For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನ ಹೊಸ ಕೋಲ್ಮಿಂಚು ಫಿಲ್ಮಿಬೀಟ್

  By Rajendra
  |

  ಭಾರತದ ನಂ.1 ಪ್ರಾದೇಶಿಕ ಭಾಷಾ ಪೋರ್ಟಲ್ ಒನ್ಇಂಡಿಯಾ ತನ್ನ ಓದುಗರ ಸುದ್ದಿಯ ದಾಹವನ್ನು ನಿರಂತರ ತಣಿಸುತ್ತಾ ಹೊಸತನದೊಂದಿಗೆ ಹೆಜ್ಜೆ ಹಾಕುತ್ತಲೇ ಬಂದಿದೆ. ಇದೀಗ ಇನ್ನೊಂದು ಹೊಸತನ್ನು ಓದುಗರ ಮಡಿಲಿಗೆ ಇಡುತ್ತಿದೆ.

  ಸ್ಯಾಂಡಲ್ ವುಡ್ ಲೋಕದಲ್ಲಿ ಹೊಸ ಮಿಂಚಿನ ಸಂಚಲನ ಮೂಡಿಸಲು ನೂತನ ಜಾಲತಾಣ ಫಿಲ್ಮಿಬೀಟ್.ಕಾಮ್ ಆರಂಭಿಸಿದೆ. ಪೋರ್ಟಲ್ ಲೋಕದಲ್ಲಿ ಸದಾ ಮುಂಚೂಣಿಯಲ್ಲಿರುವ ಒನ್ಇಂಡಿಯಾದ ಈ ವಿನೂತನ ವೆಬ್ ಸೈಟ್ ತನ್ನ ಓದುಗರಿಗೆ ಸಮೃದ್ಧ ಅನುಭವ ಕೊಡುತ್ತದೆ ಎಂಬ ಅಖಂಡ ವಿಶ್ವಾಸ ನಮ್ಮೆಲ್ಲರದ್ದು.

  ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲಾ ಮಸಾಲೆ ಅಂಶಗಳನ್ನು ಓದುಗರು ಬೆರಳತುದಿಯಲ್ಲಿ ಸವಿಯಬಹುದು. ಸುದ್ದಿ, ನುಡಿಚಿತ್ರ, ಸಂದರ್ಶನ, ಕಲರ್ ಫುಲ್ ಚಿತ್ರಗಳ ಚಿತ್ತಾರ, ತಾರೆಗಳ ಮದುವೆ ಸಂಭ್ರಮ, ಸಂದರ್ಶನ, ಹಾಲಿವುಡ್, ಬಾಲಿವುಡ್, ಕಿರುತೆರೆ ಸುದ್ದಿಗಳು ಓದುಗರಿಗೆ ಮನರಂಜನೆಯ ಮಹಾಪೂರವನ್ನೇ ಹರಿಸಲು ಸಿದ್ಧವಾಗಿದೆ.

  ಇಷ್ಟು ದಿನ ಒನ್ಇಂಡಿಯಾ ಕನ್ನಡದ ಅಂತರ್ಭಾಗವಾಗಿದ್ದ ಚಲನಚಿತ್ರ ವಿಭಾಗದ ಹೊಸ ಅಸ್ತಿತ್ವವೇ ಫಿಲ್ಮಿಬೀಟ್.ಕಾಮ್. ಕನ್ನಡ ಚಿತ್ರೋದ್ಯಮದಲ್ಲಿ ಇಂದು ನೂರಾರು ಕೋಟಿ ರುಪಾಯಿಗಳ ವಹಿವಾಟು ನಡೆಯುತ್ತಿದೆ. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಸ್ಯಾಂಡಲ್ ವುಡ್ ನಲ್ಲೂ ಭಾರಿ ಬಜೆಟ್ ಚಿತ್ರಗಳು ನಿರ್ಮಾಣವಾಗುತ್ತಿವೆ.

  ಇಂದು ಕನ್ನಡ ಚಿತ್ರರಂಗದ ವ್ಯಾಪ್ತಿ ಸಪ್ತಸಾಗರದಾಚೆಗೆ ವಿಸ್ತರಿಸಿದೆ. ಆಸ್ಟ್ರೇಲಿಯಾ, ಯೂರೋಪ್, ನಾರ್ತ್ ಅಮೆರಿಕಾ, ಸೌತ್ ಅಮೆರಿಕಾ ಖಂಡಗಳಿಗೆ ವಿಸ್ತರಿಸಿದೆ. ಅನಿವಾಸಿ ಕನ್ನಡಿಗರ ಮನರಂಜನೆ ಬಯಕೆಯನ್ನು ಕನ್ನಡ ಚಿತ್ರಗಳು ನೀಗಿಸುತ್ತಿವೆ. ಸಪ್ತಕೋಟಿ ಕನ್ನಡಿಗರು ಎಲ್ಲೇ ಇದ್ದರೂ ಅವರಿಗೆ ಮನರಂಜನೆ ಸುದ್ದಿಯನ್ನು ತಲುಪಿಸಲಿದೆ ಫಿಲ್ಮಿಬೀಟ್.ಕಾಮ್ ಜಾಲತಾಣ.

  ಚಂದನವನಕ್ಕೆ ಅಡಿಯಿಟ್ಟಿರುವ ಈ ಹೊಸ ಜಾಲತಾಣವನ್ನು ಬರಮಾಡಿಕೊಳ್ಳಿ. ವರ್ಷಕ್ಕೆ 100ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸುವ, 600ಕ್ಕೂ ಹೆಚ್ಚು ಚಿತ್ರಮಂದಿರಗಳನ್ನು ಹೊಂದಿರುವ ಖ್ಯಾತಿ ಕನ್ನಡ ಚಿತ್ರೋದ್ಯಮದ್ದು.

  ಕೋಟ್ಯಾಂತರ ಕೈಗಳಿಗೆ ಕೆಲಸ ಕೊಟ್ಟು ಅನ್ನದಾತನಾಗಿರುವ ಕನ್ನಡ ಚಿತ್ರರಂಗದ ತಾಜಾ ಸುದ್ದಿಗಳು ಇನ್ನು ಫಿಲ್ಮಿಬೀಟ್.ಕಾಮ್ ನಲ್ಲಿ ಲಭ್ಯವಾಗಲಿವೆ. ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ಹಾಗೂ ಗೂಗಲ್ ಪ್ಲಸ್ ತಾಣಗಳಲ್ಲೂ ಫಿಲ್ಮಿಬೀಟ್ ಸಕ್ರಿಯವಾಗಿದೆ. (ಫಿಲ್ಮಿಬೀಟ್ ಕನ್ನಡ)

  English summary
  Oneindia, India's #1 language portal has launched a new Sandalwood movies entertainment portal 'kannada.filmibeat.com'. It provides latest Sandalwood movie news, Kannada movie reviews, celebrity news,Trailers and Promos in Kannada at kannada.filmibeat.com.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X