»   » ಹಲವು ವಿಶೇಷಗಳ ಸಂಗಮ 'ದಕ್ಷ' ನೋಡಲು ರೆಡಿಯಾಗಿ

ಹಲವು ವಿಶೇಷಗಳ ಸಂಗಮ 'ದಕ್ಷ' ನೋಡಲು ರೆಡಿಯಾಗಿ

Posted By:
Subscribe to Filmibeat Kannada

ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಜನುಮದಿನವಾದ ಏಪ್ರಿಲ್ 24ರಂದು ರಾಜ್ಯದಾದ್ಯಂತ 'ದಕ್ಷ' ಸಿನಿಮಾ ಬಿಡುಗಡೆಯಾಗಲಿದೆ. ಶ್ರೀಮತಿ ಭಾಗ್ಯವತಿ ಅರ್ಪಿಸುವ, ಚೆಲುವಾಂಬಿಕ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಕಲಾ ಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿಬಂದು ಗಿನ್ನಿಸ್ ದಾಖಲೆಗೂ ಸೇರ್ಪಡೆಯಾಗಲಿದೆ. ಒಟ್ಟಾರೆಯಾಗಿ 'ದಕ್ಷ' ಚಿತ್ರ ವಿಶ್ವ ಚಿತ್ರ ರಂಗದಲ್ಲೇ ಒಂದು ದಾಖಲೆ.

2 ಘಂಟೆ 22 ನಿಮಿಷದ ಈ ಸಿನಿಮಾ ಒಂದೇ ಟೇಕ್ ನಲ್ಲಿ, ರಾತ್ರಿ 9.10 ರಿಂದ 11.30 (ಏಪ್ರಿಲ್ 17, 2014) ಸಮಯದಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದೆ. ಛಾಯಾಗ್ರಾಹಕ ರೇಣುಕುಮಾರ್. ಸಾಹಸ ನಿರ್ದೇಶಕ ಕೆ ಡಿ ವೆಂಕಟೇಶ್ ಅವರು 40ಕ್ಕೂ ಹೆಚ್ಚು ತಂಡದೊಂದಿಗೆ ಚಿತ್ರೀಕರಣ ಮಾಡಿದ್ದಾರೆ.

One Shot Film Daksha releases on 24th April

ಸಾಹಸದ ಜೊತೆಗೆ, ಮನಮಿಡಿಯುವ ಸನ್ನಿವೇಶಗಳು, ಖಡಕ್ ಡೈಲಾಗ್ ಗಳು, ಒಂದಷ್ಟು ಹಾಸ್ಯ, ಸಾಮಾಜಿಕ ಕಳಕಳಿ, ಸಮಾಜ ಘಾತುಕ ಸನ್ನಿವೇಶಗಳ ನಿಗ್ರಹ ಈ ಚಿತ್ರದ ಪ್ರಮುಖ ಅಂಶಗಳು. [ಕಲಾಸಾಮ್ರಾಟ್ 'ದಕ್ಷ' ಚಿತ್ರ ಗಿನ್ನಿಸ್ ದಾಖಲೆ ಮಾಡಿದ್ದೇಗೆ?]

ನಾಯಕ ದುನಿಯಾ ವಿಜಯ್ ಸೈನಿಕನ ಪಾತ್ರದಲ್ಲಿ, ಪಂಕಜ್ ನಾರಾಯಣ್, ನೇಹಾ ಪಾಟೀಲ್, ಸುಚೇಂದ್ರಪ್ರಸಾದ್, ರಂಗಾಯಣ ರಘು, ಶೋಭರಾಜ್, ಉದಯ್, ಅಭಿಜಿತ್, ಬುಲ್ಲೆಟ್ ಪ್ರಾಕಾಶ್, ಪದ್ಮಜಾ ರಾವ್ ತಾರಾಗಣದಲ್ಲಿ ಇದ್ದಾರೆ.

One Shot Film Daksha releases on 24th April

ಮಾಲೂರ್ ಶ್ರೀನಿವಾಸ್ ಅವರು ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ನಿರ್ದೇಶನ ಎಸ್ ನಾರಾಯಣ್ ಅವರದು. ಇದೇ ಶುಕ್ರವಾರ (ಏ.24) ಚಿತ್ರ ತೆರೆಕಾಣುತ್ತಿದೆ ನೋಡಲು ರೆಡಿಯಾಗಿ. (ಫಿಲ್ಮಿಬೀಟ್ ಕನ್ನಡ)

English summary
S Narayan's one shot film 'Daksha' slated for release on 24th April. Duniya Vijay and Pankaj Narayan lead shooting is taking place at a private house in Hebbal from 7 pm to 9.20 pm on 17th of April - Thursday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada