»   » ಒಂದು ವರ್ಷ ತುಂಬಿದ 'ರಾಜಕುಮಾರ'ನ ದಾಖಲೆಗಳ ಪಟ್ಟಿ

ಒಂದು ವರ್ಷ ತುಂಬಿದ 'ರಾಜಕುಮಾರ'ನ ದಾಖಲೆಗಳ ಪಟ್ಟಿ

Posted By:
Subscribe to Filmibeat Kannada
ಒಂದು ವರ್ಷ ತುಂಬಿದ 'ರಾಜಕುಮಾರ'ನ ದಾಖಲೆಗಳ ಪಟ್ಟಿ | Filmibeat Kannada

ಇವತ್ತು ಮಾರ್ಚ್ 24. ಕಳೆದ ವರ್ಷದ ಇದೇ ದಿನ ಕನ್ನಡ ಚಿತ್ರರಂಗದಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿತ್ತು. ಅದು ಪ್ರತಿ ವಾರ ಬರುವ ಮಾಮುಲಿ ಸಿನಿಮಾ ಅಲ್ಲ. ಕನ್ನಡ ಚಿತ್ರಪ್ರೇಮಿಗಳ ಮನದಲ್ಲಿ ಸ್ಥಾನ ಪಡೆದ 'ರಾಜಕುಮಾರ' ಸಿನಿಮಾ. ಹೌದು, ಪುನೀತ್ ರಾಜ್ ಕುಮಾರ್ ಅಭಿನಯದ ಬ್ಲಾಕ್ ಬಾಕ್ಟರ್ ಸಿನಿಮಾ 'ರಾಜಕುಮಾರ' ಚಿತ್ರಕ್ಕೆ ಈಗ ವರ್ಷದ ಸಂಭ್ರಮ.

'ರಾಜಕುಮಾರ' ಸಿನಿಮಾ ಪುನೀತ್ ರಾಜ್ ಕುಮಾರ್ ಕೆರಿಯರ್ ನಲ್ಲಿಯೇ ಒಂದು ಮೈಲಿಗಲ್ಲು ಸಿನಿಮಾ. ಸಿನಿಮಾದ ಟೈಟಲ್ ನಿಂದ ಹಿಡಿದು ಚಿತ್ರದ ಎಲ್ಲ ಅಂಶಗಳು ಸಹ ಪುನೀತ್ ಅವರಿಗೆ ಬಹಳ ಹತ್ತಿರವಾಗಿವೆ. ಇನ್ನು 'ರಾಜಕುಮಾರ' ಸಿನಿಮಾದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಎರಡನೇ ಸಿನಿಮಾವಾಗಿತ್ತು. ಜೊತೆಗೆ ನಟಿ ಪ್ರಿಯಾ ಆನಂದ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿತ್ತು. ಹೊಂಬಾಳೆ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು.

ಒಂದು ಒಳ್ಳೆಯ ಕೌಟುಂಬಿಕ ಸಿನಿಮಾವಾಗಿದ್ದ 'ರಾಜಕುಮಾರ' ಎಲ್ಲ ವರ್ಗದ ಪ್ರೇಕ್ಷಕರ ಮನ ಗೆದ್ದಿತ್ತು. ಎಷ್ಟೊ ವರ್ಷಗಳು ಚಿತ್ರಮಂದಿರದ ಮುಖವೇ ನೋಡಿದ ಮಹಿಳಾ ಪ್ರೇಕ್ಷಕರನ್ನು ಮತ್ತೆ ಥಿಯೇಟರ್ ನತ್ತ ಬರುವಂತೆ ಮಾಡಿದ ಖ್ಯಾತಿ ಈ ಚಿತ್ರಕ್ಕೆ ಇದೆ. ಇನ್ನು ಸೆಂಚುರಿ ಸರದಾರ 'ರಾಜಕುಮಾರ'ನ ಖಾತೆಯಲ್ಲಿರುವ ಪ್ರಮುಖ ದಾಖಲೆಗಳು ಮುಂದಿದೆ ಓದಿ..

ಒಂದು ವಾರದಲ್ಲಿ 6000 ಪ್ರದರ್ಶನ

'ರಾಜಕುಮಾರ' ಸಿನಿಮಾ ರಿಲೀಸ್ ಆದ ಆರು ವಾರಗಳಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ 6000 ಪ್ರದರ್ಶನ ಕಂಡಿದೆ. ಅಂದರೆ ಒಂದು ವಾರಕ್ಕೆ ಸಿನಿಮಾದ ಸಾವಿರ ಶೋ ಮಲ್ಟಿಪ್ಲೆಕ್ಸ್ ನಲ್ಲಿ ನಡೆದಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಆರು ವಾರದಲ್ಲಿ ಈ ಮಟ್ಟದ ಪ್ರದರ್ಶನದ ಕಂಡ ಮೊದಲ ಕನ್ನಡ ಸಿನಿಮಾ ಇದಾಗಿದೆ.

45-50 ಸೆಂಟರ್ ಗಳಲ್ಲಿ 100 ಡೇಸ್

ಕರ್ನಾಟಕದಲ್ಲಿರುವ ಸಿಂಗಲ್ ಸ್ಕ್ರೀನ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ 45-50 ಸೆಂಟರ್ ಗಳಲ್ಲಿ ಅಪ್ಪು ಸೆಂಚುರಿ ಬಾರಿಸಿದ್ದಾರೆ. ಇಂದಿನ ಕಾಲದಲ್ಲಿ ಸಿನಿಮಾಗಳು 25 ದಿನ, 50 ದಿನ ಓಡುವುದೇ ದೊಡ್ಡ ಮಾತು. ಆದರೆ 'ರಾಜಕುಮಾರ' ಸಿನಿಮಾ ಇಂತಹ ಪರಿಸ್ಥಿತಿಯಲ್ಲಿ ನೂರು ದಿನ ಚಿತಮಂದಿರದಲ್ಲಿ ಇತ್ತು.

75 ಕೋಟಿ ಕಲೆಕ್ಷನ್

'ರಾಜಕುಮಾರ' ಸಿನಿಮಾ ಕಳೆದ ವರ್ಷಕ್ಕೆ ಮಾತ್ರ ಸೀಮಿತವಾದ ಹಿಟ್ ಸಿನಿಮಾವಲ್ಲ. ಅದು ಇಡೀ ಕನ್ನಡ ಚಿತ್ರರಂಗದಲ್ಲಿಯೇ ಒಂದು ದೊಡ್ಡ ಮೈಲಿಗಲ್ಲು ಸೃಷ್ಟಿ ಮಾಡಿದ ಸಿನಿಮಾ. ಯಾಕಂದ್ರೆ, ಈ ಸಿನಿಮಾ ಬರೋಬ್ಬರಿ 75 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಈ ಮೂಲಕ ಈ ಸಿನಿಮಾ ಕನ್ನಡದ ಮಟ್ಟಿಗೆ ಅತಿ ಹೆಚ್ಚು ಗಳಿಕೆ ಮಾಡಿದ ಅಗ್ರ ಚಿತ್ರವಾಗಿದೆ.

'ಗೊಂಬೆ ಹೇಳುತೈತೆ' ಹಾಡು

'ರಾಜಕುಮಾರ' ಸಿನಿಮಾ ಎಂದ ತಕ್ಷಣ ಮೊದಲು ನೆನಪಾಗುವುದು 'ಗೊಂಬೆ ಹೇಳುತೈತೆ' ಹಾಡು. ಈ ಹಾಡು ಕನ್ನಡಿಗರ ಮನದಲ್ಲಿ ಬೆರೆತು ಹೋಗಿದೆ. ಇನ್ನು 'ಗೊಂಬೆ ಹೇಳುತೈತೆ' ಹಾಡು ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಕೇಳಿರುವ ಕನ್ನಡ ಹಾಡುಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಈ ಹಾಡಿಗೆ ಹರಿಕೃಷ್ಣ ಸಂಗೀತ, ಸಂತೋಷ್ ಆನಂದ್ ರಾಮ್ ಸಾಹಿತ್ಯ ಮತ್ತು ವಿಜಯ ಪ್ರಕಾಶ್ ಧ್ವನಿ ಇದೆ.

7577 ಪ್ರದರ್ಶನ

ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ಗಳಲ್ಲಿ ಸರಿಯಾಗಿ ಸ್ಕ್ರೀನ್ಸ್ ಗಳನ್ನು ನೀಡುವುದಿಲ್ಲ ಎನ್ನುವ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಆದರೆ 'ರಾಜಕುಮಾರ' ಸಿನಿಮಾ 87 ದಿನಗಳಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ 7577 ಪ್ರದರ್ಶನ ಕಂಡಿದೆ.

ಟಿವಿ ರೈಟ್ಸ್ ಮತ್ತು ಟಿ ಆರ್ ಪಿ

'ರಾಜಕುಮಾರ' ಚಿತ್ರದ ಟಿವಿ ರೈಟ್ಸ್ ಕೂಡ ದೊಡ್ಡ ಮೊತ್ತಕ್ಕೆ ಸೇಲ್ ಆಯ್ತು. ಉಳಿದಂತೆ, 'ದೊಡ್ಮೆನೆ ಹುಡ್ಗ', 'ಕಿರಿಕ್ ಪಾರ್ಟಿ', 'ಚಕ್ರವರ್ತಿ', 'ಮಾಸ್ಟರ್ ಪೀಸ್' ಸಿನಿಮಾಗಳ ಜೊತೆಗೆ 'ರಾಜಕುಮಾರ' ಕಿರುತೆರೆಯಲ್ಲಿ ಅತಿ ಹೆಚ್ಚು ಟಿ ಆರ್ ಪಿ ಪಡೆದ ಪ್ರಮುಖ ಸಿನಿಮಾವಾಗಿದೆ.

ಮತ್ತೆ ಒಂದಾದ 'ರಾಜಕುಮಾರ' ತಂಡ

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತೆ ಪುನೀತ್ ರಾಜ್ ಕುಮಾರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಸಹ ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ. ಈ ಮೂಲಕ ದೊಡ್ಡ ಯಶಸ್ಸಿನ ನಂತರ ಮತ್ತೆ 'ರಾಜಕುಮಾರ' ತಂಡ ಒಂದಾಗಿದೆ.

English summary
One year for Puneeth Rajkumar Starrer 'Raajakumara' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X