ್ಚಿತೇ?

ಕನ್ನಡ ಚಿತ್ರಕ್ಕೆಂದೇ ಮೀಸಲಾಗಿದ್ದ ಮೆಜೆಸ್ಟಿಕ್ ಭಾಗದ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ ತ್ರಿವೇಣಿ ಚಿತ್ರಮಂದಿರ ತನ್ನ ಕೊನೆಯ ಪ್ರದರ್ಶನವನ್ನು ಮುಗಿಸಿದೆ ಎನ್ನಲಾಗುತ್ತಿದೆ.

ಬಾಕ್ಸಾಫೀಸಿನಲ್ಲಿ ಮುಗ್ಗರಿಸಿದ ಡಾ.ಶಿವರಾಜ್ ಕುಮಾರ್, ರಮ್ಯಾ ಪ್ರಮುಖ ಭೂಮಿಕೆಯಲ್ಲಿರುವ 'ಆರ್ಯನ್' ಚಿತ್ರದ ಮೂಲಕ ತ್ರಿವೇಣಿ ಚಿತ್ರಮಂದಿರ ಬಾಗಿಲೆಳೆದಿದೆ ಎನ್ನುವುದು ಅನಧಿಕೃತ ಮೂಲಗಳ ಖಚಿತ ಮಾಹಿತಿ.

ಆದರೆ ಚಿತ್ರಮಂದಿರದ ಮಾಲೀಕರ ಮುಚ್ಚುವ ನಿರ್ಧಾರ ಏನಿದೆಯೋ ಅದು ತಾತ್ಕಾಲಿಕವೋ, ಶಾಶ್ವತವೋ, ಆಸ್ತಿ ವಿಚಾರದ ಸಂಬಂಧ ವ್ಯಾಜ್ಯವೋ ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಿಲ್ಲ. (ದರ್ಶನ್, ಕಿಚ್ಚಗೆ ಲಾಯರ್ ನೋಟೀಸ್ ಕೊಟ್ಟಿದ್ದೇಕೆ)

ಕೆಲವು ತಿಂಗಳುಗಳ ಹಿಂದೆ ಈ ಭಾಗದ ಸಾಗರ್ ಚಿತ್ರಮಂದಿರವೂ ಇತಿಹಾಸದ ಪುಟಕ್ಕೆ ಸೇರಿತ್ತು. ಇತ್ತೀಚಿನ ವರ್ಷಗಳಲ್ಲಿ ಮೆಜೆಸ್ಟಿಕ್ ಭಾಗದಲ್ಲಿ ಚಿತ್ರಮಂದಿರಗಳು ಮುಚ್ಚುತ್ತಿರುವುದು ಸಿನಿ ಅಭಿಮಾನಿಗಳಿಗೆ, ನಿರ್ಮಾಪಕರನ್ನು ಚಿಂತೆಗೀಡು ಮಾಡಿದೆ. (ಮತ್ತೊಂದು ಥಿಯೇಟರ್ ಇತಿಹಾಸದ ಪುಟಕ್ಕೆ)

ಆಗಸ್ಟ್ 2014ರವರೆಗೆ ತ್ರಿವೇಣಿ ಚಿತ್ರಮಂದಿರವನ್ನು ಕನ್ನಡದ ಹೆಸರಾಂತ ನಿರ್ಮಾಪಕ, ವಿತರಕ ಕೆಸಿಎನ್ ಕುಮಾರ್ ಗುತ್ತಿಗೆ ಪಡೆದಿದ್ದರು. ಈ ಚಿತ್ರಮಂದಿರ ಮಾರಾಟದ ವಿಚಾರದಲ್ಲಿ ಕುಟುಂಬದಲ್ಲಿ ಹಲವು ಗೊಂದಲಗಳಿದ್ದವು ಎನ್ನುವುದು ಸುದ್ದಿ.

ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಬಹುಭಾಷಾ ನಟ ಕಮಲಹಾಸನ್ ಮತ್ತು ಎಚ್ ಡಿ ಗಂಗರಾಜು ಈ ಚಿತ್ರಮಂದಿರವನ್ನು ಖರೀದಿಸಲು ಮುಂದಾಗಿದ್ದರು ಎಂದು ತಿಂಗಳುಗಳ ಹಿಂದೆ ಸುದ್ದಿಯಾಗಿತ್ತು.

ತ್ರಿವೇಣಿ ಚಿತ್ರಮಂದಿರ ಖರೀದಿಸುವ ಪ್ರಯತ್ನಕ್ಕೆ ಮುಂದಾಗಬಾರದೆಂದು ದಕ್ಷಾ ಗೌಡ ಎನ್ನುವವರು ತಮ್ಮ ಪರ ವಕೀಲರ ಮೂಲಕ ನಾಲ್ವರಿಗೂ ನೋಟೀಸ್ ಜಾರಿ ಮಾಡಿದ್ದರು ಎಂದು ಸುದ್ದಿಯಾಗಿತ್ತು.

ದಕ್ಷಾ ಗೌಡ ಎನ್ನುವವರು ತ್ರಿವೇಣಿ ಚಿತ್ರಮಂದಿರದ ಮಾಲೀಕರ ಮಗಳು. ದಕ್ಷಾ ಗೌಡ ತಂದೆ ಮತ್ತು ತಾಯಿ ಬೇರೆ ಬೇರೆಯಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು.

ಚಿತ್ರಮಂದಿರವನ್ನು ಮಾಲೀಕರ ಸೊಸೆ ಮಾರಾಟ ಮಾಡಲು ಮುಂದಾಗಿದ್ದು ಈ ಸಮಸ್ಯೆ ಉಲ್ಬಣವಾಗಲು ಪ್ರಮುಖ ಕಾರಣ ಎನ್ನಲಾಗುತ್ತಿತ್ತು. ಪಿತ್ರಾರ್ಜಿತ ಆಸ್ತಿ ಇದಾಗಿರುವುದರಿಂದ ನನ್ನ ಅನುಮತಿ ಇಲ್ಲದೇ ಮಾರಾಟ ಪ್ರಕ್ರಿಯೆಗೆ ಮುಂದಾಗಬಾರದು ಎನ್ನುವುದು ದಕ್ಷಾ ಗೌಡ ಅವರ ವಾದವಾಗಿತ್ತು.

ಈ ಆಸ್ತಿಯ ಮೇಲೆ ನಾಲ್ವರಿಗೆ ಹಕ್ಕಿದೆ (ಮಾಲೀಕ, ಮಾಲೀಕರ ಹೆಂಡತಿ, ಮಗಳು, ಸೊಸೆ) ಎಂದು ಚಿತ್ರಮಂದಿರದ ಮಾಲೀಕರ ಮಗಳು ದಕ್ಷಾ ಗೌಡ ತಮ್ಮ ವಕೀಲರ ಮೂಲಕ ದರ್ಶನ್, ಸುದೀಪ್, ಕಮಲಹಾಸನ್ ಮತ್ತು ಗಂಗರಾಜು ಅವರಿಗೆ ನೋಟೀಸ್ ಜಾರಿ ಮಾಡಿದ್ದರು. (ನಂತರ ಅದನ್ನು ನಿರಾಕರಿಸಿದ್ದರು)

One more theater closed screening in Majestic area

ಒಟ್ಟಿನಲ್ಲಿ, ಈ ಎಲ್ಲಾ ಗೊಂದಲಗಳಿಗೆ ಉತ್ತರ ಸಿಗುವ ಮುನ್ನವೇ ಚಿತ್ರಮಂದಿರ ತನ್ನ ಪ್ರದರ್ಶನವನ್ನು ಈಗ ಸ್ಥಗಿತಗೊಳಿಸಿದೆ. ಇದರಿಂದ ಅನಾದಿ ಕಾಲದಿಂದಲೂ ಕನ್ನಡ ಚಿತ್ರೋದ್ಯಮದಲ್ಲಿ ಜಾರಿಯಲ್ಲಿರುವ ಮೈನ್ ಥಿಯೇಟರ್ ಪದ್ದತಿಗೆ ಮತ್ತೊಂದು ಹೊಡೆತ ಬಿದ್ದಿದೆ.

ಶಿವಣ್ಣ ಅಭಿನಯದ ಬ್ಲಾಕ್ ಬಸ್ಟರ್ 'ಭಜರಂಗಿ' ಚಿತ್ರ ಇದೇ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನಗೊಂಡಿತ್ತು.

English summary
One more theater closed screening in Majestic area. Triveni theater in S C Road, stopped screening. Shivaraj Kumar, Ramya starer ' Aaryan' was the last movie screened in this theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada