»   » ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ ಕನ್ನಡದ ಒನ್‌, ಟು, ಥ್ರೀ..

ಏಪ್ರಿಲ್‌ನಲ್ಲಿ ತೆರೆಗೆ ಬರಲಿದೆ ಕನ್ನಡದ ಒನ್‌, ಟು, ಥ್ರೀ..

Posted By: Super Admin
Subscribe to Filmibeat Kannada

ಭಾರೀ ತಾರಾಗಣವಿದ್ದರೂ, ಹೆಚ್ಚಾಗಿ ಸುದ್ದಿ ಮಾಡದ, 'ಒನ್‌ಟುಥ್ರೀ" ಏಪ್ರಿಲ್‌ ತಿಂಗಳಿನಲ್ಲಿ ಸದ್ದುಗದ್ದಲವಿಲ್ಲದೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದಕ್ಕಾಗಿ ಭರದ ಸಿದ್ಧತೆಗಳೂ ಸಾಗಿವೆ.

ನೃತ್ಯ ಸಂಯೋಜನೆಯಲ್ಲಿ ಪ್ರಖ್ಯಾತರಾಗಿರುವ ಮೂಗೂರು ಸುಂದರ್‌ ಅವರ ಪುತ್ರರಾದ ಪ್ರಭುದೇವ್‌, ರಾಜು ಸುಂದರಂ ಹಾಗೂ ಪ್ರಸಾದ್‌ ಅವರ ಜೊತೆ 'ನಾಗರಹಾವು" ಚಿತ್ರದಲ್ಲಿ ನಟಿಸುತ್ತಿರುವ ತಮಿಳಿನ ನಂ.1 ನಾಯಕಿ ಜ್ಯೋತಿಕಾ ಕೂಡ ಇದ್ದಾರೆ.

ಇಷ್ಟು ಭಾರೀ ತಾರಾಗಣವಿದ್ದರೂ, ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ 123, ಹೆಚ್ಚಾಗಿ ಸುದ್ದಿ ಮಾಡಲಿಲ್ಲ ಎಂಬುದು ವಿಶೇಷ. ಈಗ ಏಕಾಏಕಿ '123" ತೆರೆಗೆ ಬರಲು ತವಕಿಸುತ್ತಿದೆ. ಈ ಚಿತ್ರವನ್ನು ಸಿದ್ದೇಶ್‌ ಫಿಲಂಸ್‌ ಬ್ಯಾನರ್‌ನಲ್ಲಿ ಬಿ. ಕುಮಾರ್‌ ನಿರ್ಮಿಸುತ್ತಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದಿರುವ ಆಕಾಶ್‌ ಆಡಿಯೋ ಈ ಚಿತ್ರದ ಧ್ವನಿಸುರುಳಿಯನ್ನು ವೈಭವದ ಹಾಗೂ ವಿಭಿನ್ನ ರೀತಿಯ ಸಮಾರಂಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಅಂದಹಾಗೆ ಈ ಚಿತ್ರವನ್ನು ಸುಭಾಷ್‌ ನಿರ್ದೇಶಿಸುತ್ತಿದ್ದು, ಮೂಗೂರು ಸುಂದರ್‌ ನೃತ್ಯ ಸಂಯೋಜಿಸಿದ್ದಾರೆ. ಕೆ. ಕಲ್ಯಾಣ್‌ ಸಾಹಿತ್ಯ, ದೇವಾ ಸಂಗೀತ, ವೈ.ಎನ್‌. ಮುರುಳಿ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರೀಕರಣಕ್ಕಾಗಿ ಈ ಚಿತ್ರತಂಡ ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ವಿದೇಶಗಳನ್ನೂ ಸುತ್ತಿ ಬಂದಿದೆ.

ವಾರ್ತಾ ಸಂಚಯ
ಮಲೇಷಿಯಾಕ್ಕೆ ಮೂಗೂರು ಸುಂದರಂ ಸಂಸಾರದ'ಮನಸ್ಸೆಲ್ಲಾ ನೀನೇ

;
;

ಮುಖಪುಟ / ಸ್ಯಾಂಡಲ್‌ವುಡ್‌

;

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada